ಶ್ರಾವಣ ಮಾಸದಲ್ಲಿ ಹೆಚ್ಚಿನ ಮಹಿಳೆಯರು ಲಕ್ಷ್ಮಿ ದೇವರ ವ್ರತವನ್ನು ಮಾಡುವರು. ಈ ಶ್ರಾವಣ ಮಾಸ ಎಂದರೆ ಎಲ್ಲಾ ಶುಭ ಕಾರ್ಯಕ್ಕೂ ಮುನ್ನುಡಿ ಇದ್ದಂತೆ. ಈ ಮಾಸದ ಪ್ರತಿಯೊಂದು ದಿನವು ಒಂದೊಂದು ವಿಶೇಷತೆಯನ್ನು ಹೊಂದಿರುತ್ತದೆ. ಶ್ರಾವಣ ಮಾಸದಲ್ಲಿ ಯಾವುದೇ ಮಂಗಳಕರ ವಿಷಯಕ್ಕೆ ಕೈ ಹಾಕಿದರೆ ಅದು ನೆರವೇರುತ್ತದೆ ಎನ್ನುವುದು ಹಿರಿಯರ ನಂಬಿಕೆ. ಈ ಶ್ರಾವಣ ಮಾಸದಲ್ಲಿ ಮನೆಯ ಹೆಣ್ಣು ಮಕ್ಕಳು ಕೆಲವು ಕೆಲಸಗಳನ್ನು ಮಾಡುವುದರಿಂದ ಶುಭಕರ ಫಲಗಳು ಲಭಿಸುತ್ತದೆ.

ಹಿಂದೂ ಪುರಾಣದ ಪ್ರಕಾರ ಮತ್ತು ಪಂಚಾಂಗದಲ್ಲಿ ಶ್ರಾವಣ ಮಾಸಕ್ಕೆ ಒಂದು ವೈಶಿಷ್ಟ್ಯತೆ ಇದೆ. ಸನಾತನ ಪಂಚಾಂಗದ 5 ನೇ ತಿಂಗಳನ್ನು ಶಿವನಿಗೆ ಅರ್ಪಣೆ ಮಾಡಲಾಗಿದೆ. ಶ್ರಾವಣ ನಕ್ಷತ್ರದಂದು ಈ ಮಾಸ ಆರಂಭ ಆಗುತ್ತದೆ. ಈ ಮಾಸದ ಆರಂಭವೇ ಹಬ್ಬಗಳ ಆರಂಭ ಎಂದು ಹೇಳಬಹುದು. ಈ ಮಾಸದಲ್ಲಿ ಶಿವನನ್ನು ಹೆಚ್ಚಾಗಿ ಆರಾಧನೆ ಮಾಡಲಾಗುತ್ತದೆ. ಸರ್ವ ಹಬ್ಬಗಳ ಸಮನ್ವಯ ಸಂಯೋಗ ಇದೆ ಮಾಸದಲ್ಲಿ ಆಗುತ್ತದೆ. ಆಷಾಢ ಮಾಸದಲ್ಲಿ ದಂಪತಿಗಳು ದೂರವಾಗಿ ಇರಬೇಕು ಮತ್ತು ಅತ್ತೆ ಸೊಸೆ ಒಂದೇ ಬಾಗಿಲಿನಲ್ಲಿ ಓಡಾಡುವುದು ಕೆಡುಕನ್ನು ತರುತ್ತದೆ.

ಮಾವ ಅಳಿಯ ಒಬ್ಬರ ಮುಖ ಇನ್ನೊಬ್ಬರು ನೋಡಬಾರದು ಅದು ಆಷಾಢ ಮಾಸದಲ್ಲಿ. ಆದರೆ, ಶ್ರಾವಣ ಮಾಸದಲ್ಲಿ ಈ ಯಾವುದೇ ನಿಯಮಗಳು ಇರುವುದಿಲ್ಲ. ಹಬ್ಬಗಳ ಆಚರಣೆಯಿಂದ ಎಲ್ಲರೂ ಒಂದು ಕಡೆ ಸೇರಿ ಆಚರಣೆ ಮಾಡಬಹುದು. ರಾಕ್ಷಸರು ಮತ್ತು ದೇವತೆಗಳು ಸಮುದ್ರ ಮಂಥನ ಮಾಡುವ ಸಮಯದಲ್ಲಿ ಸಮುದ್ರದ ಒಳಗಿನಿಂದ ಸಾಕಷ್ಟು ಶಕ್ತಿಯುತವಾದ ವಸ್ತುಗಳು ಹೊರಗೆ ಬಂದಿದ್ದವು. ಅದರಲ್ಲಿ, ಕಾರ್ಕೋಟಕ ವಿಷ ಕೂಡ ಒಂದಾಗಿತ್ತು. ಶಿವನ ಬಳಿ ಎಲ್ಲರೂ ಬೇಡಿಕೆ ಇಟ್ಟಾಗ ವಿಷವನ್ನು ಕುಡಿದು ವಿಷ ಕಂಠ ಆಗುವ ಶಿವ ಎಲ್ಲರ ಸಮಸ್ಯೆಗೆ ಪರಿಹಾರ ಕೊಡುವನು.

