12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವ್ಯಕ್ತಿತ್ವ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ದ್ವಾದಶ ರಾಶಿಗಳಲ್ಲಿ ವೃಶ್ಚಿಕ ರಾಶಿಯು ಒಂದು ಪ್ರಮುಖ ರಾಶಿಯಾಗಿದೆ ಈ ರಾಶಿಯಲ್ಲಿ ಜನಿಸಿದವರ ಗ್ರಹಗತಿ, ಜೂನ್ ತಿಂಗಳಿನ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

2024 ಜೂನ್ ತಿಂಗಳ ವೃಶ್ಚಿಕ ರಾಶಿಯ ಗ್ರಹಗತಿ ನೋಡುವುದಾದರೆ ಕುಜ ಆರನೆ ಮನೆಯಲ್ಲಿ ರವಿ ಬುಧ ಗುರು ಶುಕ್ರ ಸಪ್ತಮದಲ್ಲಿದ್ದಾರೆ ಕೇತು ಹನ್ನೊಂದರಲ್ಲಿ ಶನಿ ನಾಲ್ಕರಲ್ಲಿ ಹಾಗೂ ರಾಹು ಐದನೆ ಮನೆಯಲ್ಲಿದ್ದಾರೆ. ವೃಶ್ಚಿಕ ರಾಶಿಯವರಿಗೆ ಈ ಗ್ರಹ ಸ್ಥಿತಿಯಿಂದ ಹಲವು ರೀತಿಯಲ್ಲಿ ಶುಭ ಫಲಗಳು ಸಿಗುತ್ತದೆ. ಈ ರಾಶಿಯವರಿಗೆ ಒಂದು ವರ್ಷದವರೆಗೆ ಗುರು ಬಲ ಚೆನ್ನಾಗಿರುತ್ತದೆ, ಗುರುಬಲದಿಂದ ವೃಶ್ಚಿಕ ರಾಶಿಯವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ ರಾಜಯೋಗ ಉಂಟಾಗುತ್ತದೆ. ಸುಖದ ಸ್ಥಾನದಲ್ಲಿ ಶನಿ ಇರುವುದರಿಂದ ಗೋಚಾರದಲ್ಲಿ ಅಶುಭ ಕಂಡು ಬಂದರೂ ಸುಖದ ಸ್ಥಾನದಲ್ಲಿ ಶನಿ ಇರುವುದರಿಂದ ಅರ್ಧಾಷ್ಟಮ ಶನಿ ಇದ್ದರೂ ಶನಿ ಪೂರ್ತಿ ಅಶುಭ ಫಲವನ್ನು ನೀಡುವುದಿಲ್ಲ ಶುಭ ಫಲವನ್ನು ನೀಡುತ್ತಾನೆ. ಪ್ರತಿದಿನ ವೃಶ್ಚಿಕ ರಾಶಿಯವರು ಹನುಮಾನ್ ಚಾಲೀಸಾ ಪಠಣ ಮಾಡಬೇಕು ಶನಿವಾರ ಶನಿ ಸ್ತೋತ್ರವನ್ನು ಹೇಳಬೇಕು ಇದರಿಂದ ವೃಶ್ಚಿಕ ರಾಶಿಯವರಿಗೆ ಒಳ್ಳೆಯದಾಗುತ್ತದೆ.

