ತುಮಕೂರು ಜಿಲ್ಲೆಯ ಕೊರಟಗೆರೆಯ ಕುರುಬರಹಳ್ಳಿ ಎಂಬ ಗ್ರಾಮದಲ್ಲಿ ನೀರಿನ ಮಾಂತ್ರಿಕ, ನೀರಿನ ಗಾಂಧಿ ಎಂದೆ ಹೆಸರಾದ ಅಯ್ಯಪ್ಪ ಮಸ್ಗಿ ಅವರ ಮಾತುಗಳನ್ನು ಹಾಗೂ ಅವರ ಸಾಧನೆಯನ್ನು ಈ ಲೇಖನದಲ್ಲಿ ಕೇಳೋಣ

ಅಯ್ಯಪ್ಪ ಮಸ್ಗಿ ಅವರು ದೇಶದಲ್ಲಿಯೆ ಹೆಸರು ಮಾಡಿದ್ದಾರೆ ಕೆರೆ ನಿರ್ಮಾಣ, ಜಲಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಭೂಮಿಯ ಮೇಲಿನ ಅಂತರ್ಜಲದ ಬಗ್ಗೆ ಸಂಶೋಧನೆ ನಡೆಯುತ್ತದೆ. ಮಸ್ಗಿ ಅವರು ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 30 ರಿಂದ 35 ವರ್ಷಗಳ ಅನುಭವವಿದೆ. ಒಂದು ಹೆಕ್ಟೇರ್ ಜಾಗದಲ್ಲಿ ಒಂದು ಗುಂಟೆ ಜಾಗದಲ್ಲಿ ಕೃಷಿ ಹೊಂಡ ನಿರ್ಮಿಸುವ ಮೂಲಕ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಮಳೆಗಾಲದಲ್ಲಿ ಮಳೆ ಬರುವ ಕಾರಣ ನೀರಿನ ಸಮಸ್ಯೆ ಆಗುವುದಿಲ್ಲ ಚಳಿಗಾಲದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಬಂದಾಗ ಯೋಚಿಸುತ್ತೇವೆ. ಒಂದು ಗುಂಟೆ ಜಾಗದಲ್ಲಿ ಕೆರೆ ನಿರ್ಮಿಸಿದರೆ ಭೂಮಿಯ ನೀರಿನ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತದೆ.

ಮಸ್ಗಿ ಅವರು 26 ಎಕರೆ ಜಮೀನಿನಲ್ಲಿ 4 ಎಕರೆಯಲ್ಲಿ ಕಾಡು ಆಧಾರಿತ ಕೃಷಿ ಮಾಡಿದ್ದಾರೆ 189 ಗುಂಡಿಗಳು, 11 ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. 22 ಬೈ 12 ಅಡಿ ಆಳದ 4 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತದೆ 4 ತಿಂಗಳಿನಿಂದ ನೀರು ತುಂಬಿದೆ. ಭೂಮಿ ಇದ್ದ ಮೇಲೆ ನೀರು ಇರಲೆಬೇಕು ಒಂದು ಗುಂಟೆ ಜಾಗದಲ್ಲಿ ಕೆರೆ ನಿರ್ಮಾಣ ಮಾಡಬೇಕು ಇದರಿಂದ ಭೂಮಿಗೆ ನೀರು ಸಿಗುತ್ತದೆ. ಕೆರೆ ನಿರ್ಮಾಣ ಮಾಡುವುದರಿಂದ ಮಳೆ ನೀರನ್ನು ಸಂಗ್ರಹಿಸಿ ಭೂಮಿಗೆ ನೀರು ಹರಿಸಬಹುದು. ಮಸ್ಗಿ ಅವರು ರೈತರು ಭೂಮಿಯಲ್ಲಿ ಮೊದಲು ಬೆಳೆ ಬೆಳೆಯುವ ಮೊದಲು ನೀರಿನ ಬಗ್ಗೆ ಗಮನ ಕೊಡಬೇಕು. ಮಳೆ ನೀರನ್ನು ಇಂಗಿಸಿ ಕೆರೆಯ ಮೂಲಕ ಭೂಮಿಗೆ ನೀರನ್ನು ಒದಗಿಸಿದರೆ ಬೆಳೆ ಬೆಳೆಯಬಹುದು. ಮಸ್ಗಿ ಅವರು ಜಮೀನು ಖರೀದಿಸಲು ಬಂದಾಗ ಇಲ್ಲಿ ನೀರಿಲ್ಲ ಇಲ್ಲಿಗೆ ಏಕೆ ಬರ್ತೀರಾ ಎಂದಿದ್ದರು ಹುಚ್ಚ ಇದಿಯಾ ಎಂದರು ಆದರೆ 5 ವರ್ಷದ ನಂತರ ಊಟಿ ವಾತಾವರಣ ಇದೆ ವೈಕುಂಠ ಎಂದು ಕರೆಯುತ್ತಾರೆ ಎಂದು ಹೇಳಿದರು. ಅವರು ನೀರಿನ ವ್ಯವಸ್ಥೆ ಮಾಡಿರುವುದರಿಂದ ವಾತಾವರಣದಲ್ಲಿ ತಾಪಮಾನ ಕಡಿಮೆ ಇದೆ.

ಮಸ್ಗಿ ಅವರ ತೋಟದಲ್ಲಿ ನಿಂಬೆ ಗಿಡಗಳು, 450 ತೆಂಗಿನ ಗಿಡಗಳು ಹೀಗೆ ನಾನಾ ಬೆಳೆಗಳು ಇವರ ತೋಟದಲ್ಲಿ ಬೆಳೆಯುತ್ತದೆ. ಅಯ್ಯಪ್ಪ ಮಸ್ಗಿ ಅವರು ಜಲಸಮೃದ್ಧಿ ರಾಷ್ಟ್ರವನ್ನಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಕಾರ್ಯಕ್ರಮಕ್ಕೆ ಭಾಗವಹಿಸಬಹುದು ಹಾಗೂ ತಮ್ಮ ನೀರಿನ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬಹುದು. ಹಲವು ಭಾಗದಲ್ಲಿ ನೀರಿನ ಸಮಸ್ಯೆ ಇದ್ದು ಉತ್ತರ ಕರ್ನಾಟಕದ ಭಾಗಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ತೋಟಗಾರಿಕೆ ಬೆಳೆ ಬೆಳೆಯುವುದನ್ನೆ ಮರೆತಿದ್ದಾರೆ ಮಸ್ಗಿ ಅವರ ಮಾತುಗಳು ರೈತರಿಗೆ ಆತ್ಮವಿಶ್ವಾಸ ಬರಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!