ದೇಶದ ರಾಷ್ಟ್ರೀಕೃತ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಭಾರತೀಯ ಸ್ಟೇಟ್ ಬ್ಯಾಂಕ್ ನ ಖಾತೆದಾರರಿಗೆ ಕ್ರೆಡಿಟ್ ಕಾರ್ಡ್ ಬಳಕೆಯ ಕುರಿತು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್ ಒಂದು ಪ್ರಕಟಗೊಂಡಿದೆ. ಒಂದು ವೇಳೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಅವರಿಗೆ ಶಾಕ್ ನೀಡಲಿದೆ. ಇನ್ನುಮುಂದೆ ಎಸ್‌ಬಿಐ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡುವುದು ಮತ್ತಷ್ಟು ಕಷ್ಟಕರವಾಗಲಿದೆ. ಏಕೆಂದರೆ ಇನ್ನುಮುಂದೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ EMI ವಹಿವಾಟುಗಳಿಗೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಲಿದೆ.

ಎಸ್‌ಬಿಐ ಕಾರ್ಡ್‌ ಮತ್ತು ಪಾವತಿ ಸೇವೆಗಳ ಪ್ರೈವೇಟ್ ಲಿಮಿಟೆಡ್ EMI ವಹಿವಾಟುಗಳಿಗೆ, ಕಾರ್ಡ್‌ದಾರರು ಈಗ 99 ರೂಪಾಯಿ ಸಂಸ್ಕರಣಾ ಶುಲ್ಕ ಮತ್ತು ಅದರ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ ಈ ಹೊಸ ನಿಯಮವು 1 ಡಿಸೆಂಬರ್ 2021 ರಿಂದ ಜಾರಿಗೆ ಬರಲಿದೆ.

SBICPSL ರಿಟೇಲ್ ಔಟ್‌ಲೆಟ್‌ಗಳು ಮತ್ತು ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮಾಡಿದ ಎಲ್ಲಾ EMI ವಹಿವಾಟುಗಳಿಗಾಗಿ ಎಸ್ ಬಿಐ ತನ್ನ ಕೋಟಿಗಟ್ಟಲೆ ಗ್ರಾಹಕರಿಂದ ಪ್ರೊಸೆಸಿಂಗ್ ಶುಲ್ಕವನ್ನು ತೆಗೆದುಕೊಳ್ಳುತ್ತದೆ. ಹೊಸ ಶುಲ್ಕದ ಬಗ್ಗೆ ಕಂಪನಿಯು ತನ್ನ ಗ್ರಾಹಕರಿಗೆ ಇಮೇಲ್ ಮೂಲಕ ಮಾಹಿತಿ ನೀಡಲಿದೆ. EMI ಆಗಿ ಪರಿವರ್ತಿಸಲಾದ ವಹಿವಾಟಿನ ಮೇಲೆ ಸಂಸ್ಕರಣಾ ಶುಲ್ಕಗಳು ಅನ್ವಯಿಸುತ್ತವೆ.

ಈಗ ಹೊಸ ನಿಯಮದ ಪ್ರಕಾರ ಡಿಸೆಂಬರ್ 1 ರ ಮೊದಲು ಮಾಡಿದ ಯಾವುದೆ ವಹಿವಾಟಿಗೆ ಈ ಸಂಸ್ಕರಣಾ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ರಿಟೇಲ್ ಔಟ್‌ಲೆಟ್‌ಗಳಲ್ಲಿ ಖರೀದಿ ಮಾಡುವಾಗ ಕಂಪನಿಯು ಚಾರ್ಜ್ ಸ್ಲಿಪ್‌ಗಳ ಮೂಲಕ EMI ವಹಿವಾಟಿನ ಪ್ರೊಸೆಸಿಂಗ್ ಶುಲ್ಕಗಳ ಬಗ್ಗೆ ಕಾರ್ಡ್‌ ಧಾರಕರಿಗೆ ಮಾಹಿತಿ ನೀಡುತ್ತದೆ. ಈ ನಿಟ್ಟಿನಲ್ಲಿ ಆನ್‌ಲೈನ್ EMI ವಹಿವಾಟುಗಳಿಗೆ ಪಾವತಿ ಪುಟದಲ್ಲಿ ಸಂಸ್ಕರಣಾ ಶುಲ್ಕದ ಬಗ್ಗೆ ಕಂಪನಿಯು ಮಾಹಿತಿಯನ್ನು ನೀಡುತ್ತದೆ.

ಗ್ರಾಹಕರ EMI ವಹಿವಾಟು ರದ್ದುಗೊಂಡರೆ ಪ್ರೊಸೆಸಿಂಗ್ ಶುಲ್ಕವನ್ನು ಮರುಪಾವತಿಸಲಾಗುತ್ತದೆ ಆದರೆ ಪ್ರೀಕ್ಲೋಜರ್ ಸ್ಥಿತಿಯಲ್ಲಿ ಅದನ್ನು ಮರುಪಾವತಿಸಲಾಗುವುದಿಲ್ಲ. ಇದು ಮಾತ್ರವಲ್ಲದೆ EMI ಆಗಿ ಪರಿವರ್ತಿಸಲಾದ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಅನ್ವಯಿಸುವುದಿಲ್ಲ. ಒಟ್ಟಾರೆಯಾಗಿ ಎಸ್ ಬಿಐ ತನ್ನ ಖಾತೆದಾರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಎಸ್ ಬಿಐ ಖಾತೆದಾರರಿಗೆ ತಿಳಿಸಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!