ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. ಹುಟ್ಟಿದ ದಿನಾಂಕ ಹಾಗೂ ಸಮಯ ಕೂಡ ರಾಶಿಯ ಮೇಲೆ ಪ್ರಭಾವ ಬೀರುತ್ತದೆ.

ಪ್ರತಿಯೊಂದು ರಾಶಿಯ ಜನರ ಗುಣ ಸ್ವಭಾವ ವಿಭಿನ್ನವಾಗಿ ಇರುತ್ತದೆ. ವೃಶ್ಚಿಕ ರಾಶಿಯ ಜನರು ಕೂಡ ಅವರದೇ ಆದ ಗುಣ ಸ್ವಭಾವವನ್ನು ಹೊಂದಿದ್ದಾರೆ. ವೃಶ್ಚಿಕ ರಾಶಿಯ ಜನರು ನಂಬಲು ಅರ್ಹರಲ್ಲ, ಇವರು ಹೆಚ್ಚಾಗಿ ಮಾತನಾಡುವರು. ವಿಷಯವನ್ನು ಗೌಪ್ಯವಾಗಿ ಇಡುವ ಮತ್ತು ರಹಸ್ಯವಾಗಿ ಇಡುವುದು ಈ ರಾಶಿಯವರ ಸ್ವಭಾವ. ವೃಶ್ಚಿಕ ರಾಶಿಯವರ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಅವರ ಜೊತೆ ಸ್ವಲ್ಪ ಕಾಲ ಸಮಯ ಕಳೆಯಬೇಕು ಅದರಿಂದ ಅವರ ನಿಜ ರೂಪದ ಪರಿಚಯ ಆಗುತ್ತದೆ.

ವೃಶ್ಚಿಕ ರಾಶಿಯ ಜನರು ಮಾತಿನ ಮಲ್ಲರು ಅವರು ಕೊಡುವ ಮಾತಿಗೆ ಎಂದಿಗೂ ತಪ್ಪುವುದಿಲ್ಲ. ಈ ರಾಶಿಯ ಜನರು ಬೇರೆಯವರ ವೈಯಕ್ತಿಕ ವಿಚಾರಗಳನ್ನು ಗೌರವಿಸುತ್ತಾರೆ. ಬೇರೆಯವರಿಂದ ಕೂಡ ಅದೇ ಗೌರವವನ್ನು ಬಯಸುತ್ತಾರೆ. ವೃಶ್ಚಿಕ ರಾಶಿ ಜಲ ತತ್ವ ರಾಶಿಯಾಗಿದೆ. ಈ ರಾಶಿಯ ಅಧಿಪತಿ ಮಂಗಳ ಗ್ರಹ. ಇವರ ವ್ಯಕ್ತಿತ್ವ ಸುಂದರವಾಗಿರುತ್ತದೆ ಮತ್ತು ಈ ಜನರು ಹೆಚ್ಚಿನ ಸಾಹಸಿಗಳಾಗಿ ಇರುತ್ತಾರೆ. ಅವರಿಗೆ ಇಷ್ಟವಾದ ದಾರಿಯಲ್ಲಿ ಹೋಗುವರು. ಯಾರ ಹಸ್ತಕ್ಷೇಪವು ಇವರಿಗೆ ಇರುವುದಿಲ್ಲ.

ಈ ರಾಶಿಯವರು ಅವರ ಕಾರ್ಯಗಳನ್ನು ಚೆನ್ನಾಗಿ ನಿಭಾಯಿಸುವರು. ಇವರು ಹೆಚ್ಚಿನ ಸಮಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ ಮತ್ತು ತುಂಬಾ ಬಲಿಷ್ಠವಾಗಿ ಇರುತ್ತಾರೆ. ಈ ಜನರನ್ನು ಅನಾರೋಗ್ಯ ಹೆಚ್ಚಾಗಿ ಕಾಣುವುದಿಲ್ಲ. ಇವರು ದೃಢ ಪ್ರತಿಜ್ಞೆಯನ್ನು ಮಾಡುತ್ತಾರೆ. ಈ ರಾಶಿಯವರು ಯಾರಿಗಾದರೂ ಮಾತು ಕೊಟ್ಟರೆ ಆ ಮಾತನ್ನು ಎಂದಿಗೂ ಉಳಿಸಿಕೊಳ್ಳುತ್ತಾರೆ. ವೃಶ್ಚಿಕ ರಾಶಿಯ ಜನರಲ್ಲಿ ಕೋಪ ಹೆಚ್ಚಾಗಿರುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ಬೇಗ ಕೋಪ ಬರುತ್ತದೆ.

