ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರುವ ವಿಷಯದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಕರೋನದಂತಹ ಬಿಕ್ಕಟ್ಟಿನ ಪರಿಸ್ಥಿಯಲ್ಲಿಯೂ ಸಹ ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಸಾಬೀತು ಬಡಿಸಿದ ಭಾರತ ಭವ್ಯವಾದ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲು ತಯಾರಾಗಿದೆ. ಆದರೆ ಈ ರಾಮ ಮಂದಿರದ ನಿರ್ಮಾಣಕ್ಕಾಗಿ ಗುಲಾಬಿ ಕಲ್ಲಿನ ಅಗತ್ಯತೆ ಇದ್ದು ಇದನ್ನು ರಾಜಸ್ಥಾನದಿಂದ ಆಮದು ಮಾಡಿಕೊಳ್ಳಬೇಕಿದೆ. ಮಂದಿರದ ನಿರ್ಮಾಣಕ್ಕೆ ಗುಲಾಬಿ ಕಲ್ಲನ್ನು ನೀಡುವ ಕುರಿತಾಗಿ ರಾಜಸ್ಥಾನ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡಿದೆ ಎನ್ನುವುದರ ಕುರಿತು ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದೇಶಾದ್ಯಂತ ಬಹು ಬೇಡಿಕೆ ಹೊಂದಿರುವ ಗುಲಾಬಿ ಕಲ್ಲಿನ ಗಣಿಗಾರಿಕೆ ಇರುವುದು ರಾಜಸ್ಥಾನದಲ್ಲಿ. ಗುಲಾಬಿ ಕಲ್ಲಿನ ಗಣಿಗಾರಿಕೆಗೆ ಅನುಮತಿ ನೀಡಲು ರಾಜಸ್ಥಾನ ರಾಜ್ಯ ಸರ್ಕಾರ  ಚಿಂತನೆ ನಡೆಸುತ್ತಿದ್ದು ಇದಕ್ಕಾಗಿ ಭರತ್‌ಪುರ ಪ್ರದೇಶದ ಬನ್ಸಿ ಪಹಾರ್‌ಪುರ ಗಣಿಗೆ ಅನುಮತಿ ನೀಡಲು ಸರ್ಕಾರ ಯೋಚಿಸಿದೆ. ರಾಮಮಂದಿರ ನಿರ್ಮಾಣಕ್ಕಾಗಿ ರಾಜಸ್ಥಾನದ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಳ್ಳಲು ಹೆಜ್ಜೆ ಇಟ್ಟಿದೆ. ಭರತ್‌ಪುರ ಪ್ರದೇಶದ ಬನ್ಸಿ ಪಹಾರ್‌ಪುರ ಗಣಿಯಿಂದ ಗುಲಾಬಿ ಕಲ್ಲು ತೆಗೆಯಲು ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಶೀಘ್ರದಲ್ಲೇ ತೆಗೆದುಹಾಕುವ ನಿರೀಕ್ಷೆಯಿದೆ. ವಿಶೇಷವೆಂದರೆ, ಈ ಪ್ರದೇಶದ ಗುಲಾಬಿ ಕಲ್ಲನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತಿದೆ.

ವರ್ಷಗಳಿಂದ ನಡೆಯುತ್ತಿರುವ ಗುಲಾಬಿ ಕಲ್ಲಿನ ಹೊರತೆಗೆಯುವಿಕೆಯು ಇಲ್ಲಿ ಕಾನೂನು ಬಾಹಿರವಾಗಿದೆ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಕಡಿವಾಣ ಹಾಕಿತ್ತು. ಭರತ್ ಪುರ ಆಡಳಿತ ಮತ್ತು ಅರಣ್ಯ ಅಧಿಕಾರಿಗಳು ಗುಲಾಬಿ ಕಲ್ಲು ತುಂಬಿದ 25 ಲಾರಿಗಳನ್ನು ಸೆಪ್ಟೆಂಬರ್ 7 ರಂದು ವಶಪಡಿಸಿಕೊಂಡಿದ್ದರು. ಆದರೆ ಇದೀಗ ಗುಲಾಬಿ ಕಲ್ಲಿನ ಗಣಿಗಾರಿಕೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.  ಈ ಪ್ರದೇಶವನ್ನು 2016 ರಲ್ಲಿ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿಸಲಾಗಿದೆ ಎಂದು ಭರತ್‌ಪುರ  ಜಿಲ್ಲಾಧಿಕಾರಿ ನಾಥ್ಮಲ್ ಡಿಡೆಲ್ ಹೇಳಿದ್ದಾರೆ. ಕಂದಾಯ, ಗಣಿಗಳು ಮತ್ತು ಅರಣ್ಯ ಇಲಾಖೆಗಳು ನಡೆಸಿದ ಸಮೀಕ್ಷೆಯಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಅರಣ್ಯ ಅಥವಾ ಪ್ರಾಣಿಗಳಿಲ್ಲ  ಎಂಬ ಅಂಶದ ಆಧಾರಲ್ಲಿ ಇದೀಗ ಅನುಮತಿ ನೀಡಲು ಮುಂದಾಗಿದೆ. ಕಾನೂನುಬದ್ಧ ಗಣಿಗಾರಿಕೆಗೆ ಅನುಮತಿ ನೀಡಿದರೆ ಗುಲಾಬಿ ಕಲ್ಲು ತೆಗೆಯಲು ಗುತ್ತಿಗೆ ನೀಡಲಾಗುವುದು. ಈ ಕಲ್ಲಿಗೆ ದೇಶಾದ್ಯಂತ ಅತಿ ಹೆಚ್ಚಿನ  ಬೇಡಿಕೆ ಇದೆ. ಈ ಗುಲಾಬಿ ಕಲ್ಲನ್ನು ಬಳಕೆ ಮಾಡಿಕೊಂಡು ಭವ್ಯವಾದ ಶ್ರೀ ರಾಮ ಮಂದಿರವನ್ನು ನಿರ್ಮಾಣ ಕೂಡಾ ಆಗಬೇಕಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!