ಪ್ರತಿ ಶ್ರಾವಣ ಮಾಸದಲ್ಲಿ ಶಿವನು ಹೆಂಡತಿಯ ತವರು ಮನೆ ಅಂದರೆ ಭೂಮಿಯ ಮೇಲೆ ಸಂಚಾರ ಮಾಡುವನು ಎನ್ನುವ ನಂಬಿಕೆ ಸಹ ಇದೆ. ಆದ್ದರಿಂದ, ಶ್ರಾವಣ ಮಾಸದಲ್ಲಿ ಶಿವನ ಪ್ರಾರ್ಥನೆಯನ್ನು ಮಾಡುವರು ಮಹಾದೇವನಲ್ಲಿ ಏನು ಬೇಡಿಕೆ ಇಟ್ಟರು ಅದು, ಶಿವನನ್ನು ತಲುಪುತ್ತವೆ ಎಂದು ಹೇಳಲಾಗುತ್ತದೆ. ಶಿವ ಪುರಾಣದಲ್ಲಿ ಉಲ್ಲೇಖ ಇರುವ ಪ್ರಕಾರ ಗಂಗಾ ಸ್ನಾನ ತುಂಬಾ ಪವಿತ್ರವಾದ ಸ್ನಾನ. ಸೂರ್ಯೋದಯಕ್ಕೂ ಮುನ್ನ ಗಂಗೆಯಲ್ಲಿ ಒಮ್ಮೆ ಮುಳುಗಿ ಏಳಬೇಕು. ಅಭ್ಯುಂಜನ ಸ್ನಾನದ ನಂತರ ಶಿವನ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಜಲಾಭಿಷೇಕ ಮಾಡಬೇಕು.

ಶ್ರಾವಣ ಮಾಸದಲ್ಲಿ ಪ್ರತಿದಿನ ಮಜ್ಜನವನ್ನು ಮಾಡಲೇಬೇಕು ಇಲ್ಲದೆ ಹೋದರೆ ಗಳಿಕೆ ಮಾಡಿರುವ ಪುಣ್ಯ ಎಲ್ಲ ಮಣ್ಣು ಪಾಲಾಗುತ್ತದೆ. ಒಂದು ನಂಬಿಕೆಯ ಪ್ರಕಾರ ಶಿವನ ತಲೆಯ ಮೇಲೆ ಧಗ ಧಗಿಸುವ ಅಗ್ನಿ ವಾಸವಾಗಿದೆ. ಅಗ್ನಿಯನ್ನು ಶಾಂತವಾಗಿ ಇಡಬೇಕೆಂದು ನೀರಿನ ಅಭಿಷೇಕವನ್ನು ಶಿವನಿಗೆ ಮಾಡಲಾಗುತ್ತದೆ. ಯಾರು ಶಿವನಿಗೆ ನೀರಿನಲ್ಲಿ ಅಭಿಷೇಕ ಮಾಡುವರು ಅವರು ಶಿವನಿಗೆ ಆಪ್ತವಾದ ಭಕ್ತರು ಆಗುವರು ಎಂದು ಹೇಳಲಾಗುತ್ತದೆ. ನೀರಿನ ಜೊತೆ ಹಾಲು, ತುಪ್ಪ ಮೊಸರು ಜೇನುತುಪ್ಪ ಭಸ್ಮ ಹಾಗೂ ಬಿಲ್ವಪತ್ರೆ ಇದರಿಂದ, ಕೂಡ ಶಿವನಿಗೆ ಅಭಿಷೇಕವನ್ನು ಮಾಡಬಹುದು.

