ಯಾರಾದರೂ ಈಗ ಚಿನ್ನ ಅಥವಾ ಬೆಳ್ಳಿಯ ಆಭರಗಳನ್ನು ಕೊಂಡುಕೊಳ್ಳಬೇಕು ಅಥವಾ ಹೂಡಿಕೆ ಮಾಡಬೇಕು ಅಂದುಕೊಂಡಿದ್ದರೆ ನಾವು ಮೊದಲಿಗೆ ಅದರ ಬೆಲೆಯನ್ನು ತಿಳಿದುಕೊಳ್ಳುವುದು ಕೂಡಾ ಅಷ್ಟೇ ಮುಖ್ಯ ಆಗಿರುತ್ತದೆ. ಹಾಗಾಗಿ ನಾವು ಈ ಲೇಖನದ ಮೂಲಕ ಚಿನ್ನ ಹಾಗೂ ಬೆಳ್ಳಿಯ ನಿಖರ ಬೆಲೆ ಎಷ್ಟು ಇದೆ ಎನ್ನುವುದನ್ನೂ ತಿಳಿದುಕೊಳ್ಳೋಣ.
ಇಲ್ಲಿ ನಾವು ಹಿಂದಿನ ದಿನದ ಚಿನ್ನ ಮತ್ತು ಬೆಳ್ಳಿಯ ದರವನ್ನು ಕೂಡಾ ಗಮನದಲ್ಲಿ ಇಟ್ಟುಕೊಂಡು ಇಂದು ಚಿನ್ನ ಮತ್ತು ಬೆಳ್ಳಿಯ ದರದಲ್ಲೀ ಎಷ್ಟು ಬದಲಾವಣೆ ಆಗಿದೆ ಎನ್ನುವುದನ್ನೂ ಕೂಡಾ ತಿಳಿದುಕೊಳ್ಳೋಣ. ಮೊದಲಿಗೆ ಇವತ್ತಿನ ಬೆಳ್ಳಿಯ ಬೆಲೆಯನ್ನು ನೋಡುವುದಾದರೆ ಹತ್ತು ಗ್ರಾಂ ಬೆಳ್ಳಿಯ ಬೆಲೆ 679 ರೂಪಾಯಿ ಹಾಗೂ ನೂರು ಗ್ರಾಂ ಬೆಳ್ಳಿಯ ಬೆಲೆ 6,790 ರೂಪಾಯಿ ಆಗಿದೆ. ಹಾಗೆಯೇ ಒಂದು ಕೆಜಿ ಬೆಳ್ಳಿಯ ಬೆಲೆ 67,000 ರೂಪಾಯಿ ಆಗಿದೆ. ನಿನ್ನೆಯೂ ಕೂಡಾ ಬೆಳ್ಳಿಯ ಬೆಲೆ 67,000 ರೂಪಾಯಿಯೆ ಆಗಿತ್ತು. ಇದನ್ನು ನೋಡಿದಾಗ ನಾವು ಗಮನಿಸಬೇಕಾದ ಅಂಶ ಎಂದರೆ ಈ ಎರಡೂ ದಿನಗಳಲ್ಲಿ ಬೆಳ್ಳಿಯ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ ಎನ್ನುವುದನ್ನು ನಾವು ತಿಳಿಯಬಹುದು.
ಇನ್ನು ಚಿನ್ನದ ಬೆಲೆಯನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನದ ಪ್ರತೀ ಗ್ರಾಂ ನ ಬೆಲೆ 4,913 ರೂಪಾಯಿ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆ 49,130 ರೂಪಾಯಿ ಆಗಿದೇ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದಾಗ 22 ಕ್ಯಾರೆಟ್ ಚಿನ್ನದ ಬೆಲೆ ಮೂವತ್ತು ರೂಪಾಯಿ ಅಷ್ಟು ಹೆಚ್ಚಾಗಿದೆ. ಇನ್ನು ಇವತ್ತಿನ 24 ಕ್ಯಾರೆಟ್ ನ ಪರಿಶುದ್ಧವಾದ ಚಿನ್ನದ ಬೆಲೆ ಎಷ್ಟು ಅಂತ ನೋಡುವುದಾದರೆ, ಒಂದು ಗ್ರಾಂ ಚಿನ್ನದ ಬೆಲೆ 5,357 ರೂಪಾಯಿ ಇದೆ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆ 53,570 ರೂಪಾಯಿ ಆಗಿದೆ. ಇದೇ 24 ಕ್ಯಾರೆಟ್ ನ ಪರಿಶುದ್ಧವಾದ ಚಿನ್ನದ ಬೆಲೆ ನಿನ್ನೆ 53,560 ರೂಪಾಯಿ ಇದ್ದಿತ್ತು. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದರೆ ಹತ್ತು ರೂಪಾಯಿ ಏರಿಕೆ ಕಂಡಿದೆ. ಒಟ್ಟಾರೆಯಾಗಿ ನಾವು ನೋಡುವುದಾದರೆ ಒಂದೆರಡು ದಿನಗಳಲ್ಲಿ ಚಿನ್ನ ಬೆಳ್ಳಿಯ ದರಗಳಲ್ಲಿ ಅಷ್ಟೊಂದು ವ್ಯತ್ಯಾಸ ಕಾಣುವಂತಹ ಏರಿಕೆ ಅಥವಾ ಇಳಿಕೆ ಏನೂ ಆಗಿಲ್ಲ.
ಚಿನ್ನ ಬೆಳ್ಳಿಯ ಹಾಗೆಯೇ ಇವತ್ತಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು ಅಂತ ನೋಡುವುದಾದರೆ, ಒಂದು ಲೀಟರ್ ಪೆಟ್ರೋಲ್ ಬೆಲೆ 83.78 ರೂಪಾಯಿ ಹಾಗೂ ಡೀಸೆಲ್ ಬೆಲೆ 76.2 ರೂಪಾಯಿ ಇದೆ. LPG ಗ್ಯಾಸ್ ದರ 600 ರೂಪಾಯಿ ಇದ್ದು, ಇದರ ಹಾಗೆಯೇ ಆಟೋ ಗ್ಯಾಸ್ ನ ದರ ಪ್ರತೀ ಕೆಜಿ ಗೆ 35.94 ರೂಪಾಯಿ ಇದೆ .