ಏನೇ ಮಾಡು ಶ್ರಾವಣದಲ್ಲಿ ಮಾಡು ಅದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ನಮ್ಮದು. ವರ್ಷದಲ್ಲಿ ಇರುವ ಹಬ್ಬಗಳಲ್ಲಿ ಹೆಚ್ಚಿನ ಹಬ್ಬಗಳು ಶ್ರಾವಣ ಮಾಸದಲ್ಲಿ ಇರುವುದು ವಿಶೇಷ. ಈ ಸಲ ಹಬ್ಬಗಳು ಇರುವುದು ಯಾವಾಗ ಅವುಗಳ ವಿಶೇಷ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶ್ರಾವಣ ಮಾಸ ಇದು ಶಿವನ ಮಾಸ ಎಂಬ ಹೆಗ್ಗಳಿಕೆ. ಬಾಗಿಲಿಗೆ ಹಸಿರು ತೋರಣ ಬಾಗಿಲಿಗೆ ಅಂದವಾದ ರಂಗೋಲಿ ಹಬ್ಬದ ಸಂಬ್ರಮ ಹಬ್ಬದ ಊಟದ ತಯಾರಿಯಲ್ಲಿ ಮೈ ಮರೆಯುವ ಮಾಸ ಇದು. ಶ್ರಾವಣ ಮಾಸ ಎಂದರೆ ಮಳೆಯ ಆರಂಭದಕಾಲ ಮಳೆಯಿಂದ ಭೂಮಿ ತಂಪಾಗುವುದು ಈ ಶ್ರಾವಣದಲ್ಲಿ. ಶ್ರವಣ ನಕ್ಷತ್ರದ ಯೋಗದಿಂದ ಈ ಶ್ರಾವಣ ಎಂಬ ಹೆಸರು ಬಂದಿದೆ. ಶ್ರವಣ ವಿಷ್ಣುವಿನ ಜನ್ಮ ನಕ್ಷತ್ರ ವಿಷ್ಣುವನ್ನು ಶಿವನನ್ನು ವಿಶೇಷವಾಗಿ ಆರಾಧನೆ ಮಾಡವುದೆ ಈ ಮಾಸದ ವಿಶೇಷತೆ.
ಶ್ರಾವಣ ಹುಣ್ಣಿಮೆಯಂದು ಶ್ರವಣ ನಕ್ಷತ್ರ ಬರುವುದರಿಂದ ಈ ಮಾಸ ಬಹಳ ಪವಿತ್ರ. ಕೇರಳದಲ್ಲಿ ಅದರಲ್ಲಿನ ಶ್ರ ಕಳೆದು ವಣ ಮಾತ್ರ ಉಳಿಯಿತು ಕೇರಳಿಗರು ಈ ಮಾಸದಲ್ಲಿ ಓಣಂ ಆಚರಣೆ ಮಾಡುತ್ತಾರೆ. ವಾಲ್ಮೀಕಿ ಅವತಾರ ಎತ್ತಿದ್ದು ಹನುಮಾನ್ ಚಾಲಿಸ್ ರಚಿಸಿದ ತುಳಸಿ ದಾಸರು ಹುಟ್ಟಿದ್ದು ಇದೆ ತಿಂಗಳಿನಲ್ಲಿ. ಆಧ್ಯಾತ್ಮಿಕವಾಗಿ ಅಷ್ಟೇ ಅಲ್ಲ ಹೋರಾಟ ತ್ಯಾಗ ಬಲಿದಾನಗಳ ಸಂಕೇತವಾದ ಸ್ವಾತಂತ್ರ್ಯ ದಿನ ಬರುವುದು ಈ ಶ್ರಾವಣದಲ್ಲಿ.
