ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಶ್ಚಿಕ ರಾಶಿಯವರ ಜುಲೈ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಯೋಣ.
ವೃಶ್ಚಿಕ ರಾಶಿಯ ಜನರಿಗೆ ಈ ತಿಂಗಳು ಮಿಶ್ರ ಫಲ ಸಿಗುತ್ತದೆ. 7 ನೇ ಮನೆಯಿಂದ ಗುರು ಗ್ರಹ ಮತ್ತು ಮಂಗಳ ಗ್ರಹದ ಸಂಚಾರ ಆಗುತ್ತದೆ. ಶನಿ ಗ್ರಹ 4 ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. 5 ನೇ ಮನೆಯಲ್ಲಿ ರಾಹು ಗ್ರಹ ಸಂಚಾರ ಮಾಡುತ್ತಿದ್ದರೆ, ರವಿ ಗ್ರಹ ಮತ್ತು ಶುಕ್ರ ಗ್ರಹ 8 ನೇ ಮನೆಯಲ್ಲಿ ಸಂಚಾರ ಮಾಡುತ್ತವೆ. ಬುಧ ಗ್ರಹ 10 ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ವೃಶ್ಚಿಕ ರಾಶಿಯ ಜನರಿಗೆ ಜುಲೈ ತಿಂಗಳಿನಲ್ಲಿ ಹೆಚ್ಚಿನ ಪೈಪೋಟಿ ಇರುತ್ತದೆ. ವಾದ ವಿವಾದಗಳು ಹೆಚ್ಚಾಗಿ ಇರುತ್ತದೆ. ಈ ತಿಂಗಳಿನಲ್ಲಿ ಈ ರಾಶಿಯ ಜನರಿಗೆ ಹಠದ ಸ್ವಭಾವ ಬರುವ ಸಾಧ್ಯತೆ ಸಹ ಇದೆ. ಮಾತಿನ ಪ್ರಭಾವದಿಂದ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಎದುರಾಗಬಹುದು.
ತುಂಬಾ ಆಳವಾಗಿ ದೀರ್ಘವಾಗಿ ಯೋಚನೆ ಮಾಡುವ ಮಾನಸಿಕ ಸ್ಥಿತಿ ಇರುವ ಸಾಧ್ಯತೆ ಇದೆ. ಅಪವಾದಗಳು ಹೆಚ್ಚಾಗಿ ಬರುವ ಸಾಧ್ಯತೆ ಸಹ ಇರುತ್ತದೆ. ಹಣಕಾಸಿನ ವಿಚಾರವಾಗಿ ಆದಾಯಗಳು ಚೆನ್ನಾಗಿರುತ್ತದೆ ಆದರೆ ಪೈಪೋಟಿಯಂತೂ ಇದ್ದೇ ಇರುತ್ತದೆ.ಹೂಡಿಕೆ ಮಾಡುವುದಾಗಲಿ ಅಥವಾ ಅನಾವಶ್ಯಕ ಖರ್ಚುಗಳು ಎದುರಾಗುವ ಸಾಧ್ಯತೆ ದುಡ್ಡಿನ ವಿಚಾರದಲ್ಲಿ ಎದುರಾಗಬಹುದು. ನಿಮಗೆ ಬರಬೇಕಾಗಿರುವ ದುಡ್ಡು, ಬೇರೆಯವರ ಬಳಿ ಉಳಿದುಕೊಂಡಿರಬಹುದು. ಸ್ವಂತ ಬುದ್ಧಿವಂತಿಕೆ ಉಪಯೋಗ ಮಾಡಿ ಹೆಚ್ಚಿನ ಲಾಭಗಳಿಗೆ ಮಾಡಬಹುದು. ಹಣಕಾಸಿನ ವಿಚಾರವಾಗಿ ವೃಶ್ಚಿಕ ರಾಶಿಯವರು ಎಚ್ಚರಿಕೆ ವಹಿಸಬೇಕು. ಅನಿವಾರ್ಯ ಕಾರಣಗಳಿಂದಾಗಿ ಮನೆಯ ಕಟ್ಟಡದಲ್ಲಿ, ವಾಹನ ರಿಪೇರಿ, ಸುಖಸೌಕರ್ಯಗಳಲ್ಲಿ ಏರುಪೇರು ನೋಡುವ ಸಾಧ್ಯತೆ ಇದೆ.
ಈ ರೀತಿಯ ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಈ ರಾಶಿಯ ಜನರು ಜುಲೈ ತಿಂಗಳಿನಲ್ಲಿ ಆರೋಗ್ಯದ ಕಡೆ ಕೂಡ ಹೆಚ್ಚಿನ ಗಮನ ಕೊಡಬೇಕು. ಆರೋಗ್ಯದ ವಿಚಾರವಾಗಿ ಏರುಪೇರು ಎದುರಿಸಬೇಕಾಗುತ್ತದೆ ಅದರಲ್ಲಿ, ದೃಷ್ಟಿ ದೋಷ ಹೆಚ್ಚಾಗಿ ಕಾಡುತ್ತದೆ. ಸ್ತ್ರೀಯರಲ್ಲಿ ಹಾರ್ಮೋನಲ್ ಚೇಂಜ್ಸ್ ಸಮಸ್ಯೆ ಕಾಣಿಸಿಕೊಳ್ಳಬಹುದು, ರಕ್ತದ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಕಾಂಪಿಟೇಶನ್ ಇರುತ್ತದೆ. ಅದರಿಂದ, ಹೆಚ್ಚು ಶ್ರಮದಿಂದ ಕೆಲಸ ಮಾಡಿ ಗೆಲುವು ಸಾಧಿಸಿ ಕೊಳ್ಳಬೇಕಾಗುತ್ತದೆ.
