Hindu Worship: ಯಾವ ಯಾವ ರಾಶಿಯವರು ಯಾವ ಯಾವ ದೈವದ ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ ಮೊದಲನೆಯದಾಗಿ ಮೇಷ ರಾಶಿ. ಮೇಷ ರಾಶಿಯವರು ಪ್ರೀತಿ ಹಾಗು ವಿದ್ಯಾಭ್ಯಾಸದಲ್ಲಿ ವೃದ್ಧಿ ಆಗಬೇಕೆಂದರೆ ಸರಸ್ವತಿಯ ಆರಾಧನೆಯನ್ನು ಮಾಡಬೇಕಾಗುತ್ತದೆ. ಹಣದಲ್ಲಿ ವೃದ್ಧಿ ಆಗಬೇಕೆಂದರೆ ನೀವು ಸೂರ್ಯದೇವನನ್ನು ಆರಾಧನೆ ಮಾಡಬೇಕು.
ಎರಡನೆಯದಾಗಿ ವೃಷಭ ರಾಶಿ.
ವೃಷಭ ರಾಶಿ:
ಶುಕ್ರ ವೃಷಭ ರಾಶಿ ಅಧಿಪತಿಯಾಗಿದ್ದಾನೆ. ಇದು ಭೂತತ್ವ ರಾಶಿ ಇದರ ಬಣ್ಣ ಬಿಳಿ ಸರಸ್ವತಿ ದೇವಿಯನ್ನ ಇಷ್ಟ ದೇವತೆಯಾಗಿ ಪೂಜಿಸಿದರೆ ಹೆಚ್ಚು ಫಲವನ್ನು ಪಡೆಯುತ್ತೀರಿ. ವೃಷಭ ರಾಶಿಯವರು ಸರಸ್ವತಿ ಗಣೇಶ ಕಾಳಿ ದೇವರು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ.
ಮಿಥುನ ರಾಶಿ
ಮಿಥುನ ರಾಶಿ ಅಧಿಪತಿ ಬುಧ. ಮಿಥುನ ರಾಶಿಯವರು ಬನಶಂಕರಿ ದೇವಿಯನ್ನು ಆರಾಧಿಸಿದರೆ ನಿಮಗೆ ಒಳ್ಳೆಯದಾಗುತ್ತದೆ. ವೆಂಕಟೇಶ್ವರ ಸ್ವಾಮಿಯನ್ನು ಪೂಜೆ ಮಾಡುವುದರಿಂದ ಶಾಂತಿ ಹಾಗೂ ನೆಮ್ಮದಿ ವೃದ್ಧಿಯಾಗುತ್ತದೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರು ಹನುಮಾನ್ ಚಾಲೀಸ್ ಓದಬೇಕು ಇದರಿಂದ ಧೈರ್ಯ ಹೆಚ್ಚಾಗುತ್ತದೆ. ಆಂಜನೇಯನನ್ನು ಆರಾಧನೆ ಮಾಡುವುದು ಒಳ್ಳೆಯದು. ಇನ್ನು ಅದೃಷ್ಟ ಹಾಗೂ ಸಂಪತ್ತನ್ನು ವೃದ್ಧಿಸಿಕೊಳ್ಳಲು ಶ್ರೀ ಕೃಷ್ಣ ನೆನೆಯಬೇಕು.
ಸಿಂಹ ರಾಶಿ
ಸಿಂಹ ರಾಶಿಯ ಆಡಳಿತ ಗ್ರಹ ಸೂರ್ಯ. ಸಿಂಹ ರಾಶಿಯವರಿಗೆ ಶಿವನ ಆರಾಧನೆ ಮಾಡಬೇಕು ಬೇಡಿದ್ದನ್ನು ಅತಿ ಶೀಘ್ರವಾಗಿ ನೀಡುವ ದೇವನೆಂದರೆ ಅದು ಶಿವ. ಶಿವನ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಸೇವೆ ಮತ್ತು ಅಭಿಷೇಕ ಮಾಡಿಸುವುದು ಉತ್ತಮ. ನಂತರದಲ್ಲಿ ಬರುವುದು ಕನ್ಯಾ ರಾಶಿ: ಕನ್ಯಾ ರಾಶಿಯವರು ದುಷ್ಟ ಶಕ್ತಿಯಿಂದ ದೂರವಿರಬೇಕೆಂದರೆ ನಾರಾಯಣ ದೇವರನ್ನು ಪೂಜಿಸಿ.
