Scorpio Horoscope July 2024: ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಶ್ಚಿಕ ರಾಶಿಯವರ ಜುಲೈ ತಿಂಗಳಿನ ಮಾಸ  ಭವಿಷ್ಯವನ್ನು ತಿಳಿಯೋಣ.

ವೃಶ್ಚಿಕ ರಾಶಿಯ ಜನರು ಹೆಚ್ಚು ಸತ್ಯವಂತರು, ನ್ಯಾಯವಂತರು, ನಿಷ್ಠಾವಂತರು ಎಂದು ಹೇಳಬಹುದು. ಈ ರಾಶಿಯ ಜನರು ವಿಷಯಗಳನ್ನು ಹೆಚ್ಚಾಗಿ ಗುಟ್ಟಾಗಿ ಇಡುವರು. ವೃಶ್ಚಿಕ ರಾಶಿಯ ಜನರಲ್ಲಿ ಹೆಚ್ಚಾಗಿ ಸ್ವಾಭಿಮಾನವನ್ನು ಕೂಡ ಕಾಣಬಹುದು. ಈ ರಾಶಿಯವರು ಹೆಚ್ಚಾಗಿ ಒಂಟಿತನವನ್ನು ಇಷ್ಟಪಡುವರು. ಹೆಚ್ಚು ಜನಗಳು ಇರುವ ಕಡೆ ಇವರಿಗೆ ತುಂಬಾ ಕಿರಿಕಿರಿ ಉಂಟಾಗುತ್ತದೆ. ಬೆಟ್ಟಗುಡ್ಡದ ಪ್ರದೇಶಗಳನ್ನು ಇಷ್ಟಪಡುವ ಈ ರಾಶಿಯ ಜನರು ಹೆಚ್ಚಾಗಿ ಏಕಾಂಗಿಯಾಗಿ ಇರಲು ಬಯಸುವರು.

ಯಾವುದೇ ವಿಷಯವಾದರೂ ಅದನ್ನು ವೃಶ್ಚಿಕ ರಾಶಿಯ ಜನರು ಚೆನ್ನಾಗಿ ಪ್ರೆಸೆಂಟ್ ಮಾಡುವರು. ಈ ರಾಶಿಯವರು ಯಶಸ್ಸನ್ನು ಗಳಿಸಲು ಸಾಕಷ್ಟು ಶ್ರಮಪಟ್ಟು, ನೋವು ಮತ್ತು ತೊಂದರೆಗಳನ್ನು ಎದುರಿಸಿ ಮುಂದೆ ಬಂದಿರುತ್ತಾರೆ. ವೃಶ್ಚಿಕ ರಾಶಿಯ ಜನರಲ್ಲಿ ಹೆಚ್ಚಾಗಿ ನಾಯಕತ್ವದ ಗುಣ ಇರುತ್ತದೆ. ದೇವರ ದರ್ಶನವನ್ನು ಪಡೆಯುವುದರಿಂದ ಈ ರಾಶಿಯವರು ಹೆಚ್ಚು ನೆಮ್ಮದಿಯನ್ನು ಕಾಣುವರು ಮತ್ತು ಅವರ ಒತ್ತಡ ಜೀವನದಿಂದ ಹೊರಬರಲು ಇದು ಸಹಕಾರಿ.

