ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಲ್ಲಿಪ್ರತಿಯೊಂದು ಯೋಜನೆ ಕೂಡ ತನ್ನದೆಯಾದ ವಿಶೇಷತೆ ಹಾಗೂ ಉದ್ದೇಶವನ್ನು ಹೊಂದಿರುತ್ತದೆ. ಇದೆ ನಿಟ್ಟಿನಲ್ಲಿ ಇದೀಗ ಹೈಗಾರಿಕೆ ಮಾಡುವವರಿಗೆ ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲು ಮುಂದಾಗಿದೆ, ಹಾಗಿದ್ರೆ ಬನ್ನಿ ಹೈನುಗಾರಿಕೆಯಲ್ಲಿ ಯಾವೆಲ್ಲ ಸಾಲ ಸೌಲಭ್ಯವನ್ನು ಪಡೆಯಬಹುದು ಸರ್ಕಾರದ ಆದೇಶ ಹೇಗಿದೆ ಅನ್ನೋದನ್ನ ಮುಂದೆ ತಿಳಿಯೋಣ. ಅದಕ್ಕೂ ಮೊದಲು ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿಲ್ಲ ಅಂದ್ರೆ ಈಗಲೇ ಜಾಯಿನ್ ಆಗಿ ಪ್ರತಿದಿನ ಉಪಯುಕ್ತ ಮಾಹಿತಿಯನ್ನು ಪಡೆಯಿರಿ.
ರಾಷ್ಟ್ರೀಯ ಜಾನುವಾರು ಮಿಷನ್ ಪ್ರಸ್ತುತ ಗ್ರಾಮೀಣ ಕೋಳಿ, ಕುರಿ, ಮೇಕೆ, ಹಂದಿ ಮತ್ತು ಮೇವು ಉದ್ಯಮಗಳನ್ನು ಸ್ಥಾಪಿಸಲು ಆರ್ಥಿಕ ನೆರವು ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯಡಿ, ಹೆಚ್ಚಿನ ಸಂಖ್ಯೆಯ ರೈತರು ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು.
ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (ಕೆ, ಸಿ, ಸಿ) ಅಡಿಯಲ್ಲಿ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುವ ವಿಶೇಷ ಅಭಿಯಾನವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು/ಸಹಕಾರಿ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಲು ಮತ್ತು ಹಣಕಾಸು ಸಂಸ್ಥೆಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸಲು ಪ್ರಾರಂಭಿಸಲಾಗಿದೆ. ಒಳಗೊಂಡಿರುವವರಿಗೆ ನಿರ್ವಹಣೆ ವೆಚ್ಚವನ್ನು ಒಳಗೊಂಡಿದೆ. ಆಸಕ್ತ ರೈತರು ಅರ್ಜಿಯನ್ನು ಪಡೆಯಲು ಮತ್ತು ಸಲ್ಲಿಸಲು ತಮ್ಮ ಸ್ಥಳೀಯ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬೇಕು.
ಬೇಕಾಗುವ ದಾಖಲಾತಿಗಳು :-
ಆಧಾರ, ಜಮೀನಿನ ಪಹಣಿ ಪತ್ರ, ಬ್ಯಾಂಕ್‌ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು, ಶಾಖೆ ಮತ್ತು IFSC. ಕೊಡ್ ನೊಂದಿಗೆ ಬ್ಯಾಂಕ್ ಖಾತೆ ವಿವರಗಳು ಮತ್ತು ಭಾವ ಚಿತ್ರ.
ಹೈನುಗಾರಿಕೆ ಮಾಡಲು ಸಿಗುವ ಸಾಲ ಸೌಲಭ್ಯ ಎಷ್ಟು?
ಮಿಶ್ರತಳಿ ದನಗಳ ನಿರ್ವಹಣೆ (1+1)ಪ್ರತಿ ಹಸುವಿಗೆ ಗರಿಷ್ಠ ರೂ.14,000/-ರಂತೆ ಒಟ್ಟೂ ಎರಡು ಹಸುಗಳಿಗೆ ರೂ.28,000/-ಸಾಲ ಸೌಲಭ್ಯ ಸುಧಾರಿತ ಎಮ್ಮೆಗಳ ನಿರ್ವಹಣೆ (1+1)
ಪ್ರತಿ ಎಮ್ಮೆಗೆ ಗರಿಷ್ಠ ರೂ.16,000/-ರಂತೆ ಒಟ್ಟೂ ಎರಡು ಎಮ್ಮೆಗಳಿಗೆ ರೂ.32.000/-ಸಾಲ ಸೌಲಭ್ಯ
ಕುರಿ ಸಾಕಾಣಿಕೆ
ಕುರಿಗಳ ನಿರ್ವಹಣೆ (10+01)ಕಟ್ಟಿಮೇಯಿಸುವ ಕುರಿಗಳಿಗೆ ರೂ.24,000/-ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ.12,000/-ರಂತೆ ಸಾಲ ಸೌಲಭ್ಯ
ಕುರಿಗಳ ನಿರ್ವಹಣೆ (20+01) ಕಟ್ಟಿಮೇಯಿಸುವ ಕುರಿಗಳಿಗೆ ರೂ.48,000/-ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ.24,000/-ರಂತೆ ಸಾಲ ಸೌಲಭ್ಯ
ಟಗರುಗಳ ನಿರ್ವಹಣೆ (10)
ರೂ. 13,000 ರಂತೆ ಸಾಲ ಸೌಲಭ್ಯ
ಟಗರುಗಳ ನಿರ್ವಹಣೆ (20)
ರೂ. 26,000 ರಂತೆ ಸಾಲ ಸೌಲಭ್ಯ
ಮೇಕೆ ಸಾಕಾಣಿಕೆ
ಮೇಕೆಗಳ ನಿರ್ವಹಣೆ (10+01)
ಕಟ್ಟಿಮೇಯಿಸುವ ಮೇಕೆಗಳಿಗೆ ರೂ, 24,000/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ,13,000/- ರಂತೆ ಸಾಲ ಸೌಲಭ್ಯ
ಮೇಕೆಗಳ ನಿರ್ವಹಣೆ (20+01)
ಕಟ್ಟಿಮೇಯಿಸುವ ಮೇಕೆಗಳಿಗೆ ರೂ, 48,000/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ,26,000/- ರಂತೆ ಸಾಲ ಸೌಲಭ್ಯ
ಹಂದಿ ಸಾಕಾಣಿಕೆ (10) ರೂ,60,000 ರಂತೆ ಸಾಲ ಸೌಲಭ್ಯ
ಕೋಳಿ ಸಾಕಾಣಿಕೆ
2000 ಕೋಳಿಗಳಿಗೆ ಗರಿಷ್ಠ ರೂ, 1,60,000/-ರ ವರೆಗೆ ಸಾಲ ಸೌಲಭ್ಯ
ಮೊಟ್ಟೆ ಕೋಳಿ ಸಾಕಾಣಿಕೆ 1000 ಕೋಳಿಗಳಿಗೆ ಗರಿಷ್ಠ ರೂ, 1,80,000/-ರ ವರೆಗೆ ಸಾಲ ಸೌಲಭ್ಯ
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಜಿಲ್ಲಾ ಉಪನಿರ್ದೇಶಕರು/ಉಪ ನಿರ್ದೇಶಕರು ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯನ್ನು ಸಂಪರ್ಕಿಸಬಹುದು.