RBI New Rules For Bank Loan: ಎಲ್ಲರೂ ಕೂಡ ಒಂದಲ್ಲಾ ಒಂದು ಸಮಯದಲ್ಲಿ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತೇವೆ. ಆ ವೇಳೆ ಮತ್ತೊಬ್ಬ ವ್ಯಕ್ತಿಯಿಂದ ಸಾಲ ಪಡೆದು ತೊಂದರೆ ಅನುಭವಿಸುವುದಕ್ಕಿಂತ ಬ್ಯಾಂಕ್ ಇಂದ ಸಾಲ ಪಡೆದರೆ ಸುರಕ್ಷತೆ ಇರುತ್ತದೆ ಎಂದು ನಾವು ಬ್ಯಾಂಕ್ ಮೊರೆ ಹೋಗುತ್ತೇವೆ. ಸಾಲ ಕೊಡುವುದಕ್ಕೆ ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿಯ ನಿಯಮಗಳು ಇರುತ್ತದೆ. ಬೇರೆ ಬೇರೆ ಬಡ್ಡಿದರ ಅನ್ವಯವಾಗುತ್ತದೆ.
ಬ್ಯಾಂಕ್ ಗಳಲ್ಲಿ ವೆಹಿಕಲ್ ಲೋನ್, ಹೋಮ್ ಲೋನ್, ಪರ್ಸನಲ್ ಲೋನ್ ಹೀಗೆ ಸಾಕಷ್ಟು ರೀತಿಯಲ್ಲಿ ಲೋನ್ ಗಳು ಸಿಗುತ್ತದೆ. ಇವುಗಳಿಗೆ ನಿಮ್ಮ ಆಸ್ತಿಪತ್ರವನ್ನು ಅಡವಿಟ್ಟುಕೊಂಡು ಲೋನ್ ಕೊಡುತ್ತಾರೆ. ನೀವು ಸರಿಯಾದ ಸಮಯಕ್ಕೆ ಲೋನ್ ಪಾವತಿ ಮಾಡಿದ ನಂತರ ನಿಮ್ಮ ಆಸ್ತಿಪತ್ರವನ್ನು ಹಿಂದಿರುಗಿಸಿ ಕೊಡಬೇಕು. ಆದರೆ ಕೆಲವು ಕಡೆ ಗ್ರಾಹಕರು ಸರಿಯಾದ ಸಮಯಕ್ಕೆ ಲೋನ್ ಪಾವತಿ ಮಾಡಿದ್ದರು ಕೂಡ ಅವರಿಗೆ ಆಸ್ತಿಪತ್ರವನ್ನು ನೀಡಿಲ್ಲ. ಇಂಥ ಪ್ರಕರಣಗಳು ಬೆಳಕಿಗೆ ಬಂದಿದೆ.
ಈ ರೀತಿಯಾಗಿ ಬ್ಯಾಂಕ್ ಇಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರು RBI ಗೆ ಪತ್ರ ಬರೆದು, ತಮ್ಮ ತೊಂದರೆಯನ್ನು ವಿವರಿಸಿದ್ದಾರೆ. ಬ್ಯಾಂಕ್ ಇಂದ ತಮ್ಮ ಆಸ್ತಿ ಪತ್ರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಗ್ರಾಹಕರ ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿರುವ RBI, ಇದೀಗ ಜನರ ಪರವಾಗಿ ಈ ಸಮಸ್ಯೆಗೆ ಪರಿಹಾರ ನೀಡಿದೆ. RBI ಹೊಸ ಆದೇಶ ಕೇಳಿ ಬ್ಯಾಂಕ್ ಗಳೇ ಶಾಕ್ ಆಗಿವೆ.
RBI New Rules For Bank Loan
RBI ಹೊಸ ಆದೇಶದ ಪ್ರಕಾರ ಎಲ್ಲಾ ಬ್ಯಾಂಕ್ ಗಳು ಕೂಡ ತಮ್ಮ ಗ್ರಾಹಕರು ಸಮಯಕ್ಕೆ ಸರಿಯಾಗಿ ಲೋನ್ ಪಾವತಿ ಮಾಡಿದರೆ, ಲೋನ್ ಮುಗಿದ 30 ದಿನಗಳ ಒಳಗೆ ಪಡೆದಿರುವ ಆಸ್ತಿ ಪತ್ರವನ್ನು ಅವರಿಗೆ ಹಿಂದಿರುಗಿಸಬೇಕು. ಒಂದು ವೇಳೆ 1 ತಿಂಗಳು ಕಳೆದರೂ ಆಸ್ತಿ ಪತ್ರ ಕೊಟ್ಟಿಲ್ಲ ಎಂದರೆ, 30 ದಿನಗಳ ಬಳಿಕ ಒಂದು ದಿನಕ್ಕೆ 5000 ಸಾವಿರದ ಹಾಗೆ, ಗ್ರಾಹಕರಿಗೆ ಬ್ಯಾಂಕ್ ದಂಡ ಕಟ್ಟಬೇಕಾಗುತ್ತದೆ. ಇದು RBI ನೀಡಿರುವ ಹೊಸ ತೀರ್ಪಾಗಿದ್ದು ಇದರಿಂದ ಜನರಿಗೆ ಸಮಾಧಾನ ಆಗಿದೆ.
ಒಂದು ವೇಳೆ ಗ್ರಾಹಕರ ಆಸ್ತಿಪತ್ರ ಡ್ಯಾಮೇಜ್ ಆಗಿದ್ದು ಅಥವಾ ಕಳೆದು ಹೋಗಿದ್ದರೆ, ಲೋನ್ ಮುಗಿದ 2 ತಿಂಗಳ ಒಳಗೆ ಬ್ಯಾಂಕ್ ಎಲ್ಲವನ್ನು ಸರಿಪಡಿಸಿ ಕೊಡಬೇಕಾಗುತ್ತದೆ. ಇಲ್ಲದೆ ಹೋದರೆ ಗ್ರಾಹಕರಿಗೆ ಭಾರಿ ದಂಡ ಕಟ್ಟಿಕೊಡಬೇಕಾಗುತ್ತದೆ. ಈ ಎರಡು ನಿಯಮಗಳಿಂದ ಜನರಿಗೆ ಅನುಕೂಲ ಆಗಿದ್ದು, ಬ್ಯಾಂಕ್ ಗೆ ಸಮಸ್ಯೆ ಆಗಿದೆ.