ಜುಲೈ ತಿಂಗಳಿನಲ್ಲಿ ಈ ರಾಶಿಯ ಜನರಿಗೆ ಗೊಂದಲ, ಭಯ ಕಾಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಯಾವುದೇ ಕಲಹಗಳು ಇದ್ದರೂ ಜುಲೈ ತಿಂಗಳಿನಲ್ಲಿ ಅವು ನಿವಾರಣೆ ಆಗುವ ಸಾಧ್ಯತೆ ಇದೆ. ವೈರಿಗಳ ಜೊತೆಗೆ ವಾದ ವಿವಾದಗಳಿಂದ ದೂರ ಇರುವುದು ಉತ್ತಮ. ನೂತನ ವಾಹನ ಖರೀದಿ ಮಾಡುವ ಯೋಗ ಜುಲೈ ತಿಂಗಳಿನಲ್ಲಿ ವೃಶ್ಚಿಕ ರಾಶಿಯ ಜನರಿಗೆ ಇರುತ್ತದೆ. ಕುಟುಂಬದ ಜನರ ಜೊತೆ ಪ್ರಯಾಣ ಮಾಡುವ ಯೋಗ ಕೂಡ ಇರುತ್ತದೆ. ಕೆಲವು ವಸ್ತುಗಳನ್ನು ಖರೀದಿ ಮಾಡಿ ಖುಷಿ ಪಡುವ ಯೋಗ ಸಹ ಇದೆ.

ಉದ್ಯೋಗ ಮಾಡುವ ವೃಶ್ಚಿಕ ರಾಶಿಯ ಜನರಿಗೆ ಸಾಧಾರಣ ಕಾಲ. ವ್ಯಾಪಾರ ವ್ಯವಹಾರ ಮಾಡುವ ಜನರಲ್ಲಿ ಜುಲೈ ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಾಣುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಯಾವುದೇ ರೀತಿಯ ಸ್ಪರ್ಧಿಗಳು ಎದುರಾದರು ಅದಕ್ಕೆ, ತಕ್ಕಂತೆ ಬದಲಾಗುವ ಗುಣವನ್ನು ವೃಶ್ಚಿಕ ರಾಶಿಯವರು ಹೊಂದಿರುತ್ತಾರೆ. ಬೇರೆಯವರಿಗಿಂತ ವಿಶೇಷವಾಗಿ ಮತ್ತು ವಿಭಿನ್ನವಾಗಿ ಅವರ ಕೆಲಸಗಳನ್ನು ಸಾಧಿಸುವುದರಲ್ಲಿ ವೃಶ್ಚಿಕ ರಾಶಿಯ ಜನರು ಮೊದಲಿಗರು. ಬೇರೆಯವರನ್ನು ಅನುಕರಣೆ ಮಾಡದೆ ಸಂತ ಶೈಲಿಯಲ್ಲಿ ಕೆಲಸಗಳನ್ನು ಪೂರ್ಣ ಮಾಡಿ ಎಲ್ಲರಿಂದ ಪ್ರಶಂಸೆ ಪಡೆಯುವರು

ಇವರ ಯಶಸ್ಸಿಗೆ ಕಾರಣ ಅವರ ಆತ್ಮಬಲ ಮತ್ತು ಬುದ್ಧಿವಂತಿಕೆ. ಸಾಧು ಸಂತರ ದರ್ಶನ ಪಡೆಯುವುದರಿಂದ ಮತ್ತು ಅವರ ಆಶೀರ್ವಾದದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ ಇದರ ಜೊತೆಗೆ ದಾನ ಧರ್ಮ ಮಾಡುವುದರಿಂದ ಒಳ್ಳೆಯ ಮತ್ತು ಉತ್ತಮ ಫಲಗಳು ದೊರಕುತ್ತದೆ. ಸಾರ್ವಜನಿಕರ ಜೊತೆ ಬೆರೆಯುವ ಸನ್ನಿವೇಶಗಳು ವೃಶ್ಚಿಕ ರಾಶಿಯ ಜನರಿಗೆ ಜುಲೈ ತಿಂಗಳಿನಲ್ಲಿ ಎದುರಾಗಬಹುದು. ಸರ್ಕಾರಿ ಕೆಲಸಗಳಲ್ಲಿ ಕೆಲಸ ಮಾಡುವ ಜನರಿಗೆ, ಸರ್ಕಾರಿ ಸಂಘಗಳಲ್ಲಿ ಕೆಲಸ ಮಾಡುವ ಜನರಿಗೆ, ಸಾರ್ವಜನಿಕ ವಲಯಗಳಲ್ಲಿ ಸೇವೆ ಸಲ್ಲಿಸುವ ಜನರಿಗೆ ಮತ್ತು ರಾಜಕಾರಣಿಗಳಿಗೆ ಒಳ್ಳೆಯ ಕೆಲಸಗಳನ್ನು ಮಾಡಿ ಅದರಿಂದ ಜನರ ವಿಶ್ವಾಸಗಳನ್ನು ಗಳಿಕೆ ಮಾಡುವ ಸಾಧ್ಯತೆ ಇದೆ.

