Ration card update status Karnataka: ನಮ್ಮ ರಾಜ್ಯದಲ್ಲಿ ಈಗ ರೇಷನ್ ಕಾರ್ಡ್ ಇಲ್ಲ ಎಂದರೆ ಸರ್ಕಾರದ ಯಾವುದೇ ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಜನರು ತಮ್ಮ ರೇಶನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಅಪ್ಡೇಟ್ ಮಾಡಿಸಲು ಕಾದಿದ್ದರು. ಈ ತಿಂಗಳ ಶುರುವಿನಲ್ಲಿ ಸರ್ಕಾರ ಕೂಡ ರೇಶನ್ ಕಾರ್ಡ್ ಅಪ್ಡೇಟ್ ಅನುಮತಿ ನೀಡಿತ್ತು. 13ನೇ ತಾರೀಕಿನ ಒಳಗೆ ಜನರು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು.
ಈ ವೇಳೆ ಸುಮಾರು 3 ಲಕ್ಷ ಜನರು ರೇಶನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದು, ಅದರಲ್ಲಿ ಸುಮಾರು 90 ಸಾವಿರ ಅರ್ಜಿಗಳು ರಿಜೆಕ್ಟ್ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಒಂದು ವೇಳೆ ನೀವು ಕೂಡ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದರೆ, ಸ್ಟೇಟಸ್ ಏನಾಗಿದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ..
Ration card update status Karnataka
ಎಲ್ಲಕ್ಕಿಂತ ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಈ ವೆಬ್ಸೈಟ್ ಗೆ ಭೇಟಿ ನೀಡಬೇಕು. ಇಲ್ಲಿ 3 ಲೈನ್ ಮೇಲೆ ಕ್ಲಿಕ್ ಮಾಡಿ, E Status ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಂತರ amendment request ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಈಗ ನಿಮ್ಮ ಎದುರು ಜಿಲ್ಲೆಗಳ ಹೆಸರು ಕಾಣುತ್ತದೆ, ಆ ಲಿಸ್ಟ್ ನಲ್ಲಿ ನಿಮ್ಮ ಜಿಲ್ಲೆಯ ಹೆಸರನ್ನು ಸೆಲೆಕ್ಟ್ ಮಾಡಿ.
ಈಗ ನೀವು ರೇಷನ್ ಕಾರ್ಡ್ ಬದಲಾವಣೆ ಕೋರಿಕೆ ಸ್ಥಿತಿ ಆಪ್ಶನ್ ಸೆಲೆಕ್ಟ್ ಮಾಡಿ
ಬಳಿಕ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್, acknowledgement number ಹಾಕಿ Go ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
ಈಗ ನಿಮ್ಮ ರೇಶನ್ ಕಾರ್ಡ್ ತಿದ್ದುಪಡಿ ಸ್ಟೇಟಸ್ ಗೊತ್ತಾಗುತ್ತದೆ, ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ಬಂದಿದ್ದರೆ ಇನ್ನು ತಿದ್ದುಪಡಿ ಆಗಬೇಕು ಎಂದು ಅರ್ಥ. ಕ್ಯಾನ್ಸಲ್ಡ್ ಬೈ ಸಿಸ್ಟಮ್ ಎಂದು ಬಂದರೆ ನಿಮ್ಮ ತಿದ್ದುಪಡಿ ಅರ್ಜಿ ರಿಜೆಕ್ಟ್ ಆಗಿದೆ ಎಂದು ಅರ್ಥ. ಒಂದು ವೇಳೆ ನೀವು ಇನ್ನು ರೇಶನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಿಲ್ಲ ಎಂದರೆ, ಇನ್ನು ಎರಡು ದಿನಗಳ ಸಮಯ ಇದೆ. ಆಕ್ಟೊಬರ್ 13ರವರೆಗು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಮಯ ಉಳಿದಿದ್ದು, ಕೊನೆಯ ದಿನಾಂಕದ ಒಳಗೆ ಅಪ್ಡೇಟ್ ಗೆ ಅರ್ಜಿ ಸಲ್ಲಿಸಬಹುದು.