ಇವರ ನೇರ ನುಡಿಗಳು ಕೆಲವರಿಗೆ ಇಷ್ಟ ಆಗದೇ ಇರಬಹುದು ಮತ್ತು ಅವರಿಗೆ ತೊಂದರೆಗಳನ್ನು ತಂದು ಕೊಡಬಹುದು. ಬೇರೆಯವರ ಬಗ್ಗೆ ಯೋಚನೆ ಮಾಡದೆ ನೇರವಾಗಿ ವಾದಕ್ಕೆ ಇಳಿಯುವರು. ಇವರು ಹೊರಗಿನಿಂದ ಕಠೋರವಾಗಿ ಕಾಣುವರು ಮತ್ತು ಇವರ ಮಾತು ಹೊರಗಿನಿಂದ ಕಠೋರವಾಗಿ ಇರುತ್ತದೆ. ಆದರೆ ಈ ರಾಶಿಯ ಜನರ ಮನಸ್ಸು ತುಂಬಾ ಮೃದುವಾಗಿರುತ್ತದೆ. ಈ ರಾಶಿಯ ಜನರು ಭಾವ ಜೀವಿಗಳು ಅವರ ಭಾವನೆಗಳನ್ನು ಯಾರ ಮುಂದೆ ಕೂಡ ತೋರಿಸುವುದಿಲ್ಲ. ಆದ್ದರಿಂದ, ಇವರನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ ಆಗುತ್ತದೆ.

ಈ ರಾಶಿಯ ಜನರಿಗೆ ಅವರ ತಾಯಿಯ ಜೊತೆ ಹೆಚ್ಚಿನ ಬಾಂಧವ್ಯ ಇರುತ್ತದೆ. ಇವರು ಜನರ ಜೊತೆ ಬೇಗ ಬೆರೆಯುವರು ಹಾಗೂ ಇವರ ಮೆಮೊರಿ ಪವರ್ ತುಂಬಾ ಚುರುಕಾಗಿರುತ್ತದೆ. ಯಾವುದನ್ನು ಸುಲಭವಾಗಿ ಮರೆಯುವುದಿಲ್ಲ. ಇವರ ಜೊತೆ ಯಾರಾದರೂ ಶತ್ರುತ್ವ ಬೆಳೆಸಿಕೊಂಡರೆ ಅದನ್ನು ಚೆನ್ನಾಗಿ ನಿಭಾಯಿಸುವ ಕೆಪ್ಯಾಸಿಟಿ ವೃಶ್ಚಿಕ ರಾಶಿಯ ಜನರಲ್ಲಿ ಇರುತ್ತದೆ. ಈ ರಾಶಿಯ ಜನರಲ್ಲಿ ಸೇಡು ತೀರಿಸಿಕೊಳ್ಳುವ ಸ್ವಭಾವ ಇರುತ್ತದೆ. ಈ ರಾಶಿಯ ಜನರು ಹೆಚ್ಚು ನಿಯಮಗಳನ್ನು ಫಾಲೋ ಮಾಡುವರು ಯಾರಾದರೂ ನಿಯಮಗಳನ್ನು ಮುರಿದರೆ ಅದು, ಇವರಿಗೆ ಇಷ್ಟ ಆಗುವುದಿಲ್ಲ.

ಈ ರಾಶಿಯ ಜನರು ಹೆಚ್ಚಾಗಿ ಕುಟುಂಬ ಮತ್ತು ಸ್ನೇಹಿತರಿಗೆ ಸಮರ್ಪಿತರಾಗಿ ಇರುತ್ತಾರೆ. ಈ ಜನರು ಅವರ ಪ್ರೀತಿ ಪಾತ್ರರಿಗೆ ಸರ್ವಸ್ವವನ್ನು ಅರ್ಪಣೆ ಮಾಡುವರು. ಇವರು ವಸ್ತುಗಳನ್ನು ಸಂಗ್ರಹ ಮಾಡುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಇವರು ಧನ ಹಾಗೂ ಸಂಪತ್ತುಗಳಿಗೆ ಮಾಡುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಇವರು ಪ್ರೀತಿಯ ವಿಚಾರವಾಗಿ ಹೆಚ್ಚು ಎಮೋಷನಲ್ ಆಗಿ ಇರುವರು. ವೃಶ್ಚಿಕ ರಾಶಿಯ ಜನರು ಒಳ್ಳೆಯ ಸಂಗಾತಿಯಾಗಿ ಇರುವರು. ಇವರು ಬುದ್ದಿವಂತ ಹಾಗೂ ಪ್ರಾಮಾಣಿಕ ಸಂಗಾತಿಯನ್ನು ಬಯಸುವರು.

