ರಾಹು ಭೀತಿಯನ್ನು ಪ್ರಚೋದಿಸುವ ದೇವತೆ ಎಂಬ ಪ್ರತೀತಿಯಿದೆ ಮೋಸ ಮಾಡುವ ಭೂಮಿ ಕಬಳಿಸುವ ಹಾಗೂ ಮಾದಕ ದ್ರವ್ಯ ವ್ಯಾಪಾರ ಅನೈತಿಕ ಚಟುವಟಿಕೆ ನಡೆಸುವವರಿಗೆ ಪ್ರಚೋದಿಸುತ್ತದೆ ಇನ್ನೂ ಕೇತುವು ಕಾರಕ ಬುದ್ಧಿ ಮತ್ತೆ ಬುದ್ಧಿವಂತಿಕೆ ಅನಾಸಕ್ತಿ ಕಲ್ಪನಾಶಕ್ತಿ, ಒಳನೋಟ, ಅವ್ಯವಸ್ಥೆ ಮತ್ತು ಆಧ್ಯಾತ್ಮಿಕ ಸಾಮರ್ಥ್ಯಗಳ ಸೂಚಕನಾಗಿದ್ದಾನೆ.
ಇನ್ನು ಜ್ಯೋತಿಷ್ಯದಲ್ಲಿ ಶನಿ ಪ್ರಭಾವ ಹೇಗೆ ಗಣನೆಗೆ ಬರುತ್ತದೆಯೋ ಹಾಗೆಯೇ ರಾಹು ಕೇತುಗಳ ಪ್ರಭಾವ ಕೂಡ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ ಜ್ಯೋತಷ್ಯಶಾಸ್ತ್ರ ದಲ್ಲಿ 12 ರಾಶಿಗಳ ಮೇಲೂ ಪ್ರಭಾವ ಇರುತ್ತದೆ ಗುರು ವರ್ಷದಿಂದ ವರ್ಷಕ್ಕೆ ಬದಲಾವಣೆ ಹಾಗೂ ಶನಿಯು 2.5 ವರ್ಷ ಬದಲಾವಣೆ ಹಾಗೂ ರಾಹು ಕೇತು 1.5 ವರ್ಷಗಳಿಗೊಮ್ಮೆ ಬದಲಾವಣೆ ಆಗುತ್ತದೆ ಶನಿಯು ಮಂದಗತಿ ಸಂಚಾರ ಇನ್ನೂ ರಾಹು ಕೇತು ಅಪ್ರದಕ್ಷಿಣ ಕಾರಕವಾಗಿ ಸಂಚಾರ ಮಾಡುತ್ತಾರೆ ರಾಹು ರಸಭ ರಾಶಿ ಮೇಷ ರಾಶಿಗೆ ಸಂಚಾರ ಹಾಗೂ ಕೇತುವು ರುಚಿಕ ರಾಶಿ ತುಲಾ ರಾಶಿಗೆ ಸಂಚಾರವಾಗಿ ರಾಶಿಯಲ್ಲಿ ಆಗುವ ಲಾಭ ನಷ್ಟದ ಬಗ್ಗೆ ಈ ಲೇಖನದಲ್ಲಿ ನೋಡೋಣ
ಶನಿಯು ಕರ್ಮಧಾತ ಆಗಿದ್ದು ಜನರು ಶನಿಯ ಮಹಾತ್ಮೆ ಗೆ ಹೆದರುತ್ತಾರೆ ಆದರೆ ಶನಿಯು ದುರಹಂಕಾರಿಯನ್ನು ಒಬ್ಬ ಸಜ್ಜನ ಮನುಷ್ಯನಾಗಿ ನಿರ್ಮಿಸುವ ಕಾರ್ಯವನ್ನು ಮಾಡುತ್ತಾನೆ ಆದರೆ ರಾಹು ಕೇತುವು ವ್ಯಕ್ತಿಯ ಕರ್ಮದಿಂದ ಫಲ ನೀಡುತ್ತಾರೆ ಈ ವರ್ಷ ಜನವರಿ 13 ರಾಹು ಕೇತು ಸ್ಥಾನ ಪಲ್ಲಟ ಜನವರಿ 14 ಸೂರ್ಯ ಮೀನ ರಾಶಿಯಿಂದ ಮೇಷ ರಾಶಿಗೆ ಸಂಚಾರ ವಾಗಿದ್ದು ಸೂರ್ಯ ಮತ್ತು ರಾಹು ಒಂದೇ ಮನೆ ಇದ್ದು ರಾಜಕಾರಣಿ ಹಾಗೂ ರಾಜಕೀಯ ಪ್ರಭಾವಿಗಳಿಗೆ ಕಂಟಕ ಆದಷ್ಟು ಹೊಂದಾಣಿಕೆ ಅಗತ್ಯ
