SC/ST ವರ್ಗಕ್ಕೆ ಸೇರಿದ ಜನರು ತಮ್ಮದೇ ಸ್ವಂತ ಉದ್ಯೋಗ ಮಾಡಿಕೊಳ್ಳಲು ಸರ್ಕಾರ ಇದೀಗ ಒಂದು ಉತ್ತಮವಾದ ಅವಕಾಶ ನೀಡಿದೆ, ಈ ಸೌಲಭ್ಯ ಬಳಸಿಕೊಂಡು ಸ್ವಂತ ಉದ್ಯೋಗ ಸೃಷ್ಟಿಸಿಕೊಳ್ಳಬಹುದು. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಆರ್ಥಿಕ ಅಭಿವೃದ್ಧಿ ಯೋಜನೆಗಳಲ್ಲಿ 2023-24ನೇ ಸಾಲಿಗೆ ಲೋನ್ ಪಡೆಯಲು ಅರ್ಜಿ ಆಹ್ವಾನ ನೀಡಲಾಗಿದೆ. ಈ ಯೋಜನೆಯ ಸೌಲಭ್ಯವನ್ನು ಅರ್ಹತೆ ಹೊಂದಿರುವ ಎಲ್ಲರೂ ಪಡೆದುಕೊಳ್ಳಬಹುದು.
ಒಂದು ವೇಳೆ ನೀವು ಈ ವರ್ಗಕ್ಕೆ ಸೇರಿದ್ದು, ಕೆಲಸದ ವಿಚಾರವಾಗಿ ತೊಂದರೆ ಅನುಭವಿಸುತ್ತಿದ್ದರೆ, ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಸೌಲಭ್ಯದ ಸುದುಪಯೋಗ ಪಡೆದುಕೊಳ್ಳಿ. ಇದು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಆಗಿದ್ದು, ಹಣಕಾಸಿನ ವಿಚಾರದ ಕೆಲಸಕ್ಕಾಗಿ ಸಹಾಯಧನವನ್ನು ಮಂಜೂರು ಮಾಡಲಾಗುತ್ತದೆ. ಇದರಲ್ಲಿ ಘಟಕದ ಖರ್ಚಿಗೆ 1 ಲಕ್ಷ, ಸಹಾಯಧನ 50 ಸಾವಿರ, ಸಾಲ 50 ಸಾವಿರ ಸಿಗುತ್ತದೆ, ಈ ಸಾಲಕ್ಕೆ 4% ಬಡ್ಡಿ ವಿಧಿಸಲಾಗುತ್ತದೆ.
ಈ ಯೋಜನೆಯ ಸೌಲಭ್ಯವನ್ನು ಬ್ಯಾಂಕ್ ಗಳ ಮೂಲಕ ನೀವು ಪಡೆದುಕೊಳ್ಳಬಹುದು, ಇದರಲ್ಲಿ ಬ್ಯುಸಿನೆಸ್ ಮತ್ತು ಬೇರೆ ಕೆಲಸಕ್ಕೂ ಸಹಾಯ ಧನ ನೀಡಲಾಗುತ್ತದೆ. ಸಹಾಯಧನ ನಿಮಗೆ ಇಲಾಖೆಯಿಂದ ಸಿಗುತ್ತದೆ, ಸಾಲವು ಬ್ಯಾಂಕ್ ಇಂದ ಸಿಗುತ್ತದೆ. ಘಟಕದ ಖರ್ಚಿಗೆ 70% ಸಹಾಯಧನ ಅಥವಾ 1 ಲಕ್ಷ ಹಾಗೂ 70% ಸಹಾಯಧನ ಅಂದರೆ 2 ಲಕ್ಷ ರೂಪಾಯಿಯವರೆಗು ಸಾಲ ಸಿಗುತ್ತದೆ.
ಸ್ವಾವಲಂಬಿ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಖರೀದಿಗೆ 75% ಸಹಾಯಧನ ಅಂದರೆ 4 ಲಕ್ಷದವರೆಗು ಘಟಕದ ವೆಚ್ಚಕ್ಕೆ ಸಹಾಯಧನ ನೀಡಲಾಗುತ್ತದೆ. ಮಹಿಳಾ ಸ್ವಸಹಾಯ ಸಂಘದ 10 ಅಭ್ಯರ್ಥಿಗಳು ಕೂಡ ಸಣ್ಣ ಉದ್ಯಮಕ್ಕೆ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಇದರಲ್ಲಿ ಘಟಕ ವೆಚ್ಚ 2.50 ಲಕ್ಷ ಸಿಗಲಿದ್ದು, ಇದರಲ್ಲಿ 1.50 ಲಕ್ಷ ಸಹಾಯಧನ ಅಂದರೆ ಸಬ್ಸಿಡಿ ಸಿಗಲಿದೆ. 1 ಲಕ್ಷದ ಸಾಲಕ್ಕೆ 4% ಬಡ್ಡಿ ಇರಲಿದೆ. ಈ ಯೋಜನೆಯಲ್ಲಿ ಭೂಮಿ ಇಲ್ಲದ ಮಹಿಳಾ ಕಾರ್ಮಿಕರಿಗೆ ಕೃಷಿ ಭೂಮಿಯನ್ನು ಖರೀದಿ ಮಾಡಿಕೊಡಲಾಗುತ್ತದೆ.
ಇದರಲ್ಲಿ ಘಟಕದ ವೆಚ್ಚ 20 ರಿಂದ 25 ಲಕ್ಷ ಇರಲಿದ್ದು, 50% ಸಹಾಯಧನ ಸಿಗಲಿದೆ. 6% ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ಇದು ಗಂಗಾ ಕಲ್ಯಾಣ ಯೋಜನೆ ಆಗಿದೆ. ಅರ್ಜಿ ಸಲ್ಲಿಸಲು ಆಯಾ ನಿಗಮಕ್ಕೆ ಸೇರಿದ ಕಚೇರಿಗೆ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅಥವಾ ಸೇವಾಸಿಂಧು ಪೋರ್ಟಲ್ ನಲ್ಲಿ ಕೂಡ ಭೇಟಿ ನೀಡಬಹುದು. 9482300400 ಈ ನಂಬರ್ ಗೆ ಕರೆಮಾಡಿ ಮಾಹಿತಿ ಪಡೆಯಬಹುದು. ಈ ಯೋಜನೆಯ ಮೂಲಕ ಅಗತ್ಯ ಇರುವ ಬಡವರ್ಗದ ಜನರು ಸೌಲಭ್ಯ ಪಡೆದುಕೊಳ್ಳಬಹುದು.