Shakti yojana karnataka: ನಮ್ಮ ರಾಜ್ಯದಲ್ಲಿ ಶಕ್ತಿ ಯೋಜನೆ ಶುರು ಆದಾಗಿನಿಂದ ಬಸ್ ಗಳಲ್ಲಿ ಓಡಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಮಹಿಳೆಯರು ಬಸ್ ಗಳಲ್ಲಿ ಫ್ರೀಯಾಗಿ ಪ್ರಯಾಣ ಮಾಡುತ್ತಿದ್ದಾರೆ. ಇತ್ತ ಪುರುಷರು ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಿರುವಾಗ ಬಸ್ ಪ್ರಯಾಣದಲ್ಲಿ ಒಂದು ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಅದು ಟಿಕೆಟ್ ವಿತರಣೆ ಸಮಸ್ಯೆ ಎಂದರೆ ತಪ್ಪಲ್ಲ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಡುತ್ತಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬೇಕು ಎಂದರೆ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿಯನ್ನು ತೋರಿಸಲೇಬೇಕು. ಆಗ ಮಾತ್ರ ಅವರಿಗೆ ಫ್ರೀ ಟಿಕೆಟ್ ಸಿಗುತ್ತದೆ. ಆದರೆ ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿ ಅಥವಾ ಬೇರೆ ಕಾರಣಗಳಿಂದ ಮಹಿಳೆಯರು ಆಧಾರ್ ಕಾರ್ಡ್ ತರಲು ಆಗಿರುವುದಿಲ್ಲ.

ಅಂಥ ಪರಿಸ್ಥಿತಿಗಳಲ್ಲಿ ಆಧಾರ್ ಕಾರ್ಡ್ ಫೋಟೋ ತೋರಿಸಿ ಟಿಕೆಟ್ ಪಡೆಯುವ ಪ್ರಯತ್ನ ಮಾಡಿದಾಗ, ಕಂಡಕ್ಟರ್ ಅಥವಾ ಟಿಕೆಟ್ ಕೊಡುವವರು ಮಹಿಳೆಯರ ಮೇಲೆ ರೇಗಾಡಿರುವ, ಮಹಿಳೆಯರ ಜೊತೆಗೆ ಜಗಳ ಆಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಆಧಾರ್ ಕಾರ್ಡ್ ಇಲ್ಲದೆ ಹೋದರೆ ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದ್ದು ಇದೆ. ಈ ರೀತಿ ಆದ ಕಾರಣ ಸರಕಾರಕ್ಕೆ ಸಾಕಷ್ಟು ಮಹಿಳೆಯರು ದೂರು ನೀಡಿದ್ದರು..

ತಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದರು. ಇದೀಗ ಸರ್ಕಾರವು ಮಹಿಳೆಯರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. ಮಹಿಳೆಯರು ಬಸ್ ಟಿಕೆಟ್ ಪಡೆಯುವ ವಿಚಾರಕ್ಕೆ ಸರ್ಕಾರ ಈಗ ಮಹಿಳೆಯರ ಪರವಾಗಿ ಹೊಸ ಆದೇಶ ನೀಡಿದೆ. ಅದೇನು ಎಂದರೆ ಇನ್ನುಮುಂದೆ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಫೋಟೋ ತೋರಿಸಿ ಪ್ರಯಾಣ ಮಾಡಬಹುದು.

ಹೌದು, ಆಧಾರ್ ಕಾರ್ಡ್ ಡಿಜಿ ಲಾಕರ್ ನಲ್ಲಿ ಇದ್ದರೆ, ಅಥವಾ ಆಧಾರ್ ಕಾರ್ಡ್ ನ ಸಾಫ್ಟ್ ಕಾಪಿ ನಿಮ್ಮ ಬಳಿ ಇದ್ದರೆ, ಅದನ್ನು ಕಂಡಕ್ಟರ್ ಗೆ ತೋರಿಸಿ ನೀವು ಹೋಗಬೇಕಿರುವ ಜಾಗಕ್ಕೆ ನಿಷ್ಚಿಂತೆ ಇಂದ ಹೋಗಬಹುದು. ಮಹಿಳೆಯರ ಜೊತೆಗೆ ಟಿಕೆಟ್ ನಿರ್ವಾಹಕರು ಕೂಡ ಕಠೋರವಾಗಿ ನಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ರೀತಿಯಾಗಿ ಸರ್ಕಾರವು ಇಂಥದ್ದೊಂದು ಆದೇಶವನ್ನು ಜಾರಿಗೆ ತಂದಿದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!