ಇದು ಹಿಂದೂ ಸಂಪ್ರದಾಯದ ಚಾಂದ್ರಮಾನ ಪಂಚಾಂಗದ ಐದನೇ ಮಾಸ ಈ ಮಾಸದ ಪ್ರಮುಖ ಹಬ್ಬಗಳು ಅಂದರೆ ನಾಗರಪಂಚಮಿ ರಕ್ಷಾಬಂಧನ ರಾಘವೇಂದ್ರಸ್ವಾಮಿ ಆರಾಧನೆ ಗೋಕುಲಾಷ್ಟಮಿ ಕೃಷ್ಣಏಕಾದಶಿ ಕಲ್ಕಿಜಯಂತಿ ಶ್ರೀವರಮಹಾಲಕ್ಷ್ಮಿ ಪುಜೆ ಶ್ರಾವಣ ಶನಿವಾರ ಹೀಗೆ ಈ ತಿಂಗಳಲ್ಲಿ ಪ್ರತಿದಿನ ಹಬ್ಬ ಪ್ರತಿದಿನ ಪುಣ್ಯದಿನ. ಮನೆ ಮನಗಳಲ್ಲಿ ಅಷ್ಟೇ ಅಲ್ಲ ಹಸಿರು ಹೊದಿಕೆಯನ್ನು ಹೊದ್ದಿರುವ ಪ್ರಕೃತಿಗು ಶ್ರಾವಣ ಎಂದರೆ ಸಂಬ್ರಮ ಶ್ರಾವಣ ಮಾಸ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲ ಉತ್ತರ ಭಾರತದಲ್ಲಿ ಮಹತ್ವ ಹೊಂದಿದೆ.
ಉತ್ತರ ಭಾರತದ ಕಡೆ ಜೂಲೈ ಇಪ್ಪತ್ನಾಲ್ಕಕ್ಕೆ ಆರಂಭವಾಗಿ ಆಗಸ್ಟ್ ಇಪ್ಪತ್ತೆರಡಕ್ಕೆ ಶ್ರಾವಣ ಮಾಸ ಮುಗಿದರೆ ಕರ್ನಾಟಕ ಮಹಾರಾಷ್ಟ್ರ ಗುಜರಾತ ಆಂಧ್ರಪ್ರದೇಶದಲ್ಲಿ ಆಗಸ್ಟ್ ಒಂಬತ್ತರಿಂದ ಸೆಪ್ಟಂಬರ್ ಏಳರವರೆಗೆ ಶ್ರಾವಣ ಮಾಸ ಇರುತ್ತದೆ ಮೇಲೆ ಹೇಳಿದ ಎಲ್ಲ ಹಬ್ಬ ಹರಿದಿನಗಳು ಈ ದಿನಾಂಕದೊಳಗೆ ಬರುತ್ತವೆ.
ಯಾವಾಗ ಯಾವ ಹಬ್ಬ ಇದೆ ಎಂಬುದನ್ನು ನೋಡುವುದಾದರೆ ಮೊದಲನೆಯದಾಗಿ ಮಂಗಳ ಗೌರಿ ವ್ರತ. ಮಂಗಳ ಗೌರಿ ವ್ರತವನ್ನು ಶ್ರಾವಣ ಮಾಸದ ಪ್ರತಿ ಮಂಗಳವಾರ ಆಚರಿಸಲಾಗುತ್ತದೆ ಉತ್ತಮ ಆರೋಗ್ಯ ಐಶ್ವರ್ಯ ವೈವಾಹಿಕ ಜೀವನಕ್ಕಾಗಿ ಈ ವ್ರತ ಸೂಕ್ತ. ವಿವಾಹಿತ ಮಹಿಳೆಯರು ಮೊದಲ ಐದು ವರ್ಷ ಈ ವ್ರತ ಆಚರಿಸುವ ಪದ್ಧತಿ ಇದೆ. ಈ ವರ್ಷ ಆಗಸ್ಟ್ ಹತ್ತು,ಹದಿನೇಳು, ಇಪ್ಪತ್ನಾಲ್ಕು, ಮೂವತ್ತೊಂದು ಮತ್ತು ಸೆಪ್ಟೆಂಬರ್ ಏಳನೇ ತಾರೀಖು ಮಂಗಳವಾರ ಈ ವ್ರತವನ್ನು ಆಚರಿಸಲಾಗುತ್ತದೆ.