ವೃತ್ತಿ ನಿರ್ವಹಿಸುತ್ತಿರುವ ವೃಶ್ಚಿಕ ರಾಶಿಯ ಜನರಿಗೆ ವೃತ್ತಿಯನ್ನು ಬದಲಾಯಿಸುವ ಅನಿವಾರ್ಯತೆ ಎದುರಾಗಬಹುದು. ಮಾಡುತ್ತಿರುವ ಕೆಲಸಗಳಲ್ಲಿ ಸಹಕಾರದ ಕೊರತೆ ಬರಬಹುದು. ಇನ್ನು ಖಾಸಗಿ ಸಂಸ್ಥೆಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವ ವೃಶ್ಚಿಕ ರಾಶಿಯ ಜನರು ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಶತ್ರುಗಳ ಪಿತೂರಿಯಿಂದ ಮಾನ ಹಾನಿಯಾಗುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಯ ಕೆಲವು ಜನರು ಹಣಕಾಸಿನ ವಿಚಾರವಾಗಿ ಟ್ರ್ಯಾಪ್ ಆಗುವ ಸಾಧ್ಯತೆ ಇದೆ. ಇದರ, ಜೊತೆಗೆ ಸಸ್ಪೆನ್ಷನ್ ಆಗುವ ಸಾಧ್ಯತೆ ಸಹ ಇದೆ. ಈ ರಾಶಿಯ ಜನರು ಹೆಸರು, ಕೀರ್ತಿ, ಗೌರವದ ಕಡೆ ಹೆಚ್ಚು ಗಮನ ಕೊಡಬೇಕು. ದೂರ ಪ್ರಯಾಣ ಮಾಡುವ ಯೋಗ ಇರುತ್ತದೆ. ಅಪೂರ್ಣವಾದ ಕೆಲಸಗಳು ಪೂರ್ಣವಾಗಿ ಪ್ರಗತಿಯ ಹಾದಿ ಹಿಡಿಯುವ ಸಾಧ್ಯತೆ ಇದೆ.
ವಿದೇಶದಲ್ಲಿ ವೃತ್ತಿ ಮಾಡಲು ಇಚ್ಛೆಪಡುವ ಜನರಿಗೆ ಒಳ್ಳೆಯ ಯೋಗವಿದೆ. ಸಾಮಾಜಿಕ ಜೀವನದಿಂದ ವೃಶ್ಚಿಕ ರಾಶಿ ಜನರು ಸ್ವಲ್ಪ ಮಟ್ಟಿಗೆ ದೂರ ಉಳಿಯುವರು. ಸ್ವಂತ ಬಲದಿಂದ ಕೆಲಸ ಮಾಡುವುದು ಉತ್ತಮ ಏಕೆಂದರೆ, ಈ ತಿಂಗಳಿನಲ್ಲಿ ವೃಶ್ಚಿಕ ರಾಶಿಯ ಜನರಿಗೆ ಸಹಕಾರದ ಕೊರತೆ ಉಂಟಾಗುತ್ತದೆ. ಈ ರಾಶಿಯ ಜನರು ಬೇರೆಯವರ ಜಗಳದ ನಡುವೆ ನಡುವೆ ಹೋಗದೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಬೇರೆಯವರ ತಪ್ಪಿಗೆ ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ. ಹೆಚ್ಚು ಬೆಲೆ ಬಾಳುವ ವಸ್ತುಗಳ ಕಡೆ ಗಮನ ಕೊಡಬೇಕಾಗುತ್ತದೆ. ಬೆಲೆ ಬಾಳುವ ವಸ್ತುಗಳು, ಡಾಕ್ಯುಮೆಂಟ್ಸ್ ಇವುಗಳನ್ನು ಮಿಸ್’ಪ್ಲೇಸ್ ಮಾಡುವ ಸಾಧ್ಯತೆ ಇದೆ.
ಪರಿಹಾರ :-ಪ್ರತಿ ಮಂಗಳವಾರ ಸುಬ್ರಹ್ಮಣ್ಯ ದೇವರ ಆರಾಧನೆ ಮಾಡಬೇಕು ಮತ್ತು ಕೆಂಪು ವಸ್ತ್ರದಲ್ಲಿ ತೊಗರಿ ಕಾಳನ್ನು ದಾನ ಮಾಡಬೇಕು. ದತ್ತಾತ್ರೆಯ ಸ್ವಾಮಿಯ ಆರಾಧನೆ ಮಾಡಬೇಕು ಮತ್ತು ಶಿವನ ಆರಾಧನೆಯನ್ನು ಮಾಡಬೇಕು. ಪ್ರತಿ ಗುರುವಾರ ಗುರುವಿಗೆ ಹಳದಿ ವಸ್ತ್ರದಲ್ಲಿ ಕಡಲೆಕಾಳಿನ ದಾನವನ್ನು ಮಾಡಬೇಕು. ಸಿಹಿ ಪ್ರಸಾದವನ್ನು ದೇವಸ್ಥಾನದಲ್ಲಿ ವಿನಿಯೋಗ ಮಾಡಿ ಗುರುವಿನ ಬೀಜ ಮಂತ್ರದ ಪಠಣೆ ಮಾಡಬೇಕು ಹಾಗೆ ದೇವರ ಆರಾಧನೆ ಮಾಡಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ, ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.
ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513