Sanju Basayya Couples in Zee Kannada Function: ಜೀಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ ಜೋಡಿ ನಂಬರ್ 1. ಈ ಕಾರ್ಯಕ್ರಮದ ಸೀಸನ್2 ಈಗಷ್ಟೇ ಶುರುವಾಗಿದ್ದು, ಶನಿವಾರ ಜೋಡಿ ನಂ1 ಕಾರ್ಯಕ್ರಮದ ಮೊದಲ ಸಂಚಿಕೆ ಶುರುವಾಗಿದೆ. ಮೊದಲ ಸೀಸನ್ ನ ಹಾಗೆಯೇ ಈ ಸೀಸನ್ ನಲ್ಲಿ ಸಹ ಸಾಕಷ್ಟು ಸೆಲೆಬ್ರಿಟಿ ಜೋಡಿಗಳು ಸ್ಪರ್ಧಿಗಳಾಗಿ ಬಂದಿದ್ದಾರೆ. ಅವರ ಫೈಕಿ ಕಾಮಿಡಿ ಕಿಲಾಡಿಗಳು ಖ್ಯಾತಿ ಸಂಜು ಬಸ್ಸಯ್ಯ ಕೂಡ ತಮ್ಮ ಪತ್ನಿ ಪಲ್ಲವಿ ಅವರೊಡನೆ ಸ್ಪರ್ಧಿಯಾಗಿ ಬಂದಿದ್ದಾರೆ. ಆದರೆ ಜೋಡಿ ನಂ1 ವೇದಿಕೆಯಲ್ಲಿ ಪತ್ನಿಯ ಜೊತೆಗೆ ಕಣ್ಣೀರು ಹಾಕಿದ್ದಾರೆ.

ತಮ್ಮ ಜೀವನದ ಬಗ್ಗೆ ಮಾತನಾಡಿರುವ ಸಂಜು ಬಸ್ಸಯ್ಯ ಅವರ ಪತ್ನಿ ಪಲ್ಲವಿ ಅವರು, “ನಾನು ನಾಟಕಗಳಲ್ಲಿ ನಟಿಸುತ್ತಿದ್ದೆ, ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ. ನನಗೆ ಸಂಜು ಅವರ ಪರಿಚಯವಾಯಿತು, ಅವರನ್ನ ಮೊದಲ ಸಲ ನೋಡಿದಾಗ, ಅವರು ನನಗಿಂತ ಚಿಕ್ಕವರು ಅಂತ ಅನ್ನಿಸಿತ್ತು, ಆಮೇಲೆ ಗೊತ್ತಾಗಿದ್ದು ಅವರು ನನಗಿಂತ 6 ತಿಂಗಳು ದೊಡ್ಡವರು ಎಂದು..ಶುರುವಿನಲ್ಲಿ ನಾವಿಬ್ಬರು ಸ್ನೇಹಿತರಾಗಿದ್ವಿ, ನನ್ನ ನೋವು ನಲಿವು ಅದೆಲ್ಲವನ್ನ ಸಂಜು ಜೊತೆ ಹೇಳ್ಕೊಳ್ತಾ ಇದ್ದೆ. ಅವರು ಕೂಡ ನನಗೆ ಮೆಸೇಜ್ ಮಾಡ್ತಾ ಇದ್ರು..

ಆಗಾಗ ಅವರು ವಿಡಿಯೋ ಕಾಲ್ ಮಾಡ್ತಾ ಇದ್ರು, ಒಂದು ದಿನ ಪ್ರೊಪೋಸ್ ಮಾಡಿದ್ರು. ಪ್ರೊಪೋಸ್ ಮಾಡಿ 3 ದಿನ ಆದಮೇಲೆ ನಾನು ಉತ್ತರ ಕೊಟ್ಟಿದ್ದೆ..” ಎಂದು ಹೇಳಿದ್ದಾರೆ ಪಲ್ಲವಿ. “ಸಂಜು ಅವರಿಗೆ ನನ್ನಮೇಲೆ ಪ್ರೀತಿ ಇದೆ ಅಂತ ಗೊತ್ತಿರಲಿಲ್ಲ. ಅವರು ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಸರು ಮಾಡಿದ್ರು, ಅವರನ್ನ ನಾನು ಪ್ರೀತಿಸೋದಕ್ಕೆ ಶುರು ಮಾಡಿದ್ರೆ, ಅವರ ಆಸ್ತಿ, ಹೆಸರು ನೋಡಿ ಪ್ರೀತಿ ಮಾಡ್ತಿದ್ದೀನಿ ಅಂದುಕೊಳ್ತಾರೆ ಅಂತ ಭಯ ಇತ್ತು. ಅದೇ ಕಾರಣಕ್ಕೆ 3 ದಿನ ಆದಮೇಲೆ ಒಪ್ಪಿಗೆ ತಿಳಿಸಿದೆ. ಒಪ್ಪಿದ ಮೇಲೆ ಜನರು ನಮ್ಮ ಬಗ್ಗೆ ಏನೇನೋ ಮಾತನಾಡೋದಕ್ಕೆ ಶುರು ಮಾಡಿದರು..

ಆಗ ಸಂಜು ಅವರು, ನನ್ನಿಂದ ನಿನ್ನ ಜೀವನ ಹಾಳಾಗೋದು ಬೇಡ ನೀನು ಚೆನ್ನಾಗಿರು ಅಂತ ಬ್ರೇಕಪ್ ಮಾಡಿಕೊಂಡರು. ಆದರೆ ಒಬ್ಬರನ್ನೊಬ್ಬರು ಬಿಟ್ಟು 3 ದಿನ ಇರೋಕು ಆಗ್ಲಿಲ್ಲ. ಆಮೇಲೆ ನಾನು ಅವರ ಜೊತೆಗೆ ಬೇರೆಯವರ ಮಾತಿಗೆ ಯಾಕೆ ತಲೆಕೆಡಿಸಿಕೊಳ್ಳಬೇಕು, ನಾನು ನಿಮ್ಮನ್ನ ಅರ್ಥ ಮಾಡಿಕೊಂಡಿದ್ದೀನಿ, ನೀವು ನನ್ನನ್ನ ಅರ್ಥ ಮಾಡಿಕೊಂಡಿದ್ದಾರೆ. ಜೀವನ ಮಾಡೋಕೆ ಇನ್ನೇನು ಬೇಕು..” ಅಂತ ಹೇಳಿದ್ದೆ.. “ಎರಡು ಮನೆಯವರನ್ನು ಒಪ್ಪಿಸಿ ಮದುವೆ ಆಗಬೇಕು ಅಂದುಕೊಂಡ್ವಿ..ನಾನು ರಂಗಭೂಮಿಯವಳು ಆರ್ಕೆಸ್ಟ್ರಾದಲ್ಲಿ ಹಾಡೋಳು ನನ್ನ ಒಳ್ಳೆ ಹುಡುಗಿ ಅಲ್ಲ ಅಂತ ಜನ ಬೇರೆ ಥರ ಮಾತಾಡಿದ್ರು.

Sanju Basayya Couples in Zee Kannada Function:

ನಮ್ ಮನೇಲಿ ಈ ಮದುವೆಗೆ ಒಪ್ಪಲಿಲ್ಲ, ಅವರ ಮನೆಯಲ್ಲಿ ಕೂಡ ಒಪ್ಪಿಗೆ ಕೊಡಲಿಲ್ಲ. ನಂತರ ಮನೆಯಲ್ಲಿ ನಾವೇ ಹುಡುಕಿದ್ದರು ಈ ಥರ ಹುಡುಗಿ ಸಿಗ್ತಿರ್ಲಿಲ್ಲ ಅಂತ ಹೇಳಿದ್ರು..ಸಂಜು ಟಿವಿಯಲ್ಲಿ ಬರೋದು ನನ್ನ ತಾಯಿಗೆ ತುಂಬಾ ಸಂತೋಷವಿದೆ..” ಎಂದು ಪಲ್ಲವಿ ಹೇಳಿದ್ದಾರೆ. ಇನ್ನು ಸಂಜು ಅವರು ಕೂಡ ಮಾತನಾಡಿ, “ನಾನು ಕುಳ್ಳ ಅಂತ ಗೊತ್ತಾಗಿದ್ದು, ನಾನು 7ನೇ ವಯಸ್ಸಿನಲ್ಲಿ ಇದ್ದಾಗ.. ಆಗ ನನ್ನ ತಂದೆಯ ಹತ್ತಿರ ಎಲ್ಲರೂ ನಿನ್ನ ಮಗನ ಹೊರೆಯನ್ನು ನೀನೇ ಹೊರಬೇಕು ಅಂತ ಹೇಳ್ತಿದ್ರು..

ಆದರೆ ನಾನು ತಂದೆಗೆ ಭಾರ ಆಗಲಿಲ್ಲ, ಚಿಕ್ಕವನಿದ್ದಾಗಲೇ ಆರ್ಕೆಸ್ಟ್ರಾ ಗೆ ಸೇರಿ ಹಣ ಸಂಪಾದನೆ ಮಾಡೋದಕ್ಕೆ ಶುರು ಮಾಡಿದೆ. ವ್ಯವಸಾಯ ಮಾಡೋರಿಗೆ ಯಾರು ಹೆಣ್ಣು ಕೊಡ್ತಾರೆ ಅಂತ ಅನ್ನಿಸುತ್ತಿತ್ತು. ಕೆಲವು ಫ್ರೆಂಡ್ಸ್ ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಅಂತ ಹೇಳಿದ್ರೆ ಇನ್ನು ಕೆಲವರು ಇವನಿಂದ ಯಾವ ಸುಖ ಸಿಗುತ್ತೆ ಅಂತಿದ್ರು.. ಹೀಯಾಳಿಸಿದ್ರು, ಆದರೆ ನಾನು ಈ ವೇದಿಕೆ ಮೇಲೆ ನಿಲ್ಲೋದಕ್ಕೆ ನನ್ನ ತಂದೆ ಮತ್ತು ಪಲ್ಲವಿ ಇಬ್ಬರು ಕಾರಣ..ನನ್ನನ್ನ ಪಲ್ಲವಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಯಾರು ಕೂಡ ಚಟಕ್ಕೆ ಬಿದ್ದು ಪ್ರೀತಿ ಮಾಡಬೇಡಿ. ಮನಸ್ಸಿನಿಂದ ಪ್ರೀತಿಸಿ..” ಎಂದು ಹೇಳಿದ್ದಾರೆ ಸಂಜು.. ಈ ಮಾತಿನಿಂದ ಜನರು ಜಡ್ಜ್ ಗಳು ಭಾವುಕರಾದರು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!