ಎರಡನೆಯದು ನಾಗರ ಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ಅಂದರೆ ಆಗಸ್ಟ್ ಹನ್ನೆರಡರಂದು ಆಚರಿಸಲಾಗುತ್ತದೆ ಈ ದಿನ ನಾಗ ದೇವತೆಗಳಿಗೆ ಮಾಡುವಪೂಜೆ ಮಹತ್ವದ್ದು ಎಲ್ಲ ಕೆಡುಕುಗಳಿಂದ ನಮ್ಮನ್ನು ರಕ್ಷಿಸು ಎಂದು ಜನರು ಹಾಲು ಮತ್ತು ಬೆಳ್ಳಿಯ ಆಭರಣಗಳನ್ನು ನಾಗರಿಗೆ ಅರ್ಪಿಸುತ್ತಾರೆ. ಅಣ್ಣ ತಂಗಿ ಇಬ್ಬರೂ ಸೇರಿ ಆಚರಿಸುವ ಹಬ್ಬ ಇದು ಎಂಬ ಪ್ರತೀತಿ ಇದೆ ಹಾಗೆಯೇ ಪಾಂಡವರ ವಂಶದ ಜನಮೆಜಯ ಆಸ್ತಿಕರ ಮಾತಿಗೆ ಬೆಲೆಕೊಟ್ಟು ಸರ್ಪ ಯಜ್ಞ ನಿಲ್ಲಿಸಿದ್ದು ಪಂಚಮಿಯ ಇದೆ ದಿನ. ಸರ್ಪ ದೋಷ ಕಾಳ ಸರ್ಪ ದೋಷ ಇರುವ ವ್ಯಕ್ತಿಗಳಿಗೆ ಸರ್ಪಾರಾಧನೆ ಮಾಡಲು ಒಳ್ಳೆಯ ದಿನ.
ಮೂರನೆಯದಾಗಿ ಕಲ್ಕಿ ಜಯಂತಿ ಭಗವಾನ್ ವಿಷ್ಣುವಿನ ಅವತಾರ ಕಲ್ಕಿ ಎಂದು ಹೇಳಲಾಗುತ್ತದೆ. ಕಲಿಯುಗದಲ್ಲಿ ಎಲ್ಲ ದುಷ್ಟತನವನ್ನು ನಾಶ ಮಾಡಿ ಹೋಸ ಯುಗದ ಆರಂಭಕ್ಕೆ ಕಾರಣನಾಗುವನು ಈ ಕಲ್ಕಿ. ಶ್ರಾವಣ ಮಾಸದ ಆರನೇ ದಿನ ಅಂದರೆ ಆಗಸ್ಟ್ ಹದಿಮೂರರಂದು ಈ ಕಲ್ಕಿ ಜಯಂತಿ ಇದೆ ಈ ದಿನ ವಿಷ್ಣುವಿನ ಪೂಜೆ ಉಪವಾಸ ಮಾಡಿದರೆ ಒಳ್ಳೆಯದಾಗುತ್ತದೆ .
ನಾಲ್ಕನೆಯದಾಗಿ ವರಮಹಾಲಕ್ಷ್ಮಿ ವ್ರತ ಕೋಟಿ ಸೂರ್ಯ ಪ್ರಭೆಗೆ ಸಮನಾದ ಶ್ರೇಷ್ಟವಂತೆ ಈಕೆ ನಿತ್ಯ ಶುದ್ಧ ಮುಗ್ಧ ಸ್ವರುಪಳು ಇವಳು. ಶ್ರಾವಣ ಶುಕ್ರವಾರದ ಅಂದರೆ ಆಗಸ್ಟ್ ಹದಿಮೂರನೇ ತಾರೀಖು ನೀವು ವರಮಹಾಲಕ್ಷ್ಮಿ ವ್ರತ ಮಾಡಬೇಕು ಅದರಿಂದ ನೀವು ಬೇಡಿದ ವರವನ್ನು ದಯಪಾಲಿಸುತ್ತಾಳೆ. ಸಿಂಹ ಕಟಕ ಮೀನ ರಾಶಿಯವರಿಗೆ ವಿಶೇಷವಾಗಿ ಈ ವರ್ಷ ಶುಭವಿದೆ. ಈ ರಾಶಿಯವರು ಸಂಪತ್ತಿಗಾಗಿ ವಿಶೇಷವಾಗಿ ಲಕ್ಷ್ಮಿಯನ್ನು ಆರಾಧಿಸಬಹುದು.
