ಟಾಟಾ ಮೋಟರ್ಸ್ ಇದು ಟಾಟಾ ಸಮೂಹದ ಬಹುರಾಷ್ಟ್ರೀಯ ಸಾಗಾಣಿಕೆ ವಾಹನ ಮತ್ತು ಪ್ರಯಾಣಿಕರವಾಹನ ತಯಾರಿಕೆಯ ಸಂಸ್ಥೆ. ಈ ಸಂಸ್ಥೆ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ತನ್ನ ಉತ್ಪನ್ನಗಳನ್ನು ಹೊರತರುತ್ತದೆ. ಹಾಗಾಗಿ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಹಾಗಾಗಿ ಇದು ಭಾರತದ ಪ್ರಮುಖ ವಾಹನ ತಯಾರಿಕೆಯ ಕಂಪನಿಯಾಗಿದೆ. ಇದೀಗ ಟಾಟಾ ಮೋಟರ್ಸ್ ಟಿಯಾಗೋ ಮತ್ತು ಟಿಗೋರ್ ಸಿ ಎನ್ ಜಿ ಮಾದರಿಯ ವಾಹನವನ್ನು ಮಾರುಕಟ್ಟೆಗೆ ತಂದಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿರುವ ಕಾರುಗಳ ಮಾಡೆಲ್ ನಲ್ಲಿಯೇ ಗ್ಯಾಸ್ ಚಾಲಿತ ಕಾರುಗಳನ್ನು ಪರಿಚಯಿಸಿದ್ದು ಅದೇ ಮಾದರಿಯಲ್ಲಿ ಟಾಟಾ ಟಿಯಾಗೋ ಮತ್ತು ಟಿಗೋರ್ ಸಿ ಎನ್ ಜಿ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿದೆ.
ಗ್ರಾಹಕರ ನೆಚ್ಚಿನ ಕಾರುಗಳಾದ ಟಿಯಾಗೋ ಮತ್ತು ಟಿಗೋರ್ ಸಿ ಎನ್ ಜಿ ಯ ಮಾರುಕಟ್ಟೆಯ ಬೆಲೆ ಯಾವ ರೀತಿ ಆಗಿದೆ ಎಂಬುದನ್ನು ನೋಡುವುದಾದರೆ ಟಾಟಾ ಟಿಯಾಗೋ ಸಿ ಎನ್ ಜಿ ನ ಆರಂಭಿಕ ಎಕ್ಸ್ ಶೋರೂಮ್ ನ ಬೆಲೆ ಆರು.ಹತ್ತು ಲಕ್ಷ ರೂಪಾಯಿಗಳು ಇದರ ಟಾಪ್ ಮಾಡೆಲ್ ಬೆಲೆ ಏಳು.ಐವತ್ಮುರು ಲಕ್ಷಕ್ಕೆ ಎರುತ್ತದೆ. ಟಾಟಾ ಟಿಗೋರ್ ಸಿ ಎನ್ ಜಿ ನ ಆರಂಭಿಕ ಎಕ್ಸ್ ಶೋರೂಮ್ ನ ಬೆಲೆ ಏಳು. ಎಪ್ಪತ್ತು ಲಕ್ಷದಿಂದ ಇಂಟು.ಮುವತ್ತು ಲಕ್ಷದವರೆಗೆ ಇರಲಿದೆ. ಟಾಟಾ ಟಿಯಾಗೋ ಸಿ ಎನ್ ಜಿ ಯನ್ನು ನಾಲ್ಕು ರೂಪಾಂತರಗಳಲ್ಲಿ ಹಾಗೂ ಟಾಟಾ ಟಿಗೋರ್ ಸಿ ಎನ್ ಜಿ ಯನ್ನೂ ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ.
ಟಾಟಾ ಮೋಟಾರ್ಸ್ ಎರಡು ಹೊಸ ಕಾರುಗಳಿಗೆ ಸಿ ಎನ್ ಜಿ ತಂತ್ರಜ್ಞಾನವನ್ನು ನೀಡಿದ್ದು ಅವುಗಳ ತೂಕವು ಸ್ಟ್ಯಾಂಡರ್ಡ್ ಮಾಡೆಲ್ ಗೆ ಹೋಲಿಸಿದರೆ ನೂರು ಕೇಜಿ ಹೆಚ್ಚಿಗೆ ಬರುತ್ತದೆ. ಗ್ರೌಂಡ್ ಕ್ಲಿಯರೆನ್ಸ್ ವಿಷಯದಲ್ಲಿ ಎರಡು ಕಾರುಗಳು ಉತ್ತಮವಾಗಿದ್ದು ಅವುಗಳಿಗೆ ಕ್ರಮವಾಗಿ ನೂರಾ ಅರವತ್ತೆಂತು ಎಂಎಂ ಮತ್ತು ನೂರಾ ಅರವತ್ತೈದು ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಟಾಟಾ ಮೋಟರ್ಸ್ ಈ ಎರಡು ಕಾರುಗಳನ್ನು ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ಸಿ ಎನ್ ಜಿ ವಿಭಾಗ ಉತ್ತಮ ಬೆಳವಣಿಗೆಯನ್ನು ಕಾಣಲಿದೆ ಎನ್ನುವುದು ಸ್ಪಷ್ಟವಾಗಿದೆ. ಬೇಡಿಕೆ ಹೆಚ್ಚಾಗಲಿರುವುದಕ್ಕೆ ಅನುಗುಣವಾಗಿ ಎರಡು ಮಾದರಿಗಳ ಸಿ ಎನ್ ಜಿ ಅವತರಣಿಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಇಂಧನ ಬೆಲೆಯಿಂದಾಗಿ ಮಾರುಕಟ್ಟೆಯಲ್ಲಿ ಸಿ ಎನ್ ಜಿ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆ ಕಾರಣದಿಂದಾಗಿ ಟಾಟಾ ಟಿಗೋರ್ ಮತ್ತು ಟಾಟಾ ಟಿಯಾಗೋ ಸಿ ಎನ್ ಜಿ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದುಶೈಲೇಶ್ ಚಂದ್ರ ಅವರು ತಿಳಿಸಿದ್ದಾರೆ. ಎರಡು ವಾಹನಗಳಿಗೆ ಆಧುನಿಕ ನೋಜ್ಯಲ್ ನೀಡಲಾಗಿದೆ ಇದರಿಂದ ಸಿ ಎನ್ ಜಿ ವೇಗವಾಗಿ ತುಂಬುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೆ ಸಿ ಎನ್ ಜಿ ಯನ್ನು ತುಂಬುವ ವೇಳೆ ಕಾರಿನ ಇಂಜಿನ್ ಸ್ವಯಂ ಚಾಲಿತವಾಗಿ ಆಫ್ ಆಗುತ್ತದೆ ಇಂಧನವನ್ನು ತುಂಬುವ ವೇಳೆ ಇದು ಕಾರನ್ನು ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಟಾಟಾ ಮೋಟರ್ಸ್ ಮಾರುಕಟ್ಟೆಗೆ ತಂದಿರುವ ಉತ್ತಮ ಗುಣಮಟ್ಟದ ಸಿ ಎನ್ ಜಿ ಮಾದರಿಯ ವಾಹನಗಳು ಗ್ರಾಹಕರನ್ನು ತಮ್ಮತ್ತ ಆಕರ್ಷಿಸುತ್ತಿವೆ ಎನ್ನಬಹುದು.