ವಾಹನ ಸವಾರರಿಗೆ ರಾಜ್ಯ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಇನ್ನು ಮುಂದೆ ಡ್ರೈವಿಂಗ್ ಲೈಸನ್ಸ್ ಇಲ್ಲವಾದರೆ ಹತ್ತು ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ರೈತರಿಗೆ ಒಂದು ಸಿಹಿ ಸುದ್ದಿ ಇದೆ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಡ್ರೈವಿಂಗ್ ಲೈಸನ್ಸ್ ವಾಹನ ಸವಾರರಿಗೆ ಇರಬೇಕಾದ ಒಂದು ಮುಖ್ಯ ದಾಖಲೆಯಾಗಿದೆ ಇನ್ನು ಮುಂದೆ ಡ್ರೈವಿಂಗ್ ಲೈಸನ್ಸ್ ಇಲ್ಲದೆ ಇರುವವರು 10,000 ದಂಡ ಕಟ್ಟಬೇಕಾಗುತ್ತದೆ, ಅಲ್ಲದೆ ಡ್ರೈವಿಂಗ್ ಲೈಸನ್ಸ್ ಜೊತೆಗೆ ಆರ್ ಸಿ, ಇನ್ಸೂರೆನ್ಸ್ ದಾಖಲೆ ಹೊಂದಿರಬೇಕು. ವಾಹನ ಬಳಕೆಯಿಂದ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅವುಗಳ ಜೊತೆಗೆ ಕೇಂದ್ರ ಸರ್ಕಾರ ಪಿಯುಸಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ ಈ ಪ್ರಮಾಣ ಪತ್ರ ಹೆಚ್ಚು ಮಾಲಿನ್ಯ ಇರುವ ಸ್ಥಳಗಳಲ್ಲಿ ಅನ್ವಯಿಸುತ್ತದೆ
ವಾಹನದ ಮೇಲ್ಮೈ ಹೇಗಿದೆ ಹಾಗೂ ಪರಿಸರಕ್ಕೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನ ಒಳಗೊಂಡಿರುವ ಪ್ರಮಾಣಪತ್ರವಾಗಿದೆ. ಪಿಯುಸಿ ಪ್ರಮಾಣ ಪತ್ರವನ್ನು ಪ್ರತಿಯೊಬ್ಬ ವಾಹನ ಚಾಲಕನು ಹೊಂದಿರಬೇಕು ಹಾಗೂ ಪಿಯುಸಿ ಪ್ರಮಾಣ ಪತ್ರವನ್ನು ಮೂರು ಮತ್ತು ಆರು ತಿಂಗಳಿಗೊಮ್ಮೆ ನವೀಕರಿಸಬೇಕಾಗುತ್ತದೆ ಒಂದು ವೇಳೆ ಪಿಯುಸಿ ಪ್ರಮಾಣ ಪತ್ರ ಇಲ್ಲವಾದರೆ ರೂಪಾಯಿ10,000 ದಂಡ ವಿಧಿಸಲಾಗುತ್ತದೆ ಹಾಗೂ ಆರು ತಿಂಗಳು ಜೈಲುವಾಸ.
ಕಾರಿಗೆ ಪ್ರತಿ ವರ್ಷ ಪಿಯುಸಿ ಪ್ರಮಾಣ ಪತ್ರವನ್ನು ನವೀಕರಿಸಬೇಕಾಗುತ್ತದೆ. ಈ ಪ್ರಮಾಣ ಪತ್ರ ಮಾಡಿಸಲು ಹತ್ತಿರವಿರುವ ಪಿಯುಸಿ ಸೆಂಟರಿಗೆ ಭೇಟಿ ನೀಡಬೇಕು ಈ ಸೆಂಟರ್ ಎಲ್ಲಾ ಪೆಟ್ರೋಲ್ ಬಂಕ್ ಗೆಳಲ್ಲಿ ಇರುತ್ತದೆ ವಾಹನಗಳನ್ನು ಪರಿಶೀಲಿಸಿದ ನಂತರ ಮಾಲಿನ್ಯ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಕಡ್ಡಾಯವಾಗಿ ಪ್ರತಿಯೊಬ್ಬ ವಾಹನ ಚಾಲಕರು ಪಿಯುಸಿ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.