ನಂತರದಲ್ಲಿ ಬರುವುದು ಕೃಷ್ಣ ಜನ್ಮಾಷ್ಟಮಿ ಇದು ಭಾರತದಲ್ಲಿ ಆಚರಿಸುವ ಒಂದು ಪ್ರಮುಖ ಹಬ್ಬ ಕೃಷ್ಣನ ಹುಟ್ಟಿದ ದಿನವೇ ಈ ಕೃಷ್ಣಾಷ್ಟಮಿ ಅಥವಾ ಗೋಕುಲಾಷ್ಟಮಿ. ಶ್ರಾವಣ ಕೃಷ್ಣ ಅಷ್ಟಮಿಯಂದು ಆಗಸ್ಟ್ ಮುವತ್ತನೆ ತಾರಿಕಿನಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಇನ್ನು ಶ್ರಾವಣದಲ್ಲಿ ಉಪವಾಸ ಮಾಡುವ ಪದ್ಧತಿ ಕೂಡ ಇದೆ. ಆಗಸ್ಟ್ ಇಪ್ಪತ್ತು ಹಾಗೂ ಸೆಪ್ಟೆಂಬರ್ ನಾಲ್ಕರಂದು ಪ್ರದೋಷ ಉಪವಾಸ ಮಾಡುವ ದಿನಗಳು ಅಜ ಏಕಾದಶಿ ಅಥವಾ ಕೃಷ್ಣ ಏಕಾದಶಿ ಸೆಪ್ಟೆಂಬರ್ ಮೂರಕ್ಕೆ ಇದೆ. ಈ ದಿನ ಉಪವಾಸ ಮಾಡಿ ಶುದ್ಧ ಮನಸ್ಸಿನಿಂದ ವಿಷ್ಣು ಅಥವಾ ಲಕ್ಷ್ಮಿಯ ಪೂಜೆ ಮಾಡಿದರೆ ದುರಾಸೆ ದೂರವಾಗಿ ಪರಿಶುದ್ಧ ಮನಸ್ಸು ನಿಮ್ಮದಾಗುತ್ತದೆ ಹಾಗೆ ಮನಸ್ಸಿನ ಮೇಲೆ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಬಹುದು.
ಕನ್ಯಾ ರಾಶಿಯವರಿಗೆ ಪಂಚಮಶನಿ ಮಿಥೂನರಾಶಿಯವರಿಗೆ ಅಷ್ಟಮಾಶನಿ ತುಲಾರಾಶಿಯವರಿಗೆ ಅರ್ಧ ಅಷ್ಟಮಿಶನಿ ಇರುತ್ತದೆ. ಕಷ್ಟದಲ್ಲಿರುವ ಈ ರಾಶಿಯ ವ್ಯಕ್ತಿಗಳು ಈ ಶುಭ ದಿನವನ್ನು ಆಚರಿಸಿ ದುಃಖ ದೂರ ಮಾಡಿಕೊಳ್ಳುವುದು ಸೂಕ್ತ. ಶ್ರಾವಣ ಮಾಸದಲ್ಲಿ ಸಂಕಷ್ಟಿ ಆಗಸ್ಟ್ ಇಪ್ಪತ್ತೈದಕ್ಕೆ ಇದೇ ಆದಿನ ನೀವು ಉಪವಾಸಮಾಡಿದರೆ ಚಂದ್ರೋದಯ ರಾತ್ರಿ ಎಂಟು ಐವತ್ತೈದಕ್ಕೆ ಇದೆ. ಮೇಷ ವೃಶ್ಚಿಕ ರಾಶಿಯವರಿಗೆ ಆರಾಧ್ಯ ಈ ಗಣೇಶ. ಮೇಷ ವೃಶ್ಚಿಕ ರಾಶಿಯವರು ಈ ಪವಿತ್ರ ಶ್ರಾವಣ ಸಂಕಷ್ಟಿಯನ್ನು ಆಚರಿಸಬಹುದು. ಕುಜ ದೋಷ ಇರುವವರಿಗು ಈ ಆಚರಣೆ ಸೂಕ್ತವಾಗಿದೆ.