ಇನ್ನು ಮೊದಲ ರಾಶಿ ಮೇಷ ರಾಶಿಗೆ ರಾಹುವಿನ ಆಗಮನದಿಂದ ಕೆಲಸ ಕಾರ್ಯಗಳಲ್ಲಿ ವಿಳಂಬ ಹಾಗೂ ಅಂದುಕೊಂಡ ಕಾರ್ಯದಲ್ಲಿ ಅರ್ಧ ಆಗುವುದು ಇದರಿಂದ ಮಾನಸಿಕ ಯೋಚನೆ ಸುಸ್ತು ಕಂಡು ಬರುವುದು ಆದಷ್ಟು ಹೂಡಿಕೆ ಮಾಡುವುದು ಬೇಡ ಇನ್ನು ಈ ರಾಶಿಯವರು ತಮ್ಮ ತಂದೆಯ ಆರೋಗ್ಯ ವಿಚಾರದಲ್ಲಿ ಗಮನ ಅಗತ್ಯ ಪರಿಹಾರವಾಗಿ ಆದಷ್ಟು ಸೋಮವಾರ ಶಿವನ ದೇವಸ್ಥಾನಕ್ಕೆ ರುದ್ರಾಭಿಷೇಕ ಕೊಟ್ಟಲ್ಲಿ ಉತ್ತಮ ಫಲ ಇನ್ನು ವೃಷಭ ರಾಶಿ ಆರನೇ ಮನೆ ಕೇತುವು 12ನೆ ಮನೆ ರಾಹುವು ಪ್ರವೇಶದಿಂದ ಮೈನಸ ಪ್ಲಸ್ ಮೈನಸ್ ಇಕ್ವಾಲ್ ಪ್ಲಸ್ ಅನ್ನೋ ಹಾಗೆ ಶತ್ರುವಿನ ಸ್ಥಾನ ಶತ್ರುವೆ ತುಂಬಿದಾಗ ಒಳಿತೇ ವಿನಃ ನಷ್ಟವಿಲ್ಲ ಹಾಗಾಗಿ ಏಳಿಗೆ ಉತ್ತಮ ಹಾಗೂ ಗುರುವಿನ ಬಲ ಮತ್ತು ಶನಿಯ 10 ಮನೆ ಸಂಚಾರ ವಾಗಿದ್ದು ಹಿತ ಶತ್ರುವಿನ ನಾಶ ಆದಷ್ಟು ಈ ರಾಶಿಯವರು ಸಾಯಿ ಬಾಬಾ ಹಾಗೂ ಗುರು ರಾಘವೇಂದ್ರ ಆರಾಧನೆ ಮತ್ತು ದೇವಸ್ತಾನಕ್ಕೆ ಕಡಲೆಬೇಳೆ ಅಡುಗೆ ಎಣ್ಣೆ ಹಾಗೂ ಅರಶಿನ ದಾನ ಮಾಡಿ ಆದಷ್ಟು ಅನ್ನ ಸಂತರ್ಪಣೆ ಸಹಾಯ ಮಾಡಿ ಇನ್ನು ಮಿಥುನ ರಾಶಿಯವರಿಗೆ ಬುದನ ಸ್ಥಾನ ಚೆನ್ನಾಗಿ ಇದ್ದು ವಿದೇಶ ಪ್ರಯಾಣ ಸಾಧ್ಯತೆ ಇನ್ನು ತಂದೆಯಿಂದ ಒಳ್ಳೆಯ ಉಡುಗೊರೆ ಸಿಗುವುದು
