ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ದೇಶದ ಜನರಿಗೆ ಅನುಕೂಲ ಆಗುವಂಥ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಯಾವುದೇ ವರ್ಗಕ್ಕೆ ಸೀಮಿತವಾಗಿರದೆ ಎಲ್ಲರಿಗೂ ಉಪಯೋಗ ನೀಡುವಂಥ ಯೋಜನೆಗಳನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಹೆಣ್ಣುಮಕ್ಕಳು ಸ್ವಾವಲಂಬಿಯಾಗಬೇಕು, ಹೆಣ್ಣುಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿರಬೇಕು ಎಂದು ಕೆಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ.
ಹೆಣ್ಣುಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂದು ಜಾರಿಗೆ ಬಂದಿರುವ ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಹಣ ಸಿಗುವುದು ಹೆಣ್ಣುಮಗುವಿಗೆ 18 ವರ್ಷ ತುಂಬಿದ ನಂತರ. ಬಳಿಕ ಈ ಹಣವನ್ನು ವಿದ್ಯಾಭ್ಯಾಸಕ್ಕಾಗಿ ಅಥವಾ ಮದುವೆಗೆ ಅಥವಾ ಬ್ಯುಸಿನೆಸ್ ಮಾಡುವ ಆಸಕ್ತಿ ಇದ್ದರೆ ಅದಕ್ಕಾಗಿ ಯಾವುದೇ ಕಾರಣಕ್ಕಾಗಿ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ಸರ್ಕಾರ ಈ ಯೋಜನೆಯನ್ನು ವಿಶೇಷವಾಗಿ ಹೆಣ್ಣುಮಗುವಿಗೋಸ್ಕರ ಜಾರಿಗೆ ತಂದಿದೆ.
ಹೆಣ್ಣುಮಗು ಇರುವ ತಂದೆ ತಾಯಿಯರು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ಯೋಜನೆಯ ಮೂಲಕ ಹಣ ಉಳಿಸಿ ತಮ್ಮ ಹೆಣ್ಣುಮಗುವಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸುತ್ತಿದ್ದಾರೆ. ಈ ಯೋಜನೆಯು ಇಷ್ಟು ದಿವಸಗಳ ಕಾಲ ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿತ್ತು. ಆದರೆ ಇನ್ನುಮುಂದೆ SBI ನಲ್ಲಿ ಕೂಡ ಸುಕನ್ಯಾ ಸಮೃದ್ಧಿ ಯೋಜನೆ ಲಭ್ಯವಿರಲಿದ್ದು, ಬ್ಯಾಂಕ್ ನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಶುರು ಮಾಡುವವರ ಹೆಣ್ಣುಮಗು 18 ವರ್ಷ ತಲುಪಿದಾಗ, 15 ಲಕ್ಷ ರೂಪಾಯಿಯವರೆಗು ರಿಟರ್ನ್ಸ್ ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಕೆಲವು ಕಂಡೀಷನ್ ಗಳನ್ನು ಹಾಕಲಾಗಿದೆ. ಅದೇನು ಎಂದರೆ, ಈ ಯೋಜನೆಯಲ್ಲಿ ಹೆಣ್ಣುಮಗುವಿನ ತಂದೆ ತಾಯಿ ಹೂಡಿಕೆ ಮಾಡುವುದಕ್ಕೆ ಶುರುಮಾಡಬಹುದು. ನಿಮ್ಮ ಹೆಣ್ಣುಮಗುವಿಗೆ 10 ವರ್ಷ ತುಂಬುವುದಕ್ಕಿಂತ ಮೊದಲು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಮಿನಿಮಮ್ 250 ರೂಪಾಯಿ, ಮ್ಯಾಕ್ಸಿಮಮ್ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು.
ಪ್ರತಿ ತಿಂಗಳು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ವಾರ್ಷಿಕವಾಗಿ ನೀವು ಸರಿಯಾಗಿ ಹೂಡಿಕೆ ಮಾಡಲು ಆಗಲಿಲ್ಲ ಎಂದರೆ, ನಿಮ್ಮಿಂದ ಆದಷ್ಟು ಮೊತ್ತವನ್ನು ಹೂಡಿಕೆ ಮಾಡಬಹುದು. 250 ರೂಪಾಯಿಗಳನ್ನು ಕೂಡ ನೀವು ಹೂಡಿಕೆ ಮಾಡಬಹುದು. SBI ಇತ್ತೀಚೆಗೆ ಟ್ವೀಟ್ ಮಾಡಿ, ತಮ್ಮ ಬ್ಯಾಂಕ್ ನಲ್ಲಿ ಸಹ ಸುಕನ್ಯಾ ಸಮೃದ್ಧಿ ಯೋಜನೆಯ ಸೌಲಭ್ಯ ಲಭ್ಯವಿದೆ ಎನ್ನುವುದನ್ನು ತಿಳಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸೆಕ್ಷನ್ 80Cc ಅಡಿಯಲ್ಲಿ ತೆರಿಗೆ ರಿಯಾಯಿತಿ ಕೂಡ ಸಿಗುತ್ತದೆ.
ಈ ಯೋಜನೆಯನ್ನು ತೆರೆಯಲು ಒಂದು ಮನೆಯ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜೆನೆಯಲ್ಲಿ ಖಾತೆ ತೆರೆಯುವ ಅವಕಾಶ ನೀಡಲಾಗುತ್ತದೆ. ಅಕಸ್ಮಾತ್ ಎರಡನೇ ಮಗುವಿನ ಜನನದ ವೇಳೆ ಅವಳಿ ಹೆಣ್ಣುಮಕ್ಕಳು ಜನಿಸಿದರೆ ಆ ಸಂದರ್ಭದಲ್ಲಿ ಮೂವರು ಹೆಣ್ಣುಮಕ್ಕಳ ಹೆಸರಿನಲ್ಲಿ ನೀವು ಖಾತೆ ತೆರೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ 7.6% ಬಡ್ಡಿದರ ಸಿಗುತ್ತದೆ. ಒಂದು ವೇಳೆ ನೀವು ಈ ಯೋಜನೆಯ ಬಗ್ಗೆ ಹೆಚ್ಬು ಮಾಹಿತಿ ಪಡೆಯಬೇಕು ಎಂದರೆ SBI ಬ್ಯಾಂಕ್ ಶಾಖೆ ಅಥವಾ ಪೋಸ್ಟ್ ಆಫೀಸ್ ಗೆ ಭೇಟಿ ನೀಡಬಹುದು ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.