ಕುಜನಿಂದ ವೃಶ್ಚಿಕ ರಾಶಿಯವರಿಗೆ ಭೂಮಿಯೋಗ ಬರುತ್ತದೆ ಭೂಮಿಯನ್ನು ಖರೀದಿಸಬಹುದು, ಮನೆ ಖರೀದಿಸಬಹುದು ಅಥವಾ ಮನೆಯನ್ನು ಬದಲಾಯಿಸಬಹುದು ಕುಜನಿಂದ ವೃಶ್ಚಿಕ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಬುಧ ಹಾಗೂ ರವಿಯ ಯುತಿಯಿಂದ ಬುದಾದಿತ್ಯ ಯೋಗ ವೃಶ್ಚಿಕ ರಾಶಿಯವರಿಗೆ ಇರುತ್ತದೆ. ಜೂನ್ ತಿಂಗಳಲ್ಲಿ ವೃಶ್ಚಿಕ ರಾಶಿಯವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಹಣಕಾಸು ಹರಿದು ಬರುತ್ತದೆ, ಅವಿವಾಹಿತ ವೃಶ್ಚಿಕ ರಾಶಿಯವರಿಗೆ ವಿವಾಹ ಯೋಗ ಬರುತ್ತದೆ. ವೃಶ್ಚಿಕ ರಾಶಿಯವರ ಆರೋಗ್ಯ ಉತ್ತಮವಾಗಿರುತ್ತದೆ ಆದರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು. ವೃಶ್ಚಿಕ ರಾಶಿಯವರ ಜ್ಞಾನ ಅವರನ್ನು ರಕ್ಷಣೆ ಮಾಡುತ್ತದೆ ಅವರ ಮಾತು ಬೇರೆಯವರಿಗೆ ಇಷ್ಟವಾಗುತ್ತದೆ ಗೌರವ ಹಾಗೂ ಮನ್ನಣೆ ಸಿಗುತ್ತದೆ. ಕೇತು ಹನ್ನೊಂದನೆ ಮನೆಯಲ್ಲಿದ್ದಾನೆ ಶುಭಫಲ ಕೊಡುತ್ತಾನೆ ಮನೆಗೆ ಅವಶ್ಯಕತೆ ಇರುವ ಕೆಲವು ವಸ್ತುಗಳನ್ನು ಖರೀದಿ ಮಾಡುತ್ತಾರೆ.

ರಾಹುವಿನಿಂದ ಆರೋಗ್ಯ ಸಮಸ್ಯೆ ಕಾಣಿಸುತ್ತದೆ ಆದರೆ ಹೆಚ್ಚು ಭಯಪಡುವ ಅವಶ್ಯಕತೆ ಇಲ್ಲ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು, ಈ ರಾಶಿಯವರು ಹೆಚ್ಚು ಚಿಂತಿಸಬಾರದು. ಲಕ್ಷ್ಮೀ ಕುಬೇರ ಯಂತ್ರವನ್ನು ಮನೆಗೆ ತಂದಿಟ್ಟುಕೊಳ್ಳುವುದು ಒಳ್ಳೆಯದು. ಮನೆಯ ತುಳಸಿ ಗಿಡದ ಮುಂದೆ ರಾತ್ರಿ 7 ಗಂಟೆ ನಂತರ 10 ಗಂಟೆಯೊಳಗೆ ಒಂದು ವೀಳ್ಯದೆಲೆಯಲ್ಲಿ ಒಂದು ಬೆಳ್ಳುಳ್ಳಿ ಒಂದು ಲವಂಗ ಒಂದು ಏಲಕ್ಕಿ ಅದರ ಜೊತೆಗೆ ಆಯಾ ರಾಶಿಗೆ ಅನುಗುಣವಾಗಿ ಒಂದು ಚಮಚ ಕಲ್ಲುಪ್ಪು ಹಾಕಿ ಅದರ ಮೇಲೆ ಕರ್ಪೂರವನ್ನು ಅಂಟಿಸಬೇಕು ಇದರಿಂದ ಸಾಲಬಾಧೆ ನಿವಾರಣೆಯಾಗುತ್ತದೆ ಕರ್ಪೂರ ಸಂಪೂರ್ಣವಾಗಿ ಸುಟ್ಟು ಹೋಗುತ್ತದೆ. ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಈ ಪರಿಹಾರವನ್ನು ಮಾಡಿಕೊಳ್ಳಬಹುದು ಆದರೆ ಎಲ್ಲಾ ರಾಶಿಯಲ್ಲಿ ಜನಿಸಿದವರು ಈ ಪರಿಹಾರವನ್ನು ಮಾಡಿಕೊಳ್ಳಲು ಬರುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ವೃಶ್ಚಿಕ ರಾಶಿಯವರಿಗೆ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!