ವೈಭವಿಕರಣಕ್ಕಾಗಿ ವಸ್ತುಗಳನ್ನು ಖರೀದಿ ಮಾಡಿ ಅದಕ್ಕೆ ಖರ್ಚು ವೆಚ್ಚ ಆಗುವ ಸಾಧ್ಯತೆ ಇದೆ. ಆದರೆ, ವೆಚ್ಚದ ಕಡೆ ಗಮನ ಕೊಡುವುದು ತುಂಬಾ ಒಳ್ಳೆಯದು. ಹಿರಿಯರಿಂದ ಹಣ ಸಹಾಯ ಸಿಗುವ ಸಾಧ್ಯತೆ ಸಹ ಇದೆ. ವೃಶ್ಚಿಕ ರಾಶಿಯವರು ಹಿರಿಯರು ಮತ್ತು ಪೋಷಕರು ಹೇಳುವ ಮಾರ್ಗದರ್ಶನವನ್ನು ಪಾಲನೆ ಮಾಡುವುದರಿಂದ ಇನ್ನೂ ಅತ್ಯುತ್ತಮ ಫಲಗಳನ್ನು ಪಡೆಯುವರು ಜುಲೈ ತಿಂಗಳಿನಲ್ಲಿ. ಯಾವುದೇ ರೀತಿಯ ಆತಂಕಗಳು ಇದ್ದರು ಅದನ್ನು ಮೊದಲು ವಿಮರ್ಶೆ ಮಾಡಿ ಮುಂದುವರೆಯುವುದು ಉತ್ತಮ.

ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜಕಾರಣಿಗಳಿಗೆ ಗೌರವ ಲಭಿಸುತ್ತದೆ. ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ಸನ್ಮಾನ ಸಿಗುವ ಸಾಧ್ಯತೆ ಸಹ ಇದೆ ಇದರಿಂದ, ಅವರಿಗೆ ಅಪಾರ ಕೀರ್ತಿ ಮತ್ತು ಯಶಸ್ಸು ಸಿಗುತ್ತದೆ.

ಪರಿಹಾರಗಳು :-ಶ್ರೀ ನಾಗಪೂಜೆ, ಶ್ರೀ ಗಣಪತಿಗೆ ಗರಿಕೆಯನ್ನು ಅರ್ಪಣೆ ಮಾಡಬೇಕು, ದೇವಸ್ಥಾನದಲ್ಲಿ ನೆರವೇರಿಸುವ ಸರ್ಪ ಶಾಂತಿಗೆ ಸಾಧ್ಯವಾಗುವಷ್ಟು ಹಣವನ್ನು ಕೊಡಬೇಕು, ಕೇಸರಿ ತಿಲಕವನ್ನು ಹಣೆಗೆ ಧಾರಣೆ ಮಾಡಬೇಕು, ಪಶು ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಕೊಡುವುದು. ಇದರಿಂದ, ಎಲ್ಲಾ ರೀತಿಯ ಕೆಟ್ಟ ಫಲಗಳು ದೂರವಾಗಿ ಒಳ್ಳೆಯ ಫಲಗಳು ಲಭಿಸುತ್ತದೆ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

Leave a Reply

Your email address will not be published. Required fields are marked *

error: Content is protected !!