ಇವರು ಶಿವನ ಆಲಯಕ್ಕೆ ಜೇನು ತುಪ್ಪ ದಾನ ಮಾಡಿ ಸ್ವಲ್ಪ ಜೇನನ್ನು ಸೇವಿಸುದರಿಂದ ಒಳಿತು ಸಾಧ್ಯ ಕರ್ಕಾಟಕ ರಾಶಿಯವರಿಗೆ ಗುರುವು 9ನೆ ಮನೇಲಿ ಇದ್ದು ರಾಹು ತಮ್ಮ ಕರ್ಮಾನುಸಾರ ಗುಣವಾಗಿ ಚರ್ಮ ಸಂಬಂಧಿತ ರೋಗ ಇನ್ನು ಕೋರ್ಟ್ ಅಲ್ಲಿ ಏನಾದ್ರೂ ಇದ್ರೆ ಓಡಾಟ ಜಾಸ್ತಿ ಇನ್ನು ಪುಣ್ಯದ ಕೆಲಸ ಮಾಡಿದ್ದಲ್ಲಿ ಮನೆ ವಾಹನ ಖರೀದಿ ಸಾಧ್ಯತೆ ಇವರು ಶಿವನ ದೇವಸ್ಥಾನಕ್ಕೆ ಒಣ ಕರ್ಜೂರ ದಾನ ಮಾಡಿದಲ್ಲಿ ಒಳ್ಳೆಯದು ಇನ್ನು ಆದಷ್ಟು ಅನಾಥಾಶ್ರಮಕ್ಕೆ ತಮ್ಮ ಕೈಲಾದ ಸೇವೆ ಮಾಡಿ ಸಿಂಹ ರಾಶಿಯವರಿಗೆ 9ನೆ ಮನೆ ರಾಹುವಿದ್ದು ಪಿತ್ರಾರ್ಜಿತ ಆಸ್ತಿ ಕೇಸು ಇದ್ದಲ್ಲಿ ಜಯ ಸಿಗಲಿದ್ದು ಆಸ್ತಿ ಉಪಯೋಗಿಸುವ ಅದೃಷ್ಟ ಲಭ್ಯ ಇವರು ಶಿವನಿಗೆ ಎಳನೀರು ಅಭಿಷೇಕ ಮಾಡಿದರೆ ಉತ್ತಮ ಇನ್ನು ಅನಾಥರು ಹಾಗೂ ವೃದ್ಧರಿಗೆ ಸಹಾಯ ಮಾಡಿ ಕನ್ಯಾ ರಾಶಿ 8ನೆ ಮನೆಯಲ್ಲಿ ರಾಹು ಇದ್ದು ಅಫಘಾತ ಆಗುವ ಸಾದ್ಯತೆ ಇದ್ದು ಆದಷ್ಟು ಗಾಡಿ ಓಡಾಡಿಸುವರಿಗೆ ಹುಷಾರು ಆಗಿರಬೇಕು ಇನ್ನು ಕೇತುವು ಕೋರ್ಟ್ ಕಚೇರಿಯಲ್ಲಿ ಕಾರ್ಯದಲ್ಲಿ ಜಯ ಸಿಗುವುದು ಆದಷ್ಟು ವಯಸ್ಸಾದವರಿಗೆ ಅಗತ್ಯವಿರುವವರಿಗೆ ಔಷಧಿ ಸಹಾಯ ಮಾಡಿ ಇನ್ನು ರಾಹುವಿನ ಸ್ಥಾನ ಇರುವ ದೇವಸ್ಥಾನದಲ್ಲಿ ಅಭಿಷೇಕ ಮಾಡಿ ಒಳ್ಳೆಯದು
ತುಲಾ ರಾಶಿಯವರು ಸಿನಿಮಾ ರಂಗದಲ್ಲಿ ಇರುವರಿಗೆ ಅವಮಾನ ನೋವು ಮಾನಹಾನಿ ಹಾಗೂ ಯಾರಾದ್ರೂ ಒಬ್ಬ ಅದ್ಭುತ ನಟ ಸಾವು ಸಾಧ್ಯತೆ ಇನ್ನೂ ಮದುವೆಯಲ್ಲಿ ವಿಳಂಬ ಅರ್ಧದಲ್ಲೆ ನಿಂತು ಹೋಗುವುದು ಇನ್ನೂ ಆರಕ್ಷರ ಠಾಣೆ ಸುತ್ತಾಡುವ ಸಾಧ್ಯತೆ ಇದ್ದು ಆದಷ್ಟು ಎಚ್ಚರಿಕೆ ಅಗತ್ಯ ಕಾಳಹಸ್ತಿಯಲ್ಲಿ ಶಿವ ಆಲಯದಲ್ಲಿ ಹಾಲಿನ ಅಭಿಷೇಕ ಮಾಡಿಸಿ ವೃಶ್ಚಿಕ ರಾಶಿ ಆರನೇ ಮನೆಯಲ್ಲಿ ರಾಹು 12ನೆ ಮನೆ ಕೇತು ಶತ್ರು ನಾಶ ಹಾಗೂ ಆರೋಗ್ಯದಲ್ಲಿ ಚರ್ಮ ಸಂಬಂಧಪಟ್ಟ ರೋಗ ಸಾಧ್ಯತೆ ಒಣ ದ್ರಾಕ್ಷಿ ದಾನ ಮಾಡಿ ಹಾಗೂ ನೆನೆಸಿ ತಿನ್ನಿ ಉತ್ತಮ ಇನ್ನೂ ಧನಸ್ಸು ರಾಶಿ ಹನ್ನೊಂದನೇ ಮನೆ ಕೇತು ಐದನೇ ಮನೆ ಕೇತು ಸರ್ಪ ದೋಷ ಇದ್ದು ಕೋರ್ಟ್ ಕಚೇರಿ ಹಾಗೂ ಪಿತ್ರಾರ್ಜಿತ ಆಸ್ತಿ ಹೋರಾಟದಲ್ಲಿ ಜಯ ಶಿವನ ದೇವಸ್ಥಾನ 700ಗ್ರಾಂ ಹುರುಳಿಕಾಳು ದಾನ ಮಾಡಿ ಆದರೆ ಅನಾಥ ಆಶ್ರಮಕ್ಕೆ ತೆಂಗಿನಕಾಯಿ ಮತ್ತು ಹುರುಳಿಕಾಳು ದಾನ ನೀಡಿ ಶನಿ ಅಧಿಪತಿ ಯಾಗಿರುವ ರಾಶಿ ಮಕರ ರಾಶಿ 2ನೆ ಮನೆ ರಾಹು ಹಾಗೂ 4ನೆ ಮನೆ ಕೇತು ಸ್ಥಾನ ಇದ್ದು ತಮ್ಮ ಕರ್ಮಾನುಸಾರ ಪಲ ಅನುಭವಿಸಬೇಕು ಆದಷ್ಟು ಶಿವನಿಗೆ ಅಡುಗೆ ಎಣ್ಣೆ ಗೋಧಿ ಅಕ್ಕಿ ದಾನ ಮಾಡಿ ಇನ್ನೂ ವೃದ್ಧರಿಗೆ ಬೆಡ್ಶೀಟ್ ದಾನ ಮಾಡಿ ಇನ್ನೂ ಕುಂಭ ರಾಶಿಯವರು ಶನಿಯ ಬದಲಾವಣೆ ಇಂದ ಕೆಲಸ ಮಂಧಮತಿಯಲ್ಲಿ ಗುರುಬಲವಿದ್ದು ರಾಹು ಮೂರನೇ ಮನೆ 9ನೆ ಮನೆ ಕೆತುವು ಇದ್ದು ತೀರ್ಥ ಯಾತ್ರೆ ದೂರ ಪ್ರಯಾಣ ಸಾಧ್ಯತೆ ಒಳ್ಳೆಯದು
ಇನ್ನೂ ಆದಷ್ಟು ಬೀದಿ ನಾಯಿಗಳಿಗೆ ಕೈಲಾದ ಸಹಾಯ ಮಾಡಿ ತಿಂಗಳಿಗೊಮ್ಮೆ ಬರುವ ಶಿವನ ಅಲಯಕ್ಕೆ ಹೋಗಿ ಹಾಲಿನ ಅಭಿಷೇಕ ಮಾಡಿ ಕೊನೆಯ ರಾಶಿ ಮೀನ ರಾಶಿ 2ನೆ ಮನೆ ರಹುವಿದ್ದು ಆದಷ್ಟು ಇನ್ನೊಬ್ರ ಜೊತೆ ಮಾತು ಆಡುವಾಗ ಎಚ್ಚರಿಕೆ ಅಗತ್ಯ ಸಮಯ ಚೆನ್ನಾಗಿದ್ದು ಗುರುವು ಲಗ್ನ ಸ್ಥಾನದಲ್ಲಿ ಇದ್ದು ಕೇತುವು 8ನೆ ಮನೆ ಒಳ್ಳೆಯ ಪಲಿತಾಂಶ ತೀರ್ಥ ಕ್ಷೇತ್ರದ ದರ್ಶನ ಹಾಗೂ ಮನೆದೇವರ ದರ್ಶನ ಒಳಿತು ಹಾಗೂ ಮಸಾಣದಲ್ಲಿ ನೀರಿನ ವ್ಯವಸ್ಥೆ ಪೂರೈಕೆ ಹಾಗೂ ಬಂದವರಿಗೆ ಮಜ್ಜಿಗೆ ನೀರು ಕೊಟ್ಟರೆ ಆದಷ್ಟು ಒಳ್ಳೆಯದು..