Ration Card New Updates: ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರಿಸಲು ಮತ್ತು ಅಪ್ಡೇಟ್ ಮಾಡಲು ಸರ್ಕಾರದಿಂದ ಹೊಸ ಸೂಚನೆ. ಈ ದಾಖಲೆಗಳು ಬೇಕೇ ಬೇಕು. ನಮ್ಮ ರಾಜ್ಯದ ಜನರಿಗೆ ಈಗ ಬಹಳ ಮುಖ್ಯವಾಗಿ ಬೇಕಾಗಿರುವ ದಾಖಲೆ ರೇಷನ್ ಕಾರ್ಡ್ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಬೇಕು ಎಂದರೆ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇರಲೇಬೇಕು. ಹೀಗಿದ್ದಾಗ ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕಾಗಿ ರಾಜ್ಯದ ಜನರು ಕಾದು ಕುಳಿತಿದ್ದಾರೆ. ರಾಜ್ಯದಲ್ಲಿ ಎಲೆಕ್ಷನ್ ಇದ್ದ ಕಾರಣ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು.

ಈಗಾಗಲೇ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿರುವವರಿಗೆ ಕೂಡ ಹೊಸದಾಗಿ ರೇಷನ್ ಕಾರ್ಡ್ ವಿತರಣೆ ಆಗಿರಲಿಲ್ಲ. ಈ ಕಾರಣಕ್ಕಾಗಿ ಜನರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರು. ಈ ವಿಚಾರದ ಬಗ್ಗೆ ಈಗ ಆಹಾರ ಮತ್ತು ನಾಗರೀಕ ಇಲಾಖೆಯ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಮಾಹಿತಿ ನೀಡಿದ್ದಾರೆ. ಹೊಸದಾಗಿ ರೇಶನ್ ಕಾರ್ಡ್ ಗೆ ಅಪ್ಲೈ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿರುವ ಮುನಿಯಪ್ಪ ಅವರು, ಈಗಾಗಲೇ ರೇಷನ್ ಕಾರ್ಡ್ ಗಾಗಿ ಅಪ್ಲೈ ಮಾಡಿರುವವರಿಗೆ ಶೀಘ್ರದಲ್ಲೇ ಎಲ್ಲವನ್ನು ಪರಿಶೀಲಿಸಿ ಹೊಸ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.

ಇನ್ನು ಮತ್ತೆ ರೇಷನ್ ಕಾರ್ಡ್ ಗೆ ಅಪ್ಲೈ ಮಾಡುವ ಸೌಲಭ್ಯ ಸಿಗುತ್ತದೆಯೇ ಎನ್ನುವ ಮಾತಿಗೆ ಉತ್ತರ ಕೊಟ್ಟಿರುವ ಮುನಿಯಪ್ಪ ಅವರು ಹೊಸದಾಗಿ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಲು ಈಗ ಸಾಧ್ಯವಿಲ್ಲ, ಆದರೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಬಹುದು. ಹೊಸ ಸದಸ್ಯರ ಹೆಸರನ್ನು ಸೇರಿಸಬಹುದು, ಸದಸ್ಯರ ಹೆಸರನ್ನು ತೆಗೆದು ಹಾಕಬಹುದು, ನ್ಯಾಯ ಬೆಲೆ ಅಂಗಡಿಗಳನ್ನು ಬದಲಾಯಿಸಬಹುದು. ಇದೆಲ್ಲ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.

Ration Card New Updates

ಜನರು ಸೆಪ್ಟೆಂಬರ್ 1 ರಿಂದ 10ನೇ ತಾರೇಕಿನ ವರೆಗು ಈ ಕೆಲಸವನ್ನು ಮಾಡಿಕೊಳ್ಳಬಹುದು. ಇದಕ್ಕಾಗಿ ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ? ತಿದ್ದುಪಡಿ ಮಾಡಿಸುವುದು ಹೇಗೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ. ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲೆಗಳು..

ಈಗಿರುವ ರೇಷನ್ ಕಾರ್ಡ್
ರೇಷನ್ ಕಾರ್ಡ್ ನಲ್ಲಿ ಹೆಸರು ಇರುವವರ ಆಧಾರ್ ಕಾರ್ಡ್ ಮತ್ತು ಅವರ ಬಯೋಮೆಟ್ರಿಕ್.
5 ವರ್ಷಕ್ಕಿಂತ ಕೆಳಗಿನ ಮಕ್ಕಳ ಹೆಸರು ಸೇರಿಸಲು ಅವರ ಬರ್ತ್ ಸರ್ಟಿಫಿಕೇಟ್.
5 ವರ್ಷ ಮೇಲ್ಪಟ್ಟ ಮಕ್ಕಳ ಹೆಸರು ಸೇರಿಸಲು ಅವರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ. ರೇಷನ್ ಕಾರ್ಡ್ ಇಂದ ಮರಣ ಹೊಂದಿದವರ ಹೆಸರು ಸೇರಿಸಬೇಕು ಎಂದರೆ ಅವರ ಡೆತ್ ಸರ್ಟಿಫಿಕೇಟ್. ಮನೆಯ ಒಬ್ಬ ಸದಸ್ಯರ ಫೋನ್ ನಂಬರ್.

ಅರ್ಜಿ ಸಲ್ಲಿಸುವ ಪ್ರಕ್ರಿಯೆ..
ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿಯನ್ನು ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್, ಜನಸ್ನೇಹಿ ಕೇಂದ್ರ, ಗ್ರಾಮ್ ಪಂಚಾಯತ್, ಖಾಸಗಿ ಕೇಂದ್ರಗಳು ಇಲ್ಲೆಲ್ಲಾ ಅರ್ಜಿ ಸಲ್ಲಿಸಬಹುದು.
ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾದ ಎಲ್ಲಾ ಮಾಹಿತಿಗಳು, ದಾಖಲೆಗಳನ್ನು ತೆಗೆದುಕೊಂಡು ಹೋಗಿ.ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಏನಾಗಿದೆ ಎನ್ನುವುದು SMS ಮೂಲಕ ನಿಮಗೆ ಗೊತ್ತಾಗುತ್ತದೆ.

ನಿಮ್ಮ ಅಪ್ಲಿಕೇಶನ್ ಪರಿಶೀಲನೆಗೆ ಅಧಿಕಾರಿಗಳು ವೆರಿಫಿಕೇಶನ್ ಗಾಗಿ ನಿಮ್ಮ ಮನೆಗೆ ಬರುತ್ತಾರೆ. ಆಗ ಅರ್ಜಿ ಸೆಲೆಕ್ಟ್ ಆಗಿದ್ಯಾ ಅಥವಾ ರಿಜೆಕ್ಟ್ ಆಗಿದ್ಯಾ ಎನ್ನುವುದು ಗೊತ್ತಾಗುತ್ತದೆ.ಅಪ್ಡೇಟ್ ಆದ ರೇಷನ್ ಕಾರ್ಡ್ ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರುತ್ತದೆ. 40 ದಿನಗಳ ಒಳಗೆ ಈ ಕೆಲಸ ಆಗುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!