Taurus Men ವೃಷಭ ರಾಶಿಯ ಪುರುಷ, ಮಹಿಳೆ, ಮಕ್ಕಳು ಹೀಗೆ ಮೂರು ವರ್ಗದಲ್ಲೂ ರಾಶಿಯ ಗುಣ ಅವರ ಜನ್ಮಜಾತ ಗುಣವಾಗಿರುತ್ತದೆ. ಆದರೆ ಇದು ಕಾಲಕ್ರಮೇಣ ಪರಿಸರಕ್ಕೆ ತಕ್ಕಂತೆ ಬದಲಾಗುತ್ತಾ ಹೋಗಬಹುದು. ಆದರೆ, ಮೂಲ ಸ್ವಭಾವ ಮಾತ್ರ ಇದ್ದೇ ಇರುತ್ತದೆ. ಕೆಲವೊಮ್ಮೆ ಮಾತ್ರ ಅದು ಗೌಣವಾಗುತ್ತದೆ. ವೃಷಭ (Taurus) ರಾಶಿಯ ಗುಣಾವಗುಣಗಳು ಇಲ್ಲಿವೆ.

ವೃಷಭ ರಾಶಿಯ ಪುರುಷ ಶಾಂತಚಿತ್ತದ ಸಮಾಧಾನದ ವಿನಯ ಶೀಲ ವ್ಯಕ್ತಿಯಾಗಿರುತ್ತಾನೆ. ಅಷ್ಟೇ ಪ್ರಾಕ್ಟಿಕಲ್ ಕೂಡಾ. ಇವರು ಮೊದಲ ನೋಟದಲ್ಲೇ ಪ್ರೇಮಕ್ಕೆ ಬಿದ್ದುಬಿಡುವಂಥವರಲ್ಲ. ತನಗೆ ಪರಿಚಯವಾದವರು ಎಂಥವರು ಎಂದು ತಿಳಿದ ಮೇಲಷ್ಟೇ ಇವರು ಅವರೊಂದಿಗೆ ಸ್ನೇಹ ಹೊಂದುತ್ತಾರೆ. ಸಂಗಾತಿಯ ವಿಷಯದಲ್ಲೂ ಅಷ್ಟೆ. ಜೀವನಪೂರ್ತಿ ತನ್ನ ಜತೆ ನೆಮ್ಮದಿಯಿಂದ ಬಾಳುತ್ತಾಳೋ ಎಂದು ಅಳೆದು ತೂಗಿ ಒಪ್ಪುತ್ತಾರೆ. ಆದರೆ ತನಗೆ ಈ ಹುಡುಗಿ ಸೂಕ್ತ ಎಂದು ಒಮ್ಮೆ ನಿರ್ಧರಿಸಿದರೆ ಮತ್ತೆ ಇವರು ಹಿಂದೆ ಸರಿಯುವ ಮನಸ್ಥಿತಿಯವರಲ್ಲ.

ಇದನ್ನೂ ಓದಿ..ಶನಿ ಗೋಚಾರಫಲ: ಮೀನಾ ರಾಶಿಯವರಿಗೆ ಕಷ್ಟಗಳು ದೂರವಾಗುವ ಸಮಯ ಬಂದಿದೆ ಆದ್ರೆ..

ಈ ರಾಶಿಯ ಪುರುಷರು ತುಂಬ ರೊಮ್ಯಾಂಟಿಕ್. ಸಂಗಾತಿಯನ್ನು ತುಂಬ ಇಷ್ಟಪಡುತ್ತಾರೆ. ಹೂವು ಕೊಡುತ್ತಾ, ಸಂಗಾತಿಗಾಗಿ ಪದ್ಯ ಬರೆಯುವ ಇವರು ಸಂಗಾತಿಯ ಬಗ್ಗೆ ಅತಿಯಾದ ಕಾಳಜಿಯನ್ನೂ ಹೊಂದಿರುತ್ತಾರೆ. ಅಲ್ಲದೆ ಇಂಥವರಿಗೆ ಗಂಡುಬೀರಿ ಹುಡುಗಿಯರೆಂದರೆ ಇಷ್ಟವಾಗುವುದಿಲ್ಲ. ಹುಡುಗಿಯರು ಹುಡುಗಿಯರಂತಿದ್ರೆ ಚಂದ ಎನ್ನುವ ಜಾಯಮಾನದವರು.

ಸಾರ್ವಜನಿಕವಾಗಿ ಅವರಿಗೆ ಮುಜುಗರವಾಗುವಂತೆ ಸಂಗಾತಿ ವರ್ತಿಸಿದರೆ ಇಂಥವರಿಗೆ ವಿಪರೀತ ಸಿಟ್ಟೂ ಬರುತ್ತದೆ. ಆದರೆ ಸಾರಿ ಕೇಳಿದರೆ ಕೂಲ್ ಆಗುತ್ತಾರೆ. ಅಷ್ಟೇ ಅಲ್ಲ ಇಂಥವರು ಅವರ ಮನೆ, ಕುಟುಂಬದ ವಿಷಯದಲ್ಲಿ ಇನ್ನೊಬ್ಬರು ತಲೆ ಹಾಕುವುದನ್ನು ಇಷ್ಟಪಡುವುದಿಲ್ಲ. ಆದರೆ ಸಂಗಾತಿಗೆ ಆಕೆಯದೇ ಆದ ಸ್ವಾತಂತ್ರ್ಯ ನೀಡುತ್ತಾರೆ, ಜತೆಗೆ ತಾವೂ ಬಯಸುತ್ತಾರೆ.

ವೃಷಭ ರಾಶಿಯ ಗಂಡನನ್ನು ಪಡೆದವರು ಆತನೊಂದಿಗೆ ಕೂಲ್ ಆಗಿಯೇ ಇದ್ದರೆ ಆತ ಆಕೆಗಾಗಿ ಏನು ಮಾಡಲೂ ಸಿದ್ಧನಿರುತ್ತಾನೆ. ಮನೆಯನ್ನು ಒಪ್ಪ ಓರಣವಾಗಿಟ್ಟರಷ್ಟೆ ಆತನಿಗೆ ಇಷ್ಟ. ಆದರೆ ಕಸದ ತೊಟ್ಟಿಯಂತಿದ್ದರೆ ಯಾವಾಗಲೂ ಟೀಕೆ ಮಾಡುತ್ತಾ ಇರುವುದೂ ಇಲ್ಲ. ತುಂಬ ತಾಳ್ಮೆಯಿರುವ ಇವರು ಮನೆಗೆ ತಾವೇ ಯಜಮಾನ ಎಂದುಕೊಳ್ಳುವವರು. ಆದರೆ, ಹೆಂಡತಿಯ ಮಾತಿಗೆ ಬೆಲೆಯನ್ನೂ ಕೊಡುವವರು.

ಇದನ್ನೂ ಓದಿ..30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ, ಇನ್ನು ಈ 4 ರಾಶಿಯವರ ಕಷ್ಟಗಳು ಕಳೆಯುತ್ತೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!