ವೃಶ್ಚಿಕ ರಾಶಿಯ ಜನರು ಅವರ ಪರಿವಾರವನ್ನು ಹೆಚ್ಚು ಕಾಳಜಿ ಮಾಡುವರು ಜೊತೆಗೆ ಈ ರಾಶಿಯ ಜನರಿಗೆ ಹೆಚ್ಚು ಉದಾರ ಮನಸ್ಸು ಸಹ ಇರುತ್ತದೆ. ಇವರಿಗೆ ಏಕಾಗ್ರತೆ ಹೆಚ್ಚಾಗಿರುತ್ತದೆ ಕೆಲಸಗಳಲ್ಲಿ ಆದರೆ ಹೆಚ್ಚು ಮೂಡಿ ( moody ) ಕೂಡ ಆಗಿರುತ್ತಾರೆ. ಈ ರಾಶಿಯ ಜನರು ಜನರನ್ನು ನಂಬಲು ಸ್ವಲ್ಪ ಸಮಯ ತೆಗೆದುಕೊಳ್ಳುವರು. ಈ ರಾಶಿಯ ಜನರನ್ನು ಮೋಸ ಮಾಡುವುದು ತುಂಬಾ ಕಷ್ಟ, ಈ ಜನರು ಯಾರಿಗೂ ಭಯ ಪಡುವುದಿಲ್ಲ. ಪ್ರಕೃತಿಯನ್ನು ಇವರು ಹೆಚ್ಚಾಗಿ ಪ್ರೀತಿ ಮಾಡುವರು. ಯಾವುದೇ ವಿಷಯ ಇದ್ದರೂ ಅದರ ಆಳಕ್ಕೆ ಇಳಿದು ಸತ್ಯವನ್ನು ಶೋಧನೆ ಮಾಡುವ ಕೆಲಸ ಮಾಡುವರು.

ಈ ರಾಶಿಯ ಜನರು ದೃಢ ನಿಶ್ಚಯ ಹೊಂದಿರುವರು ಜೊತೆಗೆ ಶಾಂತ ಮೂರ್ತಿಗಳಾಗಿ ಇರುವರು. ಈ ಜನರಲ್ಲಿ ಹೆಚ್ಚು ಧೈರ್ಯ ಇರುತ್ತದೆ. ಈ ಜನರು ಅವರಿಗೆ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವರು. ಖರ್ಚು ವೆಚ್ಚಗಳ ಮೇಲೆ ಈ ರಾಶಿಯ ಜನರಿಗೆ ಹಿಡಿತ ಇರುತ್ತದೆ. ಈ ರಾಶಿಯ ಜನರು ಯಾರೊಂದಿಗೂ ಅವರ ಸಮಸ್ಯೆಯನ್ನು ಹೇಳಿಕೊಳ್ಳುವುದಿಲ್ಲ ಹೇಳಿಕೊಂಡರೆ ಎಲ್ಲವನ್ನು ಹೇಳಿಬಿಡುತ್ತಾರೆ.

ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಬಂದರೂ ಅದನ್ನು ಧೈರ್ಯವಾಗಿ ಎದುರಿಸುವ ಗುಣ ಇವರಲ್ಲಿ ಇರುತ್ತದೆ. ಇವರ ಮೈಂಡ್ ಕ್ಲಿಯರ್ ಆಗಿರುತ್ತೆ ಏನೇ ಇದ್ದರೂ ಅದನ್ನು ನೇರವಾಗಿ ಹೇಳುವರು. ಇನ್ನು ಇವರಿಗೆ ರಾಜನೀತಿ, ಸಮಾಜ ಸೇವೆ, ಪೊಲೀಸ್, ಡಾಕ್ಟರ್, ಟೀಚರ್, ಮತ್ತು ಅಗ್ನಿಗೆ ಸಂಬಂಧ ಪಟ್ಟ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ವೃಶ್ಚಿಕ ರಾಶಿಯ ಜನರು ಎಂದಿಗೂ ಅವರ ನಿರ್ಧಾರಗಳ ಮೇಲೆ ಕೆಲಸಗಳನ್ನು ಮಾಡುವರು.

