SBI loan Poultry Farm: ಬಹಳಷ್ಟು ಜನರಿಗೆ ತಮ್ಮದೇ ಸ್ವಂತ ಬ್ಯುಸಿನೆಸ್ ಶುರು ಮಾಡಬೇಕು ಎಂದು ಆಸೆ ಇರುತ್ತದೆ. ಆದರೆ ಹಣಕಾಸಿನ ವಿಚಾರ ಮತ್ತು ಇನ್ನಿತರ ಸಮಸ್ಯೆಗಳ ಕಾರಣ ಜೊತೆಗೆ ಯಾವ ಬ್ಯುಸಿನೆಸ್ ಮಾಡಬೇಕು ಎಂದು ಸರಿಯಾದ ಐಡಿಯಾ ಇರದ ಕಾರಣ ಬ್ಯುಸಿನೆಸ್ ಶುರು ಮಾಡಿರುವುದಿಲ್ಲ. ಅಂಥವರಿಗೆ ಇದೀಗ SBI ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ. ಒಂದು ವೇಳೆ ನೀವು ಕೋಳಿ ಫಾರ್ಮ್ ಬ್ಯುಸಿನೆಸ್ ಶುರು ಮಾಡುವುದಾಗಿದ್ದರೆ SBI ಇಂದ ಬರೋಬ್ಬರಿ 9 ಲಕ್ಷದವರೆಗು ಸಾಲ ಸೌಲಭ್ಯ ಸಿಗುತ್ತದೆ.

ಈ ಉದ್ಯಮ ಶುರು ಮಾಡುವುದಕ್ಕೆ SBI ಇಂದ ಸಾಲ ಪಡೆದು, ಉತ್ತಮವಾಗಿ ಲಾಭ ಪಡೆಯಬಹುದು. SBI ಇಂದ ಈ ಸೌಲಭ್ಯವನ್ನು ಹೇಗೆ ಪಡೆಯುವುದು ಎಂದು ತಿಳಿಸುತ್ತೇವೆ ನೋಡಿ.. ಈ ಉದ್ಯಮವು ರೈತರಿಗೆ ಅಥವಾ ಹಳ್ಳಿಯಲ್ಲಿ ವಾಸ ಮಾಡುತ್ತಿರುವವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರೆ ತಪ್ಪಲ್ಲ. ರೈತರು ಕೃಷಿಯ ಜೊತೆಗೆ ಪೌಲ್ಟ್ರಿ ಫಾರ್ಮಿಂಗ್ ಶುರು ಮಾಡಿದರೆ ಹೆಚ್ಚಿನ ಲಾಭದ ಪಡೆಯಬಹುದು..

ರೈತರು ಹೊಸದಾಗಿ ಏನನ್ನಾದರೂ ಮಾಡಲು ಸರ್ಕಾರ ಸಹಾಯ ಮಾಡುತ್ತದೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹೈನುಗಾರಿಕೆ ಇವುಗಳನ್ನು ಮಾಡಲು ಸರ್ಕಾರದ ಸಹಾಯ ಮಾತ್ರವಲ್ಲದೇ, SBI ಕೂಡ ಸಹಾಯ ಮಾಡಲಿದೆ. ಇದಕ್ಕಾಗಿ SBI ಸಾಲ ಸೌಲಭ್ಯ ಕೊಡುತ್ತಿದ್ದು, 9 ಲಕ್ಷದವರೆಗು 10.75% ವರೆಗು ಬಡ್ಡಿದರ ಸಿಗುತ್ತದೆ. ಇದು 3 ರಿಂದ 5 ವರ್ಷದವರೆಗು ಅವಧಿ ಇರುವ ಸಾಲ ಸೌಲಭ್ಯ ಆಗಿರುತ್ತದೆ. ಪ್ರತಿ ತಿಂಗಳು ಇಎಂಐ ಕಟ್ಟುವ ಮೂಲಕ ಸಾಲ ತೀರಿಸಬಹುದು.

ಕೋಳಿ ಸಾಕಣಿಕೆ ಶುರು ಮಾಡಲು, ಲೋನ್ ಅಪ್ಲಿಕೇಶನ್ ಜೊತೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳ ಜೊತೆಗೆ SBI ಬ್ಯಾಂಕ್ ಶಾಖೆಗೆ ಹೋಗಿ. ಬ್ಯಾಂಕ್ ಅಧಿಕಾರಿಗಳಿಗೆ ನೀವು ಕೋಳಿ ಫಾರ್ಮ್ ಶುರು ಮಾಡಲು ಯಾವೆಲ್ಲಾ ವೆಚ್ಚ ಬೇಕಾಗುತ್ತದೆ, ಎಷ್ಟು ಖರ್ಚಾಗುತ್ತದೆ ಎನ್ನುವುದರ ಪೂರ್ತಿ ಮಾಹಿತಿ ಕೊಡುವುದರ ಜೊತೆಗೆ ಸಾಲಕ್ಕೆ ಗ್ಯಾರೆಂಟಿ ನೀಡಬೇಕು. ನೀವು ಕೋಳಿ ಫಾರ್ಮ್ ಶುರು ಮಾಡುವುದಕ್ಕೆ ಯಾವ ಸಮಸ್ಯೆ ಇಲ್ಲ ಎನ್ನುವುದನ್ನು ನೀವು ಖಚಿತಪಡಿಸಿದ ಬಳಿಕ ಬ್ಯಾಂಕ್ ಇಂದ ನಿಮಗೆ ಸಾಲ ಮಂಜೂರು ಮಾಡಲಾಗುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!