Ration card link for caste certificate: ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರದ ಆಳ್ವಿಕೆ ನಡೆಯುತ್ತಿದ್ದು, ಈ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿದೆ. ರೇಷನ್ ಕಾರ್ಡ್ ವಿಚಾರದಲ್ಲಿ ಆಗಾಗ ಕೆಲವು ಹೊಸ ನಿಯಮಗಳನ್ನು ಸರ್ಕಾರ ತರುತ್ತಲೇ ಇರುತ್ತದೆ. ಇದೀಗ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಮತ್ತೊಂದು ಹೊಸ ನಿಯಮ ಜಾರಿಯಾಗಿದೆ. ರೇಶನ್ ಕಾರ್ಡ್ ಗೆ ಮನೆಯ ಮುಖ್ಯಸ್ಥರ ಕ್ಯಾಸ್ಟ್ ಸರ್ಟಿಫಿಕೇಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಲಿಂಕ್ ಮಾಡಿಸಬೇಕು ಎನ್ನುವ ನಿಯಮ ಮೊದಲಿನಿಂದಲೂ ಇದೆ.

ಆದರೆ ಈ ಕೆಲಸವನ್ನು ಎಲ್ಲರೂ ಮಾಡಿಲ್ಲ. ಮಾಡದೆ ಇರುವುದಕ್ಕೆ ಹಲವು ಕಾರಣಗಳು ಇರಬಹುದು. ಆದರೆ ಈಗ ಲಿಂಕ್ ಮಾಡಿಸುವುದು ಮುಖ್ಯವಾಗಿದೆ. ಯಾಕೆಂದರೆ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಫಲ ಪಡೆಯಬೇಕು, 5 ಕೆಜಿ ಅಕ್ಕಿಯ ಹಣ DBT ಮೂಲಕ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರಬೇಕು ಎಂದರೆ ನಿಮ್ಮ ರೇಶನ್ ಕಾರ್ಡ್ ಜೊತೆಗೆ ಕ್ಯಾಸ್ಟ್ ಸರ್ಟಿಫಿಕೇಟ್ ಅಂದರೆ ಜಾತಿ ಪ್ರಮಾಣ ಪತ್ರ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

ಎಲ್ಲಾ ಜನರು ಇನ್ನು ಲಿಂಕ್ ಮಾಡಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಸರ್ಕಾರ, ಇದೀಗ ರೇಶನ್ ಕಾರ್ಡ್ ಗೆ ಕ್ಯಾಸ್ಟ್ ಸರ್ಟಿಫಿಕೇಟ್ ಲಿಂಕ್ ಮಾಡಲು ಒಂದು ಅವಕಾಶ ಕೊಟ್ಟಿದೆ. ಈ ಕೆಲಸವನ್ನು ನೀವು ರೇಷನ್ ವಿತರಿಸುವ ಪಡಿತರ ಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಮಾತ್ರ ಮಾಡಿಸಬಹುದು. ಬೇರೆಲ್ಲೂ ಮಾಡಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಗೆ ಕ್ಯಾಸ್ಟ್ ಸರ್ಟಿಫಿಕೇಟ್ ಲಿಂಕ್ ಆಗಿದ್ಯಾ ಎನ್ನುವುದನ್ನು ಮೊದಲು ಪರೀಕ್ಷಿಸಿಕೊಳ್ಳಬೇಕು. ನಂತರ ನ್ಯಾಯಬೆಲೆ ಅಂಗಡಿಯಲ್ಲಿ ಲಿಂಕ್ ಮಾಡಿಸಬಹುದು.

Ration card link for caste certificate:

ಚೆಕ್ ಮಾಡುವ ವಿಧನ ಹೀಗೆ..
ಮೊದಲಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಹೋಮ್ ಪೇಜ್ ನಲ್ಲಿ Eservices ಆಪ್ಶನ್ ಅನ್ನು ಆಯ್ಕೆ ಮಾಡಿ.
ಇಲ್ಲಿ ನಿಮಗೆ Shop Owner Module ಎನ್ನುವ ಆಯ್ಕೆ ಕಾಣಿಸುತ್ತದೆ, ಅದನ್ನು ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಜಿಲ್ಲೆಗಳ ಅನುಸಾರ ಬೇರೆ ಬೇರೆ ಲಿಂಕ್ ಇರುತ್ತದೆ, ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.

ಈಗ ನಿಮ್ಮ Login ID ಮತ್ತು password ಮೂಲಕ ಲಾಗಿನ್ ಆಗಿ.
ಈಗ ನೀವು ಮುಖ್ಯ ಮಾಹಿತಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಇಲ್ಲಿ ನಿಮಗೆ ಇನ್ನಷ್ಟು ಆಯ್ಕೆಗಳು ಸಿಗುತ್ತದೆ. ಇದರ ಕೊನೆಯಲ್ಲಿ DBT ಫಲ ಪಡೆಯುವವರು ಕ್ಯಾಸ್ಟ್ ಸರ್ಟಿಫಿಕೇಟ್ ಲಿಂಕ್ ಮಾಡುವ ಆಪ್ಶನ್ ಇರುತ್ತದೆ. ಈ ಆಯ್ಕೆ ಓಪನ್ ಆಗುತ್ತಿರುವುದು ಒಂದೆರಡು ದಿನಗಳಿಂದ ಮಾತ್ರ, ಈ ಆಪ್ಶನ್ ಓಪನ್ ಆಗುವುದು ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಆಗಿರುತ್ತದೆ.

ಈ ಆಪ್ಶನ್ ಓಪನ್ ಆದಾಗ, Linking of Caste Data against RC ಎಂದು ಹೆಸರಿರುವ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಇಲ್ಲಿ ಬರುವ Enter RC ನಂಬರ್ ಕಾಲಮ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ. ಈಗ Select Category ಆಪ್ಶನ್ ನಲ್ಲಿ SC/ST ಅಥವಾ ನೀವು ಯಾವ ಕ್ಯಾಟಗರಿಗೆ ಬರುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ. Go ಆಪ್ಶನ್ ಸೆಲೆಕ್ಟ್ ಮಾಡಿ.

ಈ ಕೆಲಸ ಮಾಡಿದ ನಂತರ ರೇಷನ್ ಕಾರ್ಡ್ ನಲ್ಲಿರುವ ನಿಮ್ಮ ಮನೆಯವರ ಹೆಸರು, ID number, RD ಸರ್ಟಿಫಿಕೇಶನ್ ನಂಬರ್ ಎಂದು ಮತ್ತೊಂದು ಆಯ್ಕೆ ಬರುತ್ತದೆ. ಈಗ ನೀವು ನಿಮ್ಮ ಕುಟುಂಬದ ಸದಸ್ಯರ ಹೆಸರಿನ ಕ್ಯಾಸ್ಟ್ ಸರ್ಟಿಫಿಕೇಟ್ ನಲ್ಲಿರುವ RD number ಎಂಟ್ರಿ ಮಾಡಬೇಕಾಗುತ್ತದೆ. ಎಲ್ಲರ RD ನಂಬರ್ ಎಂಟ್ರಿ ಮಾಡಿದ ಬಳಿಕ ಸೇವ್ ಆಪ್ಶನ್ ಕ್ಲಿಕ್ ಮಾಡಿ. ಈಗ ರೇಷನ್ ಕಾರ್ಡ್ ಗೆ ಕ್ಯಾಸ್ಟ್ ಸರ್ಟಿಫಿಕೇಟ್ ಲಿಂಕ್ ಆಗಿದೆ ಎಂದು ಅರ್ಥ. ನಂತರ ನಿಮಗೆ ಪ್ರಕ್ರಿಯೆ ಸಕ್ಸಸ್ ಆಗಿದೆ ಎಂದು ಪಾಪ್ ಅಪ್ ಮೆಸೇಜ್ ಬರುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!