ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಕ್ಕೆ ಒಂದು ಬಾರಿ ಶನಿ ವಕ್ರನಾಗುತ್ತಾನೆ. ಶನಿ ವಕ್ರನಾಗಿ 12 ರಾಶಿಗಳಲ್ಲಿ ಕೆಲವು ರಾಶಿಯಲ್ಲಿ ಜನಿಸಿದವರಿಗೆ ಉತ್ತಮ ಫಲ ಇನ್ನು ಕೆಲವರಿಗೆ ಮಧ್ಯಮ ಫಲ ಇನ್ನು ಕೆಲವರಿಗೆ ಸಾಧಾರಣ ಫಲ ದೊರೆಯುತ್ತದೆ. ಯಾವ ರಾಶಿಯವರಿಗೆ ಯಾವ ಫಲ ಸಿಗಲಿದೆ ಎಂದು ಈ ಲೇಖನದಲ್ಲಿ ನೋಡೋಣ
ಪ್ರಸ್ತುತ ಶನಿ ಕುಂಭ ರಾಶಿಯಲ್ಲಿ ಸ್ಥಿತನಾಗಿದ್ದು ವಕ್ರನಾಗುತ್ತಾನೆ, ಹೀಗೆ ವಕ್ರನಾದಾಗ ಶನಿ ಮಕರ ರಾಶಿಯನ್ನು ನೋಡುತ್ತಾನೆ ಮಕರ ರಾಶಿಯ ಅಧಿಪತಿ ಶನಿಯಾಗಿರುತ್ತಾನೆ ಅಂದರೆ ಶನಿ ತನ್ನ ಸ್ವಂತ ಮನೆಯಿಂದ ಇನ್ನೊಂದು ಸ್ವಂತ ಮನೆಯನ್ನು ನೋಡುತ್ತಾನೆ. ಜೂನ್ 29ರಂದು ಶನಿ ತನ್ನ ವಕ್ರಗತಿಯನ್ನು ಪ್ರಾರಂಭ ಮಾಡುತ್ತಾನೆ ನವೆಂಬರ್ 8ರವರೆಗೆ ಶನಿ ವಕ್ರನಾಗಿರುತ್ತಾನೆ. ಕೆಲವು ರಾಶಿಯವರಿಗೆ ರಾಜಯೋಗ ಉಂಟಾಗುತ್ತದೆ ಇನ್ನೂ ಕೆಲವು ರಾಶಿಯವರಿಗೆ ನಿಧಾನ ಗತಿಯಲ್ಲಿ ಕೆಲಸವಾಗುತ್ತದೆ, ದೇಹದಲ್ಲಿ ನೋವು ಕಾಣಿಸುತ್ತದೆ ಆಗಾಗ ತಲೆನೋವು ಕೈ ನೋವು ಕಾಲು ನೋವು ಹೀಗೆ ನೋವು ಕಾಣುತ್ತದೆ, ಯಾವಾಗಲೂ ಯೋಚನೆ ಮಾಡುತ್ತಿರುತ್ತಾರೆ ಇದರಿಂದ ಮಾನಸಿಕವಾಗಿ ಸ್ಟ್ರೆಸ್ ಆಗುತ್ತದೆ. ಮೇಷ ರಾಶಿಗೆ ದಶಮದಲ್ಲಿ ಶನಿ ಇರುವುದರಿಂದ ಮೇಷ ರಾಶಿಯವರಿಗೆ ಒಳ್ಳೆಯದಾಗುತ್ತದೆ ಈಗಾಗಲೆ ಅವರಿಗೆ ಗುರುಬಲ ಇರುವುದರಿಂದ ಉದ್ಯೋಗದಲ್ಲಿ ಉತ್ತಮ ಸ್ಥಾನಕ್ಕೆ ಹೋಗುತ್ತಾರೆ.