ಇವೆಲ್ಲದರ ಜೊತೆಗೆ ರಕ್ಷಾ ಬಂಧನ ಆಗಸ್ಟ್ ಇಪ್ಪತ್ತೆರಡಕ್ಕೆ ಇದೆ ಅವತ್ತು ಹುಣ್ಣಿಮೆ ಕೂಡ ಇದೆ ರಕ್ಷಾಬಂಧನವನ್ನು ನೂಲು ಹುಣ್ಣಿಮೆ ಅಂತ ಆಡು ಭಾಷೆಯಲ್ಲಿ ಕರೆಯುತ್ತಾರೆ. ಅಣ್ಣ ತಂಗಿಯ ಭಾಂದವ್ಯವನ್ನು ಹೆಚ್ಚಿಸುವ ದಿನ ಇದು ರಾಖಿಯನ್ನು ತಂಗಿಯಿಂದ ಕಟ್ಟಿಕೊಳ್ಳುವ ಮೂಲಕ ಜೀವನ ಪೂರ್ತಿ ರಕ್ಷಣೆಯ ಭರವಸೆ ನೀಡುವ ಹಬ್ಬ ಇದು.
ಇನ್ನು ಶ್ರಾವಣ ಅಮಾವಾಸ್ಯೆ ಯಾವಾಗ ಎಂಬುದನ್ನು ನೋಡುವುದಾದರೆ ಸೆಪ್ಟೆಂಬರ್ ಏಳನೇ ತಾರಿಕಿನಂದು ಇದೆ ಇವೆಲ್ಲ ಶ್ರಾವಣ ಮಾಸದ ಮಹತ್ವವನ್ನು ಹೆಚ್ಚಿಸುವ ಹಬ್ಬಗಳಾದರೆ ಈ ಮಾಸದಲ್ಲಿ ಶಿವನನ್ನು ಪೂಜಿಸುವುದರಿಂದ ಆಗುವ ಪ್ರಯೋಜನ ಏನು ಇದರ ಹಿನ್ನೆಲೆ ಏನು ಯಾವ ರಾಶಿಯವರು ಶಿವನ ಆರಾಧನೆ ಅರ್ಚನೆಯಿಂದ ಲಾಭ ಪಡೆಯಬಹುದು ಎಂಬುದನ್ನು ನೋಡೊಣ.
ಈ ಶ್ರಾವಣ ಮಾಸದಲ್ಲಿ ಸೋಮವಾರ ಶಿವನ ಅನುಗ್ರಹ ಪಡೆಯಲು ಬಹಳ ಸೂಕ್ತವಾಗಿದೆ ಶಿವನ ಆರಾಧನೆ ವ್ಯಕ್ತಿಯ ಮನಸ್ಸು ದೇಹ ಇಂದ್ರಿಯ ಹಾಗೂ ಆತ್ಮವನ್ನು ಶುದ್ಧಿಕರಿಸುತ್ತದೆ ಅದಕ್ಕೆ ಈ ತಿಂಗಳಲ್ಲಿ ಶಿವಭಕ್ತರು ಉಪವಾಸ ಮತ್ತು ಪ್ರಾರ್ಥನೆಯನ್ನು ಮಾಡುತ್ತಾರೆ ಪುರಾಣದಲ್ಲು ಶ್ರಾವಣ ಮಾಸದ ಉಪವಾಸದ ಬಗ್ಗೆ ಉಲ್ಲೇಖಿಸಲಾಗಿದೆ.
ಇನ್ನು ಕೆಲವರು ಉಪವಾಸದೊಂದಿಗೆ ಮೌನ ವ್ರತವನ್ನು ಮಾಡುತ್ತಾರೆ. ಸದ್ಯಕ್ಕೆ ಧನು ಮಕರ ಕುಂಭ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದೆ ಈ ಎಲ್ಲಾ ರಾಶಿಯವರು ಶಿವನನ್ನು ಆರಾಧನೆ ಮಾಡಬೇಕು ಇದರಿಂದ ಮಾನಸಿಕ ನೆಮ್ಮದಿ ಸಮಾಧಾನ ಸಿಗುವುದಲ್ಲದೆ ಶಿವನನ್ನು ಸ್ಮರಿಸಿದರೆ ಶನಿ ದೂರ ಹೋಗುತ್ತಾನೆ ಎಂಬ ನಂಬಿಕೆ ಇದೆ. ನೀವು ಕೂಡ ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳನ್ನು ಆಚರಿಸಿ ವ್ರತಗಳನ್ನು ಪಾಲಿಸಿ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ.