ಕನ್ನಡ ಚಿತ್ರರಂಗದ ಮಾಣಿಕ್ಯ ಪುನೀತ್ ರಾಜಕುಮಾರ್ ಅವರಿಗೆ ನಮನವನ್ನು ಸಲ್ಲಿಸುವ ಉದ್ದೇಶದಿಂದ ಮಂಗಳವಾರ ಬೆಂಗಳೂರು ಅರಮನೆ ಮೈದಾನದಲ್ಲಿ ಪುನೀತ್ ನಮನ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯಾತಿಗಣ್ಯರು ಭಾಗವಹಿಸಿದ್ದರು ಚಿತ್ರರಂಗದವರು ಕುಟುಂಬಸ್ಥರು ಶಕ್ತಿಧಾಮ ಆಶ್ರಮದ ಮಕ್ಕಳು ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪ್ಪು ಅವರಿಗೆ ನುಡಿನಮನ ಸಲ್ಲಿಸಿದರು. ಆ ಸಮಯದಲ್ಲಿ ಮಾಧ್ಯಮದವರ ಎದುರಿಗೆ ಶಕ್ತಿ ಧಾಮದ ಮಕ್ಕಳು ಅಪ್ಪು ಅವರ ಕುರಿತಾದ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ ಅವರು ಅಪ್ಪುವಿನ ಕುರಿತಾಗಿ ಏನು ಹೇಳಿದ್ದಾರೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಅಪ್ಪು ಅವರನ್ನು ಕಳೆದುಕೊಂಡ ನೋವು ಎಲ್ಲರಿಗೂ ಇದೆ ಅದರಿಂದ ಹೊರಬರುವುದಕ್ಕೆ ಯಾರಿಗೂ ಸಾಧ್ಯವಾಗುತ್ತಿಲ್ಲ. ಅವರು ನಡೆಸುತ್ತಿದ್ದ ಶಕ್ತಿ ಧಾಮದ ಮಕ್ಕಳಿಗೂ ಕೂಡ ತುಂಬಾ ನೋವಾಗಿದೆ ಅವರು ಅಪ್ಪು ಅವರ ಕುರಿತಾಗಿ ಏನು ಹೇಳುತ್ತಾರೆಂದರೆ ಅಪ್ಪು ಅವರು ಇಲ್ಲ ಎನ್ನುವುದನ್ನು ನಮಗೆ ನಂಬುವುದಕ್ಕೆ ಆಗುತ್ತಿಲ್ಲ ಅವರು ನಮ್ಮ ಜೊತೆ ಇದ್ದಾರೆ ಎನಿಸುತ್ತಿದೆ.
ಅವರ ಕುಟುಂಬದವರು ಕೂಡ ನಮಗೆ ಯಾವುದೇ ರೀತಿಯ ಭೇದಭಾವ ಮಾಡುವುದಿಲ್ಲ ಅಪ್ಪು ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ಅವರು ನಮ್ಮ ಜೊತೆಗೆ ಇದ್ದು ನಮ್ಮನ್ನು ಆಶೀರ್ವದಿಸುತ್ತಾರೆ ಅವರ ನಗುವೇ ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳುತ್ತಾರೆ. ಅಪ್ಪು ಆಗಾಗ ಆಶ್ರಮಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಅವರ ನೋವು ಕಷ್ಟಗಳ ಬಗ್ಗೆ ವಿಚಾರಿಸುತ್ತಿದ್ದರು.
ಅವರು ನಮ್ಮೊಂದಿಗೆ ಇಲ್ಲ ಎಂದು ಅಂದುಕೊಳ್ಳುವುದೇ ಇಲ್ಲ ಅವರು ನಮ್ಮ ಜೊತೆ ಇದ್ದಾರೆ ಅವರು ನಮಗೆ ತಂದೆಯ ಸ್ಥಾನ ಅಣ್ಣನ ಸ್ಥಾನವನ್ನು ನೀಡಿದ್ದಾರೆ. ನಾವು ಏನೇ ಕೇಳಿದರು ಅದನ್ನ ಕೊಡಿಸುತ್ತಿದ್ದರು ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿದ್ದರು ಪಾರ್ವತಮ್ಮ ಅವರ ಹುಟ್ಟುಹಬ್ಬಕ್ಕೆ ನಮಗೆಲ್ಲರಿಗೂ ಬಟ್ಟೆ ಕೊಡಿಸುತ್ತಿದ್ದರು. ಶಕ್ತಿ ಧಾಮಕ್ಕೆ ಬರುವ ಸಮಯದಲ್ಲಿ ಮಕ್ಕಳೆಲ್ಲರಿಗೂ ಗಿಫ್ಟ್ ಅನ್ನು ತೆಗೆದುಕೊಂಡು ಬರುತ್ತಿದ್ದರು. ಅವರು ಇಲ್ಲ ಎಂದು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಎಲ್ಲಾ ಕಡೆಗಳಲ್ಲಿ ಅವರ ಫೋಟೋ ಕಳಿಸುತ್ತದೆ ಅವರ ನಗುಮುಖ ನೋಡಿದಾಗ ಅವರು ನಮ್ಮೊಟ್ಟಿಗೆ ಇದ್ದಾರೆ ಎನಿಸುತ್ತದೆ.
ಅಪ್ಪು ಅವರು ಶಕ್ತಿಧಾಮದಲ್ಲಿರುವ ಮಕ್ಕಳಿಗೆ ಎಲ್ಲ ಸೌಲಭ್ಯವನ್ನು ಒದಗಿಸಿದ್ದಾರೆ ಯಾವುದೇ ಸೌಲಭ್ಯ ಇಲ್ಲ ಎನ್ನುವಂತಿಲ್ಲ. ಅಪ್ಪು ಅವರು ವಿದೇಶಕ್ಕೆ ಹೋದರೆ ಅಲ್ಲಿಂದ ಮಕ್ಕಳಿಗೆ ಗಿಫ್ಟ್ ಗಳನ್ನು ತೆಗೆದುಕೊಂಡು ಬರುತ್ತಿದ್ದರಂತೆ. ಅವರು ಮಕ್ಕಳ ಜೊತೆ ಕುಳಿತು ಊಟ ಮಾಡುತ್ತಿದ್ದರಂತೆ ಮಕ್ಕಳಿಗೆ ಊಟ ಬಡಿಸುತ್ತಿದ್ದರಂತೆ. ಶಕ್ತಿ ಧಾಮಕ್ಕೆ ಭೇಟಿ ಕೊಟ್ಟಾಗ ಪುನೀತ್ ರಾಜಕುಮಾರ್ ಅವರು ಮಕ್ಕಳು ಒಟ್ಟಿಗೆ ಬೆರೆಯುತ್ತಿದ್ದರು ಮಕ್ಕಳೊಂದಿಗೆ ಹಾಡು ಹೇಳುವುದು ಡಾನ್ಸ್ ಮಾಡುವುದನ್ನು ಮಾಡುತ್ತಿದ್ದರಂತೆ. ಪುನೀತ್ ರಾಜಕುಮಾರ್ ಅವರ ಕುಟುಂಬದವರು ಶಕ್ತಿಧಾಮದ ಮಕ್ಕಳನ್ನು ಸ್ವಂತ ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು ಅವರಿಗೆ ಯಾವುದೇ ರೀತಿಯ ಕೊರತೆ ಆಗದೆ ಇರುವ ರೀತಿ ನೋಡಿಕೊಳ್ಳುತ್ತಿದ್ದರು.
ಅವರು ಈಗ ಇಲ್ಲ ಎನ್ನುವುದನ್ನು ಆ ಮಕ್ಕಳಿಗೆ ಜೀರ್ಣಿಸಿಕೊಳ್ಳುವುದುಕ್ಕೆ ಸಾಧ್ಯವಾಗುತ್ತಿಲ್ಲ ಅವರು ನಮ್ಮ ಜೊತೆ ಸದಾಕಾಲ ಇರುತ್ತಾರೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರಿಗಾಗಿ ಮಕ್ಕಳೆಲ್ಲರೂ ಸೇರಿ ಸಾಗರದ ಅಲೆಗೂ ದಣಿವು ಹಾಡನ್ನು ಹಾಡಿದರು. ಇಷ್ಟು ಬೇಗ ಅಪ್ಪು ಅವರಿಗೆ ನಮನ ಕಾರ್ಯಕ್ರಮವನ್ನು ನಡೆಸುತ್ತೇವೆ ಎಂದು ಯಾರೂ ಕೂಡ ಊಹಿಸಿರಲಿಲ್ಲ ಆದರೆ ವಿಧಿಯ ಮುಂದೆ ಎಲ್ಲರೂ ತಲೆ ತಗ್ಗಿಸಲೇಬೇಕು. ಈ ರೀತಿಯಾಗಿ ಅಪ್ಪು ಅವರ ಅಗಲಿಕೆಯಿಂದ ಎಲ್ಲರಿಗೂ ನೋವಾಗಿದ್ದು ಇಂದಿಗೂ ಕೂಡ ಅವರು ನಮ್ಮ ನಡುವೆ ಇಲ್ಲ ಎನ್ನುವುದನ್ನು ಯಾರಿಂದಲೂ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430