Ration Card Correction Updates: ನಮ್ಮ ರಾಜ್ಯದಲ್ಲಿ ಈಗ ಸರ್ಕಾರ ಹೊರತಂದಿರುವ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಬೇಕು ಎಂದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು, ಹಾಗೆಯೇ ರೇಷನ್ ಕಾರ್ಡ್ ಮಹಿಳೆಯ ಹೆಸರು ಮುಖ್ಯಸ್ಥೆಯ ಸ್ಥಾನದಲ್ಲಿ ಇರಬೇಕು. ಆಗ ಮಾತ್ರ ಸರ್ಕಾರದ ಎಲ್ಲಾ ಯೋಜನೆಗಳ ಸೌಲಭ್ಯ ನಿಮಗೆ ಸಿಗುತ್ತದೆ. ಇದಕ್ಕಾಗಿ ರೇಶನ್ ಕಾರ್ಡ್ ಅಪ್ಡೇಟ್ ಆಗಿರುವುದು ಬಹಳ ಮುಖ್ಯವಾಗುತ್ತದೆ.
ಆದರೆ ಇನ್ನೂ ಕೂಡ ಬಹಳಷ್ಟು ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ. ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅದಾಗಲೇ ಸಮಯ ನೀಡಿತ್ತು, ಆದರೆ ಸರ್ವರ್ ಸಮಸ್ಯೆ ಉಂಟಾದ ಕಾರಣ ಹೆಚ್ಚಿನ ಜನರು ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸಲು ಸಾಧ್ಯ ಆಗಿರಲಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ಕೆಲವು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲಿ ಸಮಯ ನೀಡಲಾಗಿತ್ತು.
Ration Card Correction Updates
ಹಾಗೆಯೇ ಆಕ್ಟೊಬರ್ ತಿಂಗಳಿನಲ್ಲಿ ಕೂಡ 5ನೇ ತಾರೀಕಿನಿಂದ 13ನೇ ತಾರೀಕಿನ ವರೆಗು ಸಮಯ ನೀಡಲಾಗಿತ್ತು. ಆದರೆ ಆಗಲು ಸಹ ಸರ್ವರ್ ಸಮಸ್ಯೆ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆಯ ಕಾರಣ ಎಲ್ಲರೂ ತಿದ್ದುಪಡಿ ಮಾಡಿಸಲು ಸಾಧ್ಯ ಆಗಿರಲಿಲ್ಲ. ಹಾಗಾಗಿ ಸರ್ಕಾರ ಇದೀಗ ಜನರಿಗೆ ಮತ್ತೊಂದು ಅವಕಾಶ ನೀಡಿದೆ. ನವೆಂಬರ್ 1ರಿಂದ ಎಲ್ಲರಿಗೂ ಕೂಡ ಬಿಪಿಎಲ್, ಎಪಿಎಲ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಸಲು ಸಮಯ ಕೊಡಲಾಗಿದೆ.
ಸರ್ಕಾರ ನೀಡಿರುವ ಈ ಅವಕಾಶವನ್ನು ಉಪಯೋಗಿಸಿಕೊಂಡು, ಎಲ್ಲರೂ ಕೂಡ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ರೇಷನ್ ಕಾರ್ಡ್ ಅಪ್ಡೇಟ್ ಆಗಿರದ ಕಾರಣ ಹಲವರಿಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ, ಅನ್ನಭಾಗ್ಯ ಯೋಜನೆಯ ಹಣ ಕೂಡ ಬಂದಿಲ್ಲ. ಇದರಿಂದ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಕಾರಣದಿಂದ ಸರ್ಕಾರ ಇದೀಗ ಜನರಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಈ ತಿಂಗಳು ಹೆಚ್ಚಿನ ಸಮಯಾವಕಾಶ ನೀಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಹಾಗಾಗಿ ಜನರು ಸರ್ಕಾರ ಕೊಡುವಷ್ಟು ದಿನಗಳಲ್ಲಿ ಬೆಳಗ್ಗೆ 10 ಗಂಟೆ ಇಂದ ಸಂಜೆ 7ಗಂಟೆಯವರೆಗೂ ತಮಗೆ ಹತ್ತಿರ ಇರುವ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಈ ಮೂಲಕ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದನ್ನೂ ಓದಿ ಡಿಗ್ರಿ ಓದುವವರಿಗೆ 2 ಲಕ್ಷದವರೆಗೂ ಸ್ಕಾಲರ್ಶಿಪ್ ಸಿಗಲಿದೆ, ಆಸಕ್ತರು ಇವತ್ತೇ ಅರ್ಜಿಹಾಕಿ