ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಾವಿನ ಸುತ್ತ ಅನುಮಾನಗಳ ಹುತ್ತವೇ ಸುತ್ತುಕೊಂಡಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆಯ ಕಾರಿನಲ್ಲಿ ಚಂದ್ರಶೇಖರ್ ಶವ ಸಿಕ್ಕಿದೆ. ಕಳೆದ ಭಾನುವಾರ ಚಿಕ್ಕಮಗಳೂರಿನ ಗೌರಿಗದ್ದೆಗೆ ಕಾರಿನಲ್ಲಿ ತೆರಳಿದ್ದ ಚಂದ್ರಶೇಖರ್ ಅವರು ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ನಂತರ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಯತ್ತ ತೆರಳಿದ್ರು. ಸಾವಿನ ಬಗ್ಗೆ ಅವಧೂತರಿಗೆ ಮೊದಲೇ ಮುನ್ಸೂಚನೆ ಸಿಕ್ಕಿತ್ತಾ ಎನ್ನುವ ಪ್ರಶ್ನೆ ಎತ್ತಿದೆ.
ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದ ಚಂದ್ರಶೇಖರ್, ಆಶ್ರಮದಿಂದ ತೆರಳುವ ಮೊದಲು ಜಾಗ್ರತೆಯಿಂದ ಮನೆಗೆ ಹೋಗಿ ಎಂದು ವಿನಯ್ ಗುರೂಜಿ ಹೇಳಿದ್ದರಂತೆ. ಈ ವೇಳೆ ಚಂದ್ರಶೇಖರ್ ಜೊತೆಗೆ ಅವರ ಗೆಳೆಯ ಕಿರಣ್ ಸಹ ಉಪಸ್ಥಿತರಿದ್ದರು ಎಂದು ಆಶ್ರಮದಲ್ಲಿರುವ ಚಂದ್ರಶೇಖರ್ ಗುರೂಜಿ ಅವರ ಅಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿನಯ್ ಗುರೂಜಿ ಆಶ್ರಮಕ್ಕೆ ಚಂದ್ರಶೇಖರ್ ಅವರು ಅಂದು ರಾತ್ರಿ 9 ಗಂಟೆಯ ನಂತರ ಆಶ್ರಮಕ್ಕೆ ಬಂದಿದ್ದರು. ಸುಮಾರು 9.40ರವರೆಗೂ ವಿನಯ್ ಗುರೂಜಿಗಾಗಿ ಕಾದಿದ್ದರು.
ಚಂದ್ರಶೇಖರ್ ಅವರು ಆಗಾಗ ಆಶ್ರಮಕ್ಕೆ ಬರುತ್ತಿದ್ದ ಕಾರಣ ಗುರೂಜಿಗೆ ಚಿರಪರಿಚಿತರಾಗಿದ್ದರು. ಯಾಕೋ ಲೇಟ್ ಆಗಿ ಬಂದೆ, ಇದು ಬರುವ ಟೈಮಾ ಎಂದು ಗುರೂಜಿಗೆ ಸಲುಗೆಯಿಂದಲೇ ಚಂದ್ರಶೇಖರ್ಗೆ ಗದರಿಸಿದ್ದರಂತೆ. ವಿನಯ್ ಗುರೂಜಿ ಜೊತೆ ಮಾತಾಡಿ ವಾಪಸ್ ತೆರಳುತ್ತಿದ್ದ ವೇಳೆ ಚಂದ್ರಶೇಖರ್ ಅವರನ್ನು ಕರೆದು ವಿನಯ್ ಗುರೂಜಿ ಹೀಗೆ ಹೇಳಿದ್ದರಂತೆ, ಈಗಾಗಲೇ ತಡವಾಗಿದೆ, ಜಾಗ್ರತೆಯಿಂದ ಹೋಗಿ ಎಂದು ಎಚ್ಚರಿಕೆ ಹೇಳಿದ್ದರು. ನಂತರ ರಾತ್ರಿ ಸುಮಾರು 9.45ರ ಹೊತ್ತಿಗೆ ಚಂದ್ರಶೇಖರ್ ಅವರು ಆಶ್ರಮದಿಂದ ಸ್ನೇಹಿತ ಕಿರಣ್ ಜೊತೆಗೆ ಹೊರ ಹೊರಟರು.
ರಾತ್ರಿ 10 ಗಂಟೆಯ ವೇಳೆಯಲ್ಲಿ ಚಂದ್ರಶೇಖರ್ ಅವರಿದ್ದ ಕಾರು ಕೊಪ್ಪ ಬಸ್ ನಿಲ್ದಾಣದಿಂದ ದಾಟಿ ಹೋಗಿರುವ ದೃಶ್ಯ ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಮ್ಮ ಮನೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ನನ್ನ ಮೇಲಿನ ದ್ವೇಷದಿಂದ ಮಗನ ಬಲಿ ಪಡೆದಿದ್ದಾರೆ. ಅವರಿಗೆ ದ್ವೇಷ ಇದ್ದಿದ್ದರೆ ನನ್ನ ಬಲಿ ಪಡೆಯಬೇಕಿತ್ತು. ಈಗ ನನ್ನ ಮಗನ ಕೊಲೆ ಮಾಡಿದ್ದಾರೆ. ನನಗೆ ತುಂಬಾ ನೋವಿದೆ. ಚಂದ್ರಶೇಖರ್ ಹೋಗುವಾಗ ಕೇಸರಿ ಶಾಲ್ ಹಾಕಿಕೊಂಡು ಹೋಗಿದ್ದ.
ನಾನು ಆರಂಭದಿಂದಲೂ ಹೇಳುತ್ತಿದ್ದೆ ಇದೊಂದು ಕಿಡ್ನಾಪ್ ಪ್ರಕರಣ ಅಂತ. ಇದೊಂದು ವ್ಯವಸ್ಥಿತ ಕೊಲೆಯಾಗಿದೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ. ಚಂದ್ರಶೇಖರ್ನನ್ನು ಪೋನ್ ಮಾಡಿ ಕರೆಸಿಕೊಂಡಿದ್ದಾರೆ. ಗೌರಿಗದ್ದೆ ಹೋಗುತ್ತೇನೆಂದು ಅವರ ಕುಟುಂಬಸ್ಥರಿಗೆ ಹೇಳಿ ಹೋಗಿದ್ದ. ಆತ ತುಂಬಾ ಸಭ್ಯನಿದ್ದ. ಆತನಿಗೆ ಯಾವುದೇ ಶತ್ರುಗಳಿರಲಿಲ್ಲ ಯಾರಿಗೂ ಕೂಡ ದೊಡ್ಡ ದನಿಯಿಂದ ಕೂಡ ಮಾತನಾಡದ ಮೃದು ಸ್ವಭಾವಿ. ನಮ್ಮ ಮನೆಯ ದೀಪ ಆರಿದೆ. ಮುಖ್ಯಮಂತ್ರಿ, ಗೃಹ ಸಚಿವರು ಈ ಘಟನೆಯ ಬಗ್ಗೆ ತನಿಖೆ ನಡೆಸಲಿ ಎಂದು ರೇಣುಕಾಚಾರ್ಯ ಹೇಳಿದ್ದರು.