ತುಲಾ ರಾಶಿ :
ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಇದು ವಾಯು ತತ್ವ ರಾಶಿ ಹಾಗೂ ತುಲಾ ರಾಶಿಯವರು ಶಿವ ಪಾರ್ವತಿಯನ್ನು ಪೂಜಿಸುವುದರಿಂದ ಒಳ್ಳೆಯದಾಗುತ್ತದೆ. ಶುಕ್ರವಾರವನ್ನು ಇಷ್ಟವಾದ ವಾರವನ್ನು ಮಾಡಿಕೊಂಡಿರೆ ಒಳ್ಳೆಯ ಫಲ ಸಿಗುತ್ತದೆ. ಹಾಗೂ ಮುಂದಿನ ರಾಶಿ ವೃಶ್ಚಿಕ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಅಧಿಪತಿ ಕುಜ, ಇದು ಜಲತತ್ವ ರಾಶಿ. ಕೆಂಪು ಬಣ್ಣ ಬಹಳ ಪ್ರಿಯವಾದದ್ದು ಮತ್ತು ಗಣೇಶ ಹಾಗೂ ಹನುಮಂತನನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ. ಸುಬ್ರಹ್ಮಣ್ಯ ಇಷ್ಟು ದೇವರಾಗಿ ಪೂಜಿಸಿ.
ಧನುರ್ ರಾಶಿ : ಧನುಷ್ ರಾಶಿ ಗುರು ಗ್ರಹ ಅಧಿಪತಿ ಹಾಗೂ ಇದು ಅಗ್ನಿ ತತ್ವ ರಾಶಿ. ಮಹಾ ವಿಷ್ಣುಗೆ ಬಹಳ ಪ್ರಿಯವಾದ ಬಣ್ಣ ಹಳದಿ ಹಾಗಾಗಿ ವಿಷ್ಣು ಅಥವಾ ವಿಷ್ಣು ಪ್ರಭ ರಾಶಿ. ಮಕರ ರಾಶಿ :ಮಕರ ರಾಶಿ ಅಧಿಪತಿ ಶನಿ. ಇದು ಭೂತತ್ವ ರಾಶಿಯಾಗಿದ್ದು ಶ್ರೀ ಕೃಷ್ಣನನ್ನು ಆರಾಧಿಸಬೇಕು. ವಿದ್ಯಾಭ್ಯಾಸವನ್ನು ವೃದ್ಧಿಗೊಳಿಸಲು ಸರಸ್ವತಿ ದೇವಿಯನ್ನು ಆರಾಧನೆ ಮಾಡಿ ಹಾಗೂ ಪುಸ್ತಕವನ್ನು ಗೌರವಿಸಿ.
ಕುಂಭ ರಾಶಿ :
ಕುಂಭ ರಾಶಿಯ ಅಧಿಪತಿ ಶನಿ ಹಾಗೂ ಇದು ವಾಯು ತತ್ವ ರಾಶಿ. ಆಂಜನೇಯ ಮತ್ತು ವೆಂಕಟೇಶ್ವರ ಸ್ವಾಮಿ ಆರಾಧನೆ ಮಾಡುವುದು ಒಳ್ಳೆಯದು.
ಮೀನ ರಾಶಿ:
ಕೊನೆಯದಾಗಿ ಮೀನ ರಾಶಿಯವರು ತಮ್ಮ ಕಷ್ಟ ನಿವಾರಿಸಿಕೊಳ್ಳಲು ಹಾಗೂ ಸುಖ ಶಾಂತಿಯಿಂದ ಜೀವಿಸಲು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು ಲಕ್ಷ್ಮೀದೇವಿಯನ್ನ ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುವುದರ ಜೊತೆಗೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.