ವೃಶ್ಚಿಕ ರಾಶಿಯವರ ಭಾವನೆಗೆ ಪೆಟ್ಟು ಬಿದ್ದರೆ ಅದಕ್ಕೆ, ಕಾರಣರಾದ ಜನರ ಮೇಲೆ ಅವರು ಸೇಡು ತೀರಿಸಿ ಕೊಳ್ಳುವರು.ವೃಶ್ಚಿಕ ರಾಶಿಯವರು ಹೊಂದಿಕೆ ಆಗುವ ರಾಶಿಗಳು :-
ಕಟಕ ರಾಶಿ ಮತ್ತು ವೃಶ್ಚಿಕ ರಾಶಿ ಮದುವೆಗೆ ಚೆನ್ನಾಗಿ ಹೊಂದುತ್ತದೆ.
ಮಕರ ರಾಶಿ ವೃಶ್ಚಿಕ ರಾಶಿಯವರ ಕಲ್ಪನೆಯನ್ನು ಅಭಿನಂದಿಸುತ್ತದೆ.
ಮೀನ ರಾಶಿ ಕಲ್ಪನಾ ಲೋಕದಲ್ಲಿ ವಿಹಾರ ಮಾಡುವ ಇವರನ್ನು ವೃಶ್ಚಿಕ ರಾಶಿಯವರು ಹಿಮ್ಮೆಟ್ಟುತ್ತಾರೆ ಮತ್ತು ಅವರನ್ನು ಹೆಚ್ಚು ಪ್ರೀತಿ ಮಾಡುವರು.

ವೃಶ್ಚಿಕ ರಾಶಿಯ ಜನರ ಜೊತೆ ಹೊಂದಾಣಿಕೆ ಆಗದ ರಾಶಿಗಳು :-
ತುಲಾ ರಾಶಿಯ ಜನರಿಗೆ ವೃಶ್ಚಿಕ ರಾಶಿಯವರ ಅಸೂಯೆ ಸ್ವಭಾವ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಸಿಂಹ ರಾಶಿ ಯ ಜನರು ನೇರ ಸ್ವಭಾವ ಮತ್ತು ತಿಳಿ ಮನಸು ಉಳ್ಳವರು. ಇವರಿಗೆ ವೃಶ್ಚಿಕ ರಾಶಿಯ ಜನರ ಸ್ವಭಾವ ತೀವ್ರ ಎನಿಸುತ್ತದೆ. ಮಿಥುನ ರಾಶಿಯ ಜನರು ಎಲ್ಲರ ಜೊತೆ ಬೆರೆಯುವರು. ವೃಶ್ಚಿಕ ರಾಶಿಯವರು ಈ ರಾಶಿಗೆ ವಿರುದ್ಧ ಧ್ರುವವಾಗಿ ಇರುವರು. ವೃಶ್ಚಿಕ ರಾಶಿಯ ಜನರಿಗೆ ಅಸಿಡಿಟಿ, ಕತ್ತಿಗೆ ಸಂಬಂಧಪಟ್ಟ ಕಾಯಿಲೆಗಳು, ಫೈಲ್ಸ್ , ಕರುಳಿಗೆ ಮತ್ತು ಜನನಾಂಗಕ್ಕೆ ಸಂಬಂಧಪಟ್ಟ ಕಾಯಿಲೆಗಳು, ಅಲ್ಸರ್ ರೀತಿಯ ರೋಗಗಳು ಕಾಡಬಹುದು.

ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಮೃದುವಾಗಿ ಎಲ್ಲರನ್ನು ಮಾತನಾಡಿಸಬೇಕು. ಕಾರವಾದ ಪದಾರ್ಥಗಳನ್ನು ಸೇವಿಸಬಾರದು. ಇದರಿಂದ, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಮಂಗಳವಾರ ಸಾಲವನ್ನು ಪಡೆಯಬಾರದು. ಆಂಜನೇಯನ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ್ ಜಪ ಮಾಡಬೇಕು ಮತ್ತು” ಓಂ ಮಂಗಳಯ ನಮಃ ” ಎನ್ನುವ ಮಂತ್ರವನ್ನು 108 ಬಾರಿ ಹೇಳಬೇಕು.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!