ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಪಿಯೋನ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯನ್ನು ಶ್ರೀ ಸಿದ್ಧೇಶ್ವರ ವಿಜಯಪುರ ಸಹಕಾರಿ ಬ್ಯಾಂಕ್ ನಲ್ಲಿ ಜನರಲ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಕಂಪ್ಯೂಟರ್ ಇಂಜಿನಿಯರ್, ಜೂನಿಯರ್ ಮ್ಯಾನೇಜರ್, ಸೀನಿಯರ್ ಅಸಿಸ್ಟೆಂಟ್, ಡ್ರೈವರ್ ಹೀಗೆ ವಿವಿಧ ಹುದ್ದೆಗಳಿಗೆ 48 ಹುದ್ದೆಗಳಿವೆ. ಆಸಕ್ತರು ಅರ್ಜಿಯನ್ನು ಸಲ್ಲಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ.
ಹುದ್ದೆಗಳ ವಿವರ ಹೀಗಿದೆ:
ಹಿರಿಯ ವ್ಯವಸ್ಥಾಪಕ – 11
ಪ್ರಧಾನ ವ್ಯವಸ್ಥಾಪಕರು – 1
ಮ್ಯಾನೇಜರ್ – 1
ಕಂಪ್ಯೂಟರ್ ಇಂಜಿನಿಯರ್ – 1
ಜೂನಿಯರ್ ಮ್ಯಾನೇಜರ್ – 4
ಹಿರಿಯ ಸಹಾಯಕ – 13
ಕಿರಿಯ ಸಹಾಯಕ – 11
ಅಟೆಂಡರ್/ಪ್ಯೂನ್/ಕಾವಲುಗಾರ – 5
ಡ್ರೈವರ್ ಹುದ್ದೆ – 1
ಒಟ್ಟು ಹುದ್ದೆಗಳು 48
ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿಸಲ್ಲಿಸಬೇಕು, ಉದ್ಯೋಗದ ಸ್ಥಳ ವಿಜಯಪುರ
ಈ ಹುದ್ದೆಗಳ ಶೈಕ್ಷಣಿಕ ಅರ್ಹತೆ ಹೀಗಿದೆ. ಪ್ರಧಾನ ವ್ಯವಸ್ಥಾಪಕರು – ಮಾನ್ಯತೆ ಪಡೆದ ಸ್ನಾತಕೋತ್ತರ ವಿಶ್ವವಿದ್ಯಾಲಯದ ಪದವಿ, ಕಂಪ್ಯೂಟರ್ ಪರಿಜ್ಞಾನ ಹಾಗೂ ಕನಿಷ್ಠ 5 ವರ್ಷ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
ವ್ಯವಸ್ಥಾಪಕರು, ಹಿರಿಯ ವ್ಯವಸ್ಥಾಪಕರು, ಕಿರಿಯ ವ್ಯವಸ್ಥಾಪಕರು – ಪದವಿ ಜೊತೆಗೆ ಕಂಪ್ಯೂಟರ್ ಪರಿಜ್ಞಾನ ಹಾಗೂ ಕನಿಷ್ಠ 3 ವರ್ಷ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
ಕಂಪ್ಯೂಟರ್ ಇಂಜಿನಿಯರ್ – ಬಿ.ಇ (ಕಂಪ್ಯೂಟರ್ ಸೈನ್ಸ್/ ಇ ಮತ್ತು ಸಿ)/ ಎಂ.ಸಿ.ಎ.
ಹಿರಿಯ, ಕಿರಿಯ ಸಹಾಯಕರು – ಪದವಿ ಜೊತೆಗೆ ಕಂಪ್ಯೂಟರ್ ಪರಿಜ್ಞಾನ ಹೊಂದಿರಬೇಕು.ಅಟೆಂಡರ್/ಜವಾನ/ವಾಚಮೆನ್ – ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು. ವಾಹನ ಚಾಲಕ – ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು ಜೊತೆಗೆ ವಾಹನ ಚಾಲನೆಯ ಚಾಲ್ತಿ (LMV) ಲೈಸೆನ್ಸ್ ಹೊಂದಿರಬೇಕು.
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ವಯೋಮಿತಿ: ಕನಿಷ್ಠ 18 ರಿಂದ 40 ವರ್ಷದವರೆಗೆ ಆಯಾ ಹುದ್ದೆಗಳ ಅನುಗುಣವಾಗಿ ವಯೋಮಿತಿ ಇರುತ್ತದೆ.ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಭರಿಸಬೇಕು SC/ ST/ ಪ್ರವರ್ಗ- 1/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 600/- ರೂಸಾಮಾನ್ಯ/ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ; 1200/- ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿಯನ್ನು ಸಲ್ಲಿಸುವ ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 04, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 31, 2024
ಈ ಹುದ್ದೆಗಳ PDF
ಈ ಹುದ್ದೆಯ ಅರ್ಜಿಸಲ್ಲಿಸುವ ಲಿಂಕ್