ರೈತರಿಗಾಗಿ ನಮ್ಮ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಅವುಗಳಿಗೆ ಅಪ್ಲೈ ಮಾಡಿ, ಕಡಿಮೆ ಬೆಲೆಗೆ ತಮಗೆ ಬೇಕಾದ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಬಹುದು. ಹೀಗಿರುವಾಗ ರೈತರಿಗೆ ಈಗ ಸರ್ಕಾರವು ಮತ್ತೊಂದು ಸೌಲಭ್ಯವನ್ನು ಜಾರಿಗೆ ತಂದಿದೆ. ಅದೇನು ಎಂದರೆ, ಕಡಿಮೆ ಬೆಲೆಯಲ್ಲಿ ರೈತರಿಗೆ ಅಗತ್ಯವಿರುವ ಪೈಪ್ ಸೆಟ್ ಹಾಗೂ ಸ್ಪ್ರಿಂಕ್ಲರ್ ಗಳನ್ನು ಜಮೀನಿಗೆ ಅಳವಡಿಸಲು ಸಹಾಯ ಮಾಡಲಿದೆ.
ಹೊರಗಡೆ ನೀವು ಇವುಗಳನ್ನು ಖರೀದಿ ಮಾಡುತ್ತೀರಾ ಎಂದರೆ, ₹20,000 ಇಂದ ₹25,000 ವರೆಗು ಖರ್ಚಾಗುತ್ತದೆ. ಆದರೆ ಸರ್ಕಾರದ ಈ ಯೋಜನೆಯ ಮೂಲಕ ಬಹಳ ಕಡಿಮೆ ಬೆಲೆಗೆ ಅಂದರೆ ₹18,000 ಕ್ಕೆ ಸ್ಪ್ರಿಂಕ್ಲರ್ ಹಾಗೂ ಪೈಪ್ ಸೆಟ್ ಗಳನ್ನು ಖರೀದಿ ಮಾಡಬಹುದು. ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ..
ಮೊದಲಿಗೆ ನೀವು https://kkisan.karnataka.gov.in/ ಈ ಲಿಂಕ್ ಗೆ ಭೇಟಿ ನೀಡಿ, ಇಲ್ಲಿ ಲಾಗಿನ್ ಎಂದು ಕೇಳುವ ಆಪ್ಶನ್ ನಲ್ಲಿ, ನಿಮ್ಮ FID ನಂಬರ್ ಹಾಕುವ ಮೂಲಕ ಲಾಗಿನ್ ಮಾಡಬಹುದು. ಬಳಿಕ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಅಥವಾ ನಿಮಗೆ ಹತ್ತಿರ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಅಗತ್ಯವಿರುವ ದಾಖಲೆಗಳನ್ನು ನೀಡಿ, ಸಬ್ಸಿಡಿ ಮೂಲಕ ಪೈಪ್ ಸೆಟ್ ಹಾಗೂ
sprinkler ಗಳನ್ನು ಖರೀದಿ ಮಾಡಬಹುದು.
ಹೆಚ್ಚಿನ ಮಾಹಿತಿ ಪಡೆಯಲು, ನಿಮ್ಮ ಹಳ್ಳಿಯ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಇದಕ್ಕಾಗಿ ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದರೆ, ಆಧಾರ್ ಕಾರ್ಡ್, ಆರ್.ಟಿ. ಸಿ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್, 20 ರೂಪಾಯಿಯ ಸ್ಟ್ಯಾಂಪ್ ಪೇಪರ್ *ನೀರಿನ ಮೂಲದ ದೃಢೀಕರಣ ಪತ್ರ *ಪಾಸ್ ಪೋರ್ಟ್ ಸೈಜ್ ಫೋಟೋ *ಕ್ಯಾಸ್ಟ್ ಸರ್ಟಿಫಿಕೇಟ್. ಈ ದಾಖಲೆಗಳ ಜೊತೆಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಅಪ್ಲೈ ಮಾಡಬಹುದು. ಅಥವಾ ಆನ್ಲೈನ್ ಮೂಲಕ ಕೂಡ ಅಪ್ಲೈ ಮಾಡಬಹುದು.