Rain News: ಬಿಸಿಲಿನ ತಾಪಮಾನಕ್ಕೆ ಜನರು ಬೆಂದು ಬೆಂಡಾಗಿದ್ದಾರೆ. ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ. ಬಿಸಿಲಿನಿಂದ ತತ್ತರಿಸಿದ ಜನತೆಗೆ ಒಂದು ಖುಷಿಯ ವಿಚಾರ. ಜನರು ಬೇಸಿಗೆಯ ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿದ್ದಾರೆ. ಬಿಸಿಗೆಯಿಂದ ಮುಕ್ತಿ ಹೊಂದಲು ಫ್ಯಾನ್, ಎಸಿ, ಕೂಲರ್’ಗಳ ಮೊರೆ ಹೋಗುತ್ತಿದ್ದಾರೆ. ಇನ್ನು, ಈ ಯಾವುದೇ ವಿಧಾನದಲ್ಲಿ ಕೂಡ ಶೆಕೆಯಿಂದ ಅಷ್ಟೊಂದು ಪರಿಹಾರ ಸಿಗುತ್ತಿಲ್ಲ.
ಈ ಕಾರಣದಿಂದ ಮಳೆರಾಯನ ನಿರೀಕ್ಷೆಯಲ್ಲಿ ಜನರು ಇದ್ದಾರೆ. ಮಳೆ ಯಾವಾಗ ಬರುತ್ತದೆ ಎಂದು ಮೋಡ ನೋಡಿಕೊಂಡು ಕಾಯುವಂತೆ ಆಗಿದೆ. ಮಳೆಯ ಕೊರತೆಯ ಕಾರಣದಿಂದಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ, ಬರದ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗಿದೆ.
ಕುಡಿಯಲು ನೀರು ಸಿಗುತ್ತಿಲ್ಲ. ಅದಕ್ಕೆ, ಸಹ ಜನರು ಪರದಾಡುವಂತಾಗಿದೆ. ಇನ್ನು, ಮಳೆಯ ನಿರೀಕ್ಷೆಯಲ್ಲಿ ಇರುವ ಜನರಿಗೆ ಹವಾಮಾನ ಇಲಾಖೆ ಇದೀಗ ಖುಷಿ ವಿಚಾರ ಹೇಳಿದ್ದಾರೆ.ಯಾವ ದಿವಸ ಯಾವ ಯಾವ ಜಿಲ್ಲೆಯಲ್ಲಿ ಈ ಬಾರಿ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆಯು ವರದಿ ಕೊಟ್ಟಿದೆ.
ಭೂಮಿಯ ತಾಪಮಾನ ಏರಿಕೆ ಆಗಿದೆ ಮತ್ತು ಭೂಮಿ ವಾತಾವರಣದಲ್ಲಿ ಮಾನವನ ಹಿಂಸೆಯೇ ಮಳೆ ಬಾರದಿರುವುದಕ್ಕೆ ಒಂದು ಮುಖ್ಯ ಕಾರಣ ಎಂದು ವಿಜ್ಞಾನಿಗಳು ಹೇಳುವರು. ಮಳೆಯ ಅಭಾವ ನೇರವಾಗಿ ರೈತರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ರೈತರು ಬೆಳೆ ಬೆಳೆದ ಸರಿಯಾದ ಅವಧಿಗೆ ಮಳೆ ಬಾರದೆ ಹೋದರೆ, ದೊಡ್ಡ ಪ್ರಮಾಣದ ನಷ್ಟವನ್ನು ಎದುರಿಸಬೇಕಾಗುತ್ತದೆ. ಕೃಷಿ ಮಾಡಲು ಮಳೆ ಅತ್ಯಗತ್ಯವಾಗಿ ಇರುತ್ತದೆ. ಮಳೆ ಇಲ್ಲದೆ ತುಂಬಾ ಕಡೆ ನೀರಿನ ಸಮಸ್ಯೆ ಜಾಸ್ತಿ ಆಗಿದೆ.
ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇನ್ನು ಮೇ ತಿಂಗಳ ಮೊದಲ ವಾರದಲ್ಲಿ ಮಳೆ ಬರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಭಾಗಗಳಲ್ಲಿ ಈ ವಾರ ಭರ್ಜರಿ ಮಳೆ ಎಂದು ಹವಾಮಾನ ತಜ್ಞರ ಅಭಿಪ್ರಾಯ ಪಟ್ಟಿದ್ದಾರೆ. ಅವರ ಪ್ರಕಾರ ಮೇ ಮೊದಲ ವಾರದಲ್ಲಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು, ಮೈಸೂರು, ಹಾಸನ, ರಾಮನಗರ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಲ್ಲೆಗಳಲ್ಲಿ ಸಹ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಅದರಿಂದ, ಹೆಚ್ಚು ಮಳೆಯಾಗಲಿ ಎಂದು ಜನರು ದೇವರ ಮೊರೆ ಹೋಗುತ್ತಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿನಲ್ಲಿ ಈ ವಾರ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಕನ್ನಡಿಗರು ಆನಂದ ವ್ಯಕ್ತಪಡಿಸಿದ್ದಾರೆ. ಅಂತೂ ಇಂತೂ ಮಳೆರಾಯನ ಆಗಮನ ಭೂಮಿಯನ್ನು ಮಾತ್ರ ತಂಪು ಮಾಡುವುದಿಲ್ಲ. ಜನರ ಮತ್ತು ರೈತರ ಎಷ್ಟೋ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.