ಜೇನುತುಪ್ಪದಲ್ಲಿ ಅಭಿಷೇಕವನ್ನು ಮಾಡಿದರೆ ಆ ಮನುಷ್ಯನ ಜೀವನದಲ್ಲಿ ಯಾವುದೇ ತೊಂದರೆಗಳು ಇದ್ದರೂ ಅದನ್ನು ಪರಮಶಿವ ದೂರ ಮಾಡುವನು ಎಂದು ಹೇಳಲಾಗುತ್ತದೆ. ಅದರಲ್ಲಿ, ಸಹ ಹಣಕಾಸಿನ ತೊಂದರೆ ಇದ್ದರೆ ಅದು ಕೂಡ ದೂರ ಆಗುತ್ತದೆ. ಶ್ರಾವಣ ತಿಂಗಳಿನ ಸೋಮವಾರಗಳಲ್ಲಿ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುವುದರಿಂದ ಆ ವ್ಯಕ್ತಿಯ ಸರ್ವ ಸಂಕಷ್ಟಗಳು ಒಟ್ಟಿಗೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಮದುವೆಯಾಗದೇ ಇರುವ ಕನ್ಯೆಯರು ಶಿವನಿಗೆ ಶರಣಾಗಿ ಶ್ರಾವಣ ಮಾಸದಲ್ಲಿ ವ್ರತ ಆಚರಣೆ ಮಾಡುವುದರಿಂದ ಅಂತವರಿಗೆ ಮಾತೆ ಗೌರಿ ರಾಜಕುಮಾರನಂತಹ ವರನನ್ನು ಕರುಣೆ ಮಾಡುವಳು ಎಂದು ಹೇಳಲಾಗುತ್ತದೆ.

ಶ್ರಾವಣ ತಿಂಗಳಿನಲ್ಲಿ ಹೆಚ್ಚಾಗಿ ಸಾತ್ವಿಕ ಆಹಾರವನ್ನು ಸೇವನೆ ಮಾಡಬೇಕು. ಮಾಂಸ ಆಹಾರ ಅಥವಾ ಮಧ್ಯ ಸೇವನೆಯನ್ನು ಈ ಮಾಸದಲ್ಲಿ ಮಾಡುವುದು ಹೆಚ್ಚು ಶ್ರೇಷ್ಠವಲ್ಲ. ಶಿವನನ್ನು ಪಶುಪತಿ ನಾಥ ಎಂದು ಕರೆಯಲಾಗುತ್ತದೆ ಆದ್ದರಿಂದ, ಈ ತಿಂಗಳು ಪಶುವಿನ ಪ್ರಾಣ ತೆಗೆಯುವುದು ಹೆಚ್ಚು ಪಾಪವನ್ನು ತಂದು ಕೊಡುತ್ತದೆ. ಶ್ರಾವಣ ಮಾಸದಲ್ಲಿ ಸ್ತ್ರೀ ಆಗಲಿ ಪುರುಷನಾಗಲಿ ತಡವಾಗಿ ಮಲಗಬಾರದು. ಬೇಗ ಮಲಗಿ ಬೇಗ ಎದ್ದು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಬೇಕು. ಪಂಚಾಕ್ಷರಿ ಮಂತ್ರ ಎಂದರೆ ” ಓಂ ನಮಃ ಶಿವಾಯ.” ಎನ್ನುವ ಮಂತ್ರವನ್ನು 108 ಬಾರಿ ಜಪ ಮಾಡಬೇಕು. ಸ್ನಾನ ಮಾಡದೆ ಆಹಾರ ಸೇವನೆ ಮಾಡಬಾರದು. ಸತಿ ಪತಿ ಒಟ್ಟಿಗೆ ಸೋಮವಾರ ವ್ರತ ಆಚರಣೆ ಮಾಡುವುದೇ ಆದರೆ ದೂರ ದೂರ ಇದ್ದರೆ ಒಳ್ಳೆಯದು. ಇಲ್ಲದೆ ಹೋದರೆ ಅದು ವ್ರತದ ಪವಿತ್ರತೆ ಹಾಳು ಮಾಡುತ್ತದೆ ಎಂದು ಹೇಳಲಾಗುತ್ತದೆ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!