ವೃಷಭ ರಾಶಿಯವರಿಗೆ ದಶಮದಲ್ಲಿರುವ ಶನಿ ಭಾಗ್ಯದ ಫಲಗಳನ್ನು ಕೊಡುತ್ತಾನೆ, ಶುಭಕಾರ್ಯಗಳು ನಡೆಯುತ್ತವೆ, ನಿಂತು ಹೋಗಿರುವ ಕೆಲಸಗಳು ಪೂರ್ಣವಾಗುತ್ತದೆ. ಶನಿ ವಕ್ರನಾಗಿರುವುದು ಮಿಥುನ ರಾಶಿಯವರಿಗೆ ಅಷ್ಟಮ ಶನಿ ನಡೆಯುತ್ತಿರುತ್ತದೆ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮಿಥುನ ರಾಶಿಯವರು ಒಮ್ಮೆ ಮೂಲ ಜಾತಕವನ್ನು ಪರಿಶೀಲಿಸುವುದು ಒಳ್ಳೆಯದು. ಮಿಥುನ ರಾಶಿಯವರು ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಕರ್ಕಾಟಕ ರಾಶಿಯವರಿಗೆ ಉತ್ತಮ ಫಲ ಸಿಗುತ್ತದೆ ಗುರುಬಲವಿದೆ ಹೀಗಾಗಿ ಯಾವುದೆ ಸಮಸ್ಯೆ ಇಲ್ಲ, ಮನೋನಿಗ್ರಹ ಉತ್ತಮವಾಗಿರುತ್ತದೆ ದೈಹಿಕ ಬಲ ಹೆಚ್ಚುತ್ತದೆ. ಸಿಂಹ ರಾಶಿಯವರಿಗೆ ಉತ್ತಮ ಫಲ ದೊರೆಯುತ್ತದೆ, ಅದ್ಭುತ ಯೋಗವಿರುತ್ತದೆ ಆದರೆ ಸಾಲ ಮಾಡುವ ಸಾಧ್ಯತೆ ಇರುತ್ತದೆ. ಮೂಲ ಜಾತಕ ಉತ್ತಮವಾಗಿದ್ದರೆ ಏನು ಸಮಸ್ಯೆ ಇಲ್ಲ ಒಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ಕನ್ಯಾ ರಾಶಿಯವರಿಗೆ ಪಂಚಮ ಶನಿ ಪ್ರಭಾವ ಇರುತ್ತದೆ ಇದರಿಂದ ಗೊಂದಲ ಇರುತ್ತದೆ ಜೊತೆಗೆ ದೂರ ಪ್ರಯಾಣದಲ್ಲಿ ಸಣ್ಣಪುಟ್ಟ ಕಿರಿಕಿರಿ ಉಂಟಾಗಬಹುದು. ಗುರುಬಲ ಇರುವುದರಿಂದ ತೊಂದರೆ ಇಲ್ಲ ಆದರೆ ನಿಧಾನವಾಗಿ ಕೆಲಸವಾಗುತ್ತದೆ ಹೀಗಾಗಿ ಕನ್ಯಾ ರಾಶಿಯವರು ಜೂನ್ 29 ರ ಒಳಗಾಗಿ ಒಳ್ಳೆಯ ಕೆಲಸಗಳಗಳನ್ನು ಮಾಡಿಕೊಳ್ಳುವುದು ಉತ್ತಮ.
ತುಲಾ ರಾಶಿಯವರಿಗೆ ಅರ್ಧಾಷ್ಟಮ ಶನಿ ಪ್ರಭಾವ ಇರುತ್ತದೆ ಗುರುಬಲ ಇರುವುದಿಲ್ಲ ಹೀಗಾಗಿ ಸುತ್ತಮುತ್ತಲಿನ ಜನರಿಂದ ಬೇಸರವಾಗಬಹುದು ತುಲಾ ರಾಶಿಯವರು ಪ್ರಾಣಿಗಳಿಗೆ ಆಹಾರ ಕೊಡುವುದರಿಂದ ಒಳ್ಳೆಯದಾಗುತ್ತದೆ. ತುಲಾ ರಾಶಿಯವರು ಮೂಲ ಜಾತಕವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ವೃಶ್ಚಿಕ ರಾಶಿಯವರಿಗೆ ಶನಿ ವಕ್ರವಾಗಿರುವುದರಿಂದ ಉತ್ತಮ ಫಲ ದೊರೆಯುತ್ತದೆ. ಈ ಸಮಯದಲ್ಲಿ ವೃಶ್ಚಿಕ ರಾಶಿಯವರು ಉದ್ಯೋಗ ಬದಲಾಯಿಸಬಹುದು ಉದ್ಯೋಗ ಹುಡುಕಬಹುದು. ಮನೆಯಲ್ಲಿ ಸಣ್ಣ ಪುಟ್ಟ ಜಗಳ ಮನಸ್ತಾಪ ಬರಬಹುದು. ಧನಸ್ಸು ರಾಶಿಯವರಿಗೆ ಗುರುಬಲ ಇರುವುದಿಲ್ಲ ಸಾಡೇಸಾತ್ ನ ಅಂತ್ಯದ ಸಮಯವಾಗಿರುತ್ತದೆ ಹೀಗಾಗಿ ಹೆಚ್ಚು ಭಯಪಡುವ ಅವಶ್ಯಕತೆ ಇಲ್ಲ. ಮಕರ ರಾಶಿಯವರು ಜನ್ಮ ಜಾತಕವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ ಜನ್ಮ ಜಾತಕದಲ್ಲಿ ಶನಿಯ ಪ್ರಭಾವ ಎಷ್ಟಿದೆ ಎನ್ನುವುದರ ಆಧಾರದ ಮೇಲೆ ತೊಂದರೆಗಳು ಬರುತ್ತದೆ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ತೊಂದರೆ ಇಲ್ಲ.
ಕುಂಭ ರಾಶಿಯವರಿಗೆ ಶನಿ ವಕ್ರವಾಗಿರುವುದು ಪ್ರಾರಂಭ ಶನಿಯಾಗಿರುತ್ತದೆ ಅಂದರೆ ಸುತ್ತಮುತ್ತಲಿನ ಜನರು ಹೇಗಿರುತ್ತಾರೆ ಅವರ ಬಗ್ಗೆ ತಿಳಿಯುವ ಸಮಯವಾಗಿರುತ್ತದೆ ಜೀವನದ ಪಾಠ ನೋಡುವ ಸಮಯವಾಗಿದೆ. ಮೀನ ರಾಶಿಯವರಿಗೆ ಈ ಸಮಯ ರಾಜಯೋಗ ಇರುತ್ತದೆ ಈ ಸಮಯದಲ್ಲಿ ಮೀನ ರಾಶಿಯವರು ಉತ್ತಮ ಫಲಗಳನ್ನು ಪಡೆಯುತ್ತಾರೆ. ಮಿಥುನ ಕನ್ಯಾ ತುಲಾ ಧನು ಮಕರ ಕುಂಭ ರಾಶಿಯವರು ಶನಿವಾರದಂದು ಶನಿ ದೇವಸ್ಥಾನಕ್ಕೆ ಹೋಗುವುದು, ಹನುಮಾನ್ ಚಾಲೀಸಾ ಪಠಣ ಮಾಡುವುದು, ವಿಷ್ಣು ಸಹಸ್ರನಾಮ ಪಠಿಸುವುದು ಅಕ್ಕಿ ದಾನ ಮಾಡುವುದು ಶನೇಶ್ವರನಿಗೆ ಎಳ್ಳೆಣ್ಣೆ ತೈಲಾಭಿಷೇಕ ಮಾಡಿಸುವುದು. ಈ ರಾಶಿಗಳಲ್ಲಿ ಜನಿಸಿದವರಿಗೆ ಸೊಂಬೇರಿತನ ಬರುತ್ತದೆ ಕೆಲಸದ ಒತ್ತಡ ಜಾಸ್ತಿಯಾಗುತ್ತದೆ, ತಲೆನೋವು ಮೈಕೈ ನೋವು ಬರುತ್ತದೆ ಈ ರಾಶಿಗಳಲ್ಲಿ ಜನಿಸಿದವರು ತಪ್ಪದೆ ಪರಿಹಾರ ಮಾಡಿಕೊಳ್ಳುವುದು ಉತ್ತಮ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519