ನಾವಿಂದು ಫೆಬ್ರವರಿ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆಯಿಂದ ಸಿಂಹ ರಾಶಿಯವರಿಗೆ ಯಾವ ರೀತಿಯಾದ ಫಲಾಫಲಗಳು ಇವೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಗ್ರಹ ಸ್ಥಿತಿಗಳನ್ನು ನೋಡಿದಾಗ ಚತುರ್ಥದ ಕೇತು ಇರಬಹುದು ಅಥವಾ ಕುಜ ಸಂಚಾರ ಇರಬಹುದು ಸೃಷ್ಟದಲ್ಲಿ ಇರುವಂತಹ ರವಿ ಶನಿಯ ಸಂಯೋಗ ಇರಬಹುದು ಇವುಗಳನ್ನೆಲ್ಲಾ ನೋಡಿದಾಗ ಫೆಬ್ರುವರಿಯಲ್ಲಿ ನಿಮ್ಮ ಮಾತು ಸ್ವಲ್ಪ ಒರಟಾಗಬಹುದು ಎಂದು ಕಾಣಿಸುತ್ತದೆ. ನಿಮಗೆ ಗೊತ್ತಿಲ್ಲದೇ ಇರುವ ರೀತಿಯಲ್ಲಿ ನಿಮ್ಮಲ್ಲಿ ಸ್ವಲ್ಪ ಅಹಂಕಾರ ಹೆಚ್ಚಾಗಬಹುದು ನಿಮ್ಮ ಎದುರುಗಡೆ ಯಾರಿದ್ದಾರೆ ಏನು ಎಂದು ನೋಡುವುದಿಲ್ಲ ನಿಮ್ಮ ಮನಸ್ಸಿನಲ್ಲಿ ಕಂಡಿದ್ದನ್ನು ಹೇಳುತ್ತೀರಿ. ಎದುರುಗಡೆ ಇರುವವರು ಅದನ್ನು ಯಾವ ರೀತಿಯಾಗಿ ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದರ ಕುರಿತು ಯೋಚನೆ ಮಾಡುವುದಿಲ್ಲ.

ನೇರ ನುಡಿ ಎನ್ನುವುದು ಸಿಂಹರಾಶಿಯವರ ಸ್ವಾಭಾವಿಕ ಗುಣ ಅದು ಬೇರೆಯವರಿಗೆ ನಿಮಗೆ ಅಹಂಕಾರ ಬಂದಿದೆ ಅನ್ನುವ ರೀತಿಯಲ್ಲಿ ಕಾಣುತ್ತದೆ. ಅದು ಪುರುಷರ ಆಗಿರಬಹುದು ಅಥವಾ ಮಹಿಳೆಯರಾಗಿರಬಹುದು ಅದರಿಂದ ನಿಮಗೆ ಸ್ವಲ್ಪ ಹಿನ್ನಡೆ ಉಂಟಾಗುತ್ತದೆ. ಹಾಗಾಗಿ ಆ ರೀತಿಯ ಭಾವನೆಗಳನ್ನು ಸ್ವಲ್ಪ ನಿಯಂತ್ರಣ ಮಾಡಿಕೊಳ್ಳುವುದು ಒಳ್ಳೆಯದು. ಮಾತು ಒರಟಾಗಿರದಂತೆ ಸೌಮ್ಯವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು.

ಫೆಬ್ರುವರಿ ತಿಂಗಳಲ್ಲಿ ನೀವು ನಿಮಗಿಂತ ಸ್ವಲ್ಪ ದೊಡ್ಡವರನ್ನ ನಿಮ್ಮ ಎದುರು ಹಾಕಿಕೊಳ್ಳುತ್ತೀರಿ. ನೀವು ಎಷ್ಟೇ ಧೈರ್ಯವಂತರಾಗಿದ್ದರೂ ದೊಡ್ಡವರನ್ನ ಎದುರು ಹಾಕಿಕೊಳ್ಳಬಾರದು. ನಿಮಗೆ ಯಾರಿಂದ ಲಾಭವಾಗುತ್ತದೆ ನಿಮಗೆ ಯಾರಿಂದ ಸಹಾಯ ಉಂಟಾಗುತ್ತದೆ ನಿಮಗೆ ಯಾರ ಆಶೀರ್ವಾದ ಬೇಕು ಅಂತವರನ್ನು ನೀವು ಎದುರು ಹಾಕಿಕೊಂಡರೆ ಅದು ನಿಮ್ಮ ದೊಡ್ಡತನ ಎನಿಸುತ್ತದೆ.

ಹಾಗಾಗಿ ನೀವು ಎಚ್ಚೆತ್ತುಕೊಳ್ಳಬೇಕು ನಿಮ್ಮ ಮನೆಯಲ್ಲಿ ಆಗಿರಬಹುದು ನಿಮ್ಮ ಸುತ್ತಮುತ್ತ ಅಥವಾ ನೀವು ಕೆಲಸ ಮಾಡುವ ಜಾಗದಲ್ಲಿ ಆಗಿರಬಹುದು ಅಲ್ಲಿ ನಕಾರತ್ಮಕ ಶಕ್ತಿಗಳು ಇದ್ದರೆ ಅವುಗಳನ್ನು ಹೋಗಲಾಡಿಸಿ ಕೊಳ್ಳಬೇಕು. ಶುಕ್ರನ ಸಂಚಾರದಿಂದ ನೀವು ಎಲ್ಲಿ ಕೆಲಸ ಮಾಡುತ್ತೀರಿ ಅಲ್ಲಿ ನೀವು ಎಲ್ಲಿ ಉದ್ಯಮವನ್ನು ನಡೆಸುತ್ತಿರಿ ಅಲ್ಲಿ ಎಲ್ಲಿ ವ್ಯಾಪಾರವನ್ನು ಮಾಡುತ್ತೀರಿ ಎಲ್ಲಿ ಉದ್ಯೋಗ ಮಾಡುತ್ತಿರಿ ಅಲ್ಲಿ ನಿಮಗೆ ಶತ್ರುಬಾಧೆ ಹೆಚ್ಚಾಗುವ ರೀತಿಯಲ್ಲಿದೆ.

ಇನ್ನು ನೀವು ನಿರೀಕ್ಷೆ ಮಾಡುವಂತಹ ಲಾಭಾಂಶಗಳು ನಿಮಗೆ ಬರೆಯದೇ ಇರುವ ರೀತಿಯಲ್ಲಿ ಕೆಲವರು ಹೊಂಚು ಹಾಕುತ್ತಾರೆ. ನೀವು ಅಂದುಕೊಂಡ ಹಾಗೆ ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವುದಕ್ಕೆ ಬಿಡುವುದಿಲ್ಲ ಸಂಬಳ ಹೆಚ್ಚಾಗುವುದನ್ನು ತಡೆಯುತ್ತಾರೆ. ಹಾಗಾಗಿ ನೀವು ನಿಮ್ಮ ಸುತ್ತಮುತ್ತಲಿರುವ ಅವರೊಂದಿಗೆ ಒಳ್ಳೆ ರೀತಿಯಲ್ಲಿ ನಡೆದು ಕೊಳ್ಳುವುದು ಒಳ್ಳೆಯದು.

ಇನ್ನು ನಿಮ್ಮ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಸೊಂಟ ಮತ್ತು ಕಾಲು ನೋವು ಕಾಣಿಸಿಕೊಳ್ಳಬಹುದು. ಇನ್ನು ಸಿಂಹ ರಾಶಿಯಲ್ಲಿರುವ ಅವಿವಾಹಿತರಿಗೆ ವಿವಾಹ ಯೋಗ ಉಂಟಾಗಲಿದೆ. ಗಂಡ ಹೆಂಡತಿಯಲ್ಲಿ ಜಗಳ ಇದ್ದರೆ ಅದು ಸುಖಾಂತ್ಯ ಕಾಣುತ್ತದೆ. ಇನ್ನು ಕೆಲವರು ಎರಡನೇ ವಿವಾಹಕ್ಕಾಗಿ ಪ್ರಯತ್ನವನ್ನು ಪಡುತ್ತಿರುತ್ತಾರೆ ಅಂಥವರಿಗೆ ಫೆಬ್ರವರಿ ತಿಂಗಳು ತುಂಬಾ ಒಳ್ಳೆಯ ಕಾಲವಾಗಿದೆ. ಮನೆ ಕಟ್ಟಬೇಕು ಎಂದುಕೊಂಡಿರುವವರಿಗೆ ಸೈಟನ್ನು ಮಾರಾಟ ಮಾಡಬೇಕು ಎಂದುಕೊಂಡವರಿಗೆ ಅನುಕೂಲ ವಾದಂತಹ ಸಮಯ ಇದಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ನಿಮ್ಮ ಕೆಲಸ ಆಗುತ್ತದೆ. ಒಟ್ಟಾರೆಯಾಗಿ ಸಿಂಹರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಮಿಶ್ರಿತ ಫಲಗಳು ಕಂಡುಬರುತ್ತಿವೆ. ಇದಿಷ್ಟು ಫೆಬ್ರವರಿ ತಿಂಗಳಲ್ಲಿ ಸಿಂಹರಾಶಿಯ ಉಂಟಾಗಲಿರುವ ರಾಶಿ ಫಲವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!