ನಮ್ಮ ದೇಶದಲ್ಲಿ ಕೃಷಿ ಮುಖ್ಯ ಉದ್ಯೋಗವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಕೃಷಿಗೆ ಪೂರಕ ಚಟುವಟಿಕೆಗಳಿಗೆ ಬೆಂಬಲ ಕೊಡಬೇಕಾಗಿದೆ, ಕೃಷಿ ಚಟುವಟಿಕೆಯಲ್ಲಿ ತೊಡಗುವವರ ಸಂಖ್ಯೆ ಕಡಿಮೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಮುಂದುವರಿಸಿಕೊಂಡು ಹೋಗಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೆಲವು ಕೃಷಿ ಪೂರಕ ಯೋಜನೆಗಳನ್ನು ಜಾರಿಗೊಳಿಸುತ್ತದೆ. ರೈತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಕಿಸಾನ್ ಆಶೀರ್ವಾದ ಎಂಬ ಸ್ಕೀಮ್ ಅನ್ನು ಪರಿಚಯಿಸಿದೆ. ಐದು ಎಕರೆ ಅಥವಾ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು 25,000 ರೂಪಾಯಿ ಸಹಾಯಧನ ಪಡೆಯುವ ಅವಕಾಶವಿದೆ. ಈ ಯೋಜನೆಯಲ್ಲಿ ರೈತರು ಒಂದು ಎಕರೆಗೆ 5000 ರೂಪಾಯಿ ಸಹಾಯಧನದಂತೆ 5 ಎಕರೆಗೆ 25,000 ರೂಪಾಯಿ ಸಹಾಯಧನವನ್ನು ಪಡೆಯಬಹುದು. ಈ ಯೋಜನೆಗೆ ಪಹಣಿ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಾಸ್ಪೋರ್ಟ್ ಸೈಜ್ ಫೋಟೋ ಈ ದಾಖಲೆಗಳ ಜೊತೆಗೆ ಕೃಷಿ ಇಲಾಖೆಯನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯನ್ನು ಈಗಾಗಲೆ ಝಾರ್ಖಂಡ್ ರಾಜ್ಯದಲ್ಲಿ ಜಾರಿಗೆ ತರಲಾಗಿದೆ, ಝಾರ್ಖಂಡ್ ರಾಜ್ಯದಲ್ಲಿ ಈ ಯೋಜನೆ ಯಶಸ್ವಿ ಆದರೆ ರಾಷ್ಟ್ರವ್ಯಾಪಿ ಜಾರಿಯಾಗುತ್ತದೆ.
ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರಿಗೆ ಸರ್ಕಾರದಿಂದ ಆರ್ಥಿಕ ನೆರವು ಅವಶ್ಯಕತೆ ಇದೆ. ವರ್ಷದ ಬೆಳೆಯನ್ನು ನಂಬಿಕೊಂಡಿರುವ ರೈತರು ಕೃಷಿಗೆ ಸಂಬಂಧಪಟ್ಟ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಕೃಷಿ ಉಪಕರಣಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತದೆ. ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ 50% ಸಬ್ಸಿಡಿ ನೀಡಲಾಗುತ್ತದೆ. ಇದೀಗ ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನೆಯಡಿ 970 ಕೃಷಿ ಉಪಕರಣಗಳನ್ನು 90% ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದೆ. ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ವಾಸಸ್ಥಳದ ಗುರುತಿನ ಚೀಟಿ, ನಿವಾಸದ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಭೂಮಿಯ ಪಹಣಿ ಪತ್ರ ಆಧಾರ್ ಕಾರ್ಡಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಪಾಸ್ಪೋರ್ಟ್ ಅಳತೆಯ ಫೋಟೊ ಈ ದಾಖಲೆಗಳನ್ನು ತೆಗೆದುಕೊಂಡು ಕೃಷಿ ಇಲಾಖೆ, ಸಬ್ಸಿಡಿ ಕೇಂದ್ರ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯದಲ್ಲಿ ಝಾರ್ಖಂಡ್ ರಾಜ್ಯದಲ್ಲಿ ಪ್ರಾರಂಭವಾಗಿದೆ ನಂತರದ ದಿನಗಳಲ್ಲಿ ಕರ್ನಾಟಕದಲ್ಲಿ ಜಾರಿಗೆ ತರಬಹುದು ಈ ಮಾಹಿತಿಯನ್ನು ಎಲ್ಲ ರೈತರಿಗೂ ತಲುಪಿಸಿ.