ಒಬ್ಬ ರೈತನ ಕಷ್ಟ ಅರ್ಥ ಆಗೋದು ಇನ್ನೊಬ್ಬ ರೈತನಿಗೆ ಮಾತ್ರ. ರೈತರು ಮಾಡುವ ಕೃಷಿ ಕೆಲಸಗಳು ನೋಡೋಕೆ ಸುಲಭ ಅನ್ನಿಸಿದರೂ ಸಹ, ಅಂದುಕೊಂಡಷ್ಟು ಸುಲಭ ಆಗಿರುವುದಿಲ್ಲ. ಅವರಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಅನೇಕ ರೀತಿಯ ಸವಾಲುಗಳು ಕಷ್ಟಗಳು ಇದ್ದೇ ಇರುತ್ತದೆ. ನಮ್ಮ ದಕ್ಷಿಣ ಕನ್ನಡ, ಮಲೆನಾಡು ಇಲ್ಲೆಲ್ಲಾ ಹೆಚ್ಚಾಗಿ ಅಡಿಕೆ ಬೆಳೆಯುತ್ತಾದೆ ಎನ್ನುವುದು ಗೊತ್ತಿರುವ ವಿಷಯ..
ಅಡಿಕೆ ಬೆಳೆಗೆ fungus ಇಂದ ಹಾನಿ ಆಗಬಾರದು ಎಂದು ಅಡಿಕೆ ಬೆಳೆಯುವ ಜಮೀನಿನಲ್ಲಿ ಕ್ರಿಮಿನಾಶಕಗಳನ್ನು ಸಿಂಪಡಿಸಲಾಗುತ್ತದೆ. ಬೋರ್ಡ್ ಮಿಕ್ಸರ್ ಕ್ರಿಮಿನಾಶಕವನ್ನು ಸಿಂಪಡಿಸುವುದು ಮಳೆಗಾಲದಲ್ಲಿ, ರೈತರು ಹಳೆಯ ರೀತಿಯಲ್ಲೇ ಗಟರ್ ಪಂಪ್ ಗಳನ್ನು ಬಳಸಿ ಕ್ರಿಮಿನಾಶಕವನ್ನು ಸಿಂಪಡಿಸುತ್ತಿದ್ದರು. ಆದರೆ ಈ ಕೆಲಸ ಮಾಡುವುದಕ್ಕೆ ಇಬ್ಬರಿಂದ ಮೂವರು ಕೆಲಸಗಾರರು ಬೇಕಾಗುತ್ತಾರೆ.
ಹಾಗೆಯೇ ಕೆಮಿಕಲ್ ಬಳಕೆ ಆಗುವುದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಕೂಡ ಜಾಸ್ತಿ ಇರುತ್ತದೆ. ಕಾರ್ಮಿಕರಿಗೆ ಹೆಚ್ಚು ಹಣವನ್ನು ಕೊಡಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಇರುತ್ತದೆ, ಪುತ್ತೂರಿನ 13 ವರ್ಷದ ಹುಡುಗಿ ನೇಹಾ, ತನ್ನ ತಾತನ ಜೊತೆಗೆ ಅಡಿಕೆ ತೋಟಕ್ಕೆ ಹೋದಾಗ, ಈ ಎಲ್ಲಾ ವಿಚಾರಗಳನ್ನು ತಿಳಿದುಕೊಂಡು, ರೈತರಿಗೆ ಕಷ್ಟ ಆಗದ ಹಾಗೆ ಏನನ್ನಾದರೂ ಮಾಡಬೇಕು ಎಂದು ಯೋಚಿಸಿ, 2 ವರ್ಷ ಕಷ್ಟಪಟ್ಟು, ಮಾಹಿತಿ ಕಲೆಹಾಕಿ ಏನು ಮಾಡಬೇಕು ಎಂದು ತಿಳಿದುಕೊಂಡಳು.
ಬಳಿಕ ಆಟೊಮ್ಯಾಟಿಕ್ ಕ್ರಿಮಿನಾಶಕ ಸ್ಪ್ರೇ ಮಾಡುವ ಮಶಿನ್ ತಯಾರಿಸಿದಳು. ಗಟರ್ ಪಂಪ್, ಡಿಸಿ ಮೋಟರ್, ಗೇರ್ ಬಾಕ್ಸ್ ಲೀಥಿಯಂ ಬ್ಯಾಟರಿ, ಎಕ್ಸಲೇಟರ್ ಇದೆಲ್ಲವನ್ನು ಬಳಸಿ ಆಟೊಮ್ಯಾಟಿಕ್ ಮಷಿನ್ ಕಂಡು ಹಿಡಿದಿದ್ದು, ಮೂವರು ಮಾಡುವ ಕೆಲಸವನ್ನು ಈ ಒಂದು ಮಶಿನ್ ಮಾಡುತ್ತದೆ. ಒಂದು ಸಾರಿ ಚಾರ್ಜ್ ಮಾಡಿದರೆ 5 ಗಂಟೆಗಳ ಕಾಲ ಕೆಲಸ ಮಾಡುತ್ತದೆ. ಹಾಗೆಯೇ ಸ್ಪ್ರೇ ಮಾಡಿದ ಬಳಿಕ ಎಷ್ಟು ಕೆಮಿಕಲ್ ಉಳಿದಿದೆ ಎಂದು ಕೂಡ ಚೆಕ್ ಮಾಡಬಹುದು.
40% ಲೇಬರ್ ಕೆಲಸವನ್ನು ಕಡಿಮೆ ಮಾಡುತ್ತದೆ ಈ ಮಷಿನ್. ನೇಹಾ ಕಂಡುಹಿಡಿದಿರುವ ಈ ಮಷಿನ್ ಅನ್ನು ಬಹಳಷ್ಟು ರೈತರು ಬಳಸುತ್ತಿದ್ದಾರೆ. 15ನೇ ವಯಸ್ಸಿಗೆ ಈಕೆ ಮಾಡಿದ ಈ ಕಾರ್ಯಕ್ಕೆ 2020ರಲ್ಲಿ CSIR ಇಂದ ತೃತೀಯ