ನಾವು ದಿನ ಕಳೆದಂತೆ ಹೊಸ ಹೊಸ ಆವಿಷ್ಕಾರಗಳನ್ನು ನೋಡುತ್ತೇವೆ. ಹೊಸ ತಂತ್ರಜ್ಞಾನವನ್ನು ಬೆಳೆಸುತ್ತಿದ್ದೇವೆ, ಬಳಸುತ್ತಿದ್ದೇವೆ. ನಮ್ಮ ದೇಶದಲ್ಲಿ ಹೈಡ್ರೋಜನ್ ಕಾರೊಂದು ಬಿಡುಗಡೆ ಆಗಿದೆ. ಆ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ನವದೆಹಲಿಯಲ್ಲಿ 5 ನಿಮಿಷ ಚಾರ್ಜ್‌ ಮಾಡಿದರೆ 600 ಕಿಲೊಮೀಟರ್ ಸಂಚರಿಸುವ ಹೈಡ್ರೋಜನ್‌ ಎಲೆಕ್ಟ್ರಿಕ್‌ ಕಾರು ದೇಶದಲ್ಲಿ ಬಿಡುಗಡೆಯಾಗಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ ಹೈಡ್ರೋಜನ್ ಆಧಾರಿತವಾದ ಸುಧಾರಿತ ಇಂಧನ ಕೋಶದ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ಟೊಯೊಟಾ ಮಿರಾಯ್‌ ಕಾರನ್ನು ಬಿಡುಗಡೆ ಮಾಡಿದ್ದಾರೆ. ಇದು ಭಾರತದಲ್ಲಿನ ಮೊದಲ ಯೋಜನೆಯಾಗಿದ್ದು ಅಲ್ಲದೆ ಈ ವೆಹಿಕಲ್ ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದೆ. ಈ ವೆಹಿಕಲ್ ನ ವಿಶೇಷತೆಯೆಂದರೆ ನೀರನ್ನು ಹೊರತುಪಡಿಸಿ ಬೇರೆ ಯಾವುದೆ ಅನಿಲವನ್ನು ಹೊರಸೂಸುವುದಿಲ್ಲ ಎಂದು ಗಡ್ಕರಿ ತಿಳಿಸಿದರು. ಟೊಯೊಟಾ ಮಿರಾಯ್‌ ಕಾರು ಹೈಡ್ರೋಜನ್ ಫ್ಯೂಯಲ್ ಸೆಲ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು ಒಂದು ಬಾರಿ ಚಾರ್ಜ್‌ ಮಾಡಿದರೆ 600 ಕಿಲೊಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಕೇವಲ 5 ನಿಮಿಷದಲ್ಲಿ ಬ್ಯಾಟರಿ ಚಾರ್ಜ್‌ ಆಗುತ್ತದೆ ಎಂದು ಈ ಕಾರನ್ನು ತಯಾರಿಸಿದ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ತಿಳಿಸಿದೆ. ಜಪಾನ್ ಭಾಷೆಯಲ್ಲಿ ‘ಮಿರೈ’ ಪದಕ್ಕೆ ʼಭವಿಷ್ಯʼ ಎಂಬ ಅರ್ಥವಿದೆ. ಈ ಕಾರಣಕ್ಕೆ ಕಾರಿಗೆ ಈ ಹೆಸರನ್ನೇ ಇಡಲಾಗಿದೆ. ಟೊಯೊಟಾ ಕಿರ್ಲೋಸ್ಕರ್ (ಟಿಕೆಎಂ) ಮತ್ತು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ಜಂಟಿಯಾಗಿ ಮಿರಾಯ್ ಅನ್ನು ದೇಶದಲ್ಲಿ ಪರೀಕ್ಷಿಸಲಿವೆ. ಭಾರತೀಯ ರಸ್ತೆಗಳು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಪ್ರಯೋಗವನ್ನು ಮಾಡಲಾಗುತ್ತದೆ.

ಈ ಹೊಸ ಹೈಡ್ರೋಜನ್ ಇಂಧನ ಆಧಾರಿತ ಕಾರು ಎಲೆಕ್ಟ್ರಿಕ್ ವೆಹಿಕಲ್ ಗಿಂತ ಹೆಚ್ಚಿನ ಡ್ರೈವ್ ಶ್ರೇಣಿಯನ್ನು ಹೊಂದಿದೆ. ಒಂದು ಎಲೆಕ್ಟ್ರಿಕ್‌ ಕಾರು ಚಾರ್ಜ್ ಮಾಡಲು 6-8 ಗಂಟೆಗಳನ್ನು ತೆಗೆದುಕೊಂಡರೆ ಹೈಡ್ರೋಜನ್ ಚಾಲಿತ ಕಾರಿನ ಬ್ಯಾಟರಿಯನ್ನು ಕೇವಲ 5 ನಿಮಿಷಗಳಲ್ಲಿ ಚಾರ್ಜ್‌ ಮಾಡಬಹುದು. ಎಲೆಕ್ಟ್ರಿಕ್ ಕಾರ್‌ನಲ್ಲಿನ ಲಿಥಿಯಂ ಬ್ಯಾಟರಿಯ ಸಾಮರ್ಥ್ಯವು ಕಾಲಾನಂತರದಲ್ಲಿ ಕ್ಷೀಣಿಸುತ್ತದೆ ಮತ್ತು ಬ್ಯಾಟರಿ ನಿಷ್ಕ್ರೀಯಗೊಂಡರೆ ದೊಡ್ಡ ಸಮಸ್ಯೆಯಾಗುತ್ತದೆ ಆದರೆ ಟೊಯೊಟಾದ ಮಿರಾಯ್‌ನಲ್ಲಿ ತುಂಬುತ್ತಿರುವ ಹೈಡ್ರೋಜನ್ ತಯಾರಿಸುವಾಗಲೂ ಮಾಲಿನ್ಯವನ್ನು ಉಂಟುಮಾಡುವುದಿಲ್ಲ. ಅದಕ್ಕಾಗಿಯೆ ಇದನ್ನು ಹಸಿರು ಹೈಡ್ರೋಜನ್ ಎಂದು ಕರೆಯಲಾಗುತ್ತದೆ.

ಈ ಕಾರು ಇಂಗಾಲವನ್ನು ಹೊರ ಸೂಸುವುದಿಲ್ಲ. ಹೀಗಾಗಿ ಮಾಲಿನ್ಯವಾಗುವುದಿಲ್ಲ. ಕೆಲವು ಹನಿ ನೀರು ಮಾತ್ರ ತ್ಯಾಜ್ಯವಾಗಿ ಹೊರ ಹೊಮ್ಮುತ್ತದೆ. ಟೊಯೊಟಾ 2014ರಲ್ಲಿ ಮಿರಾಯ್‌ ಕಾರನ್ನು ಬಿಡುಗಡೆ ಮಾಡಿತ್ತು. ಈಗ ಹಲವು ಅಪ್‌ಗ್ರೇಡ್‌ ಮಾಡಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನ ಬಗ್ಗೆ ತಿಳಿದಾಗ ಆಶ್ಚರ್ಯ ಎನಿಸುತ್ತದೆ ಹಾಗೆಯೆ ಹೊಸ ಆವಿಷ್ಕಾರ ನೋಡಿ ಹೆಮ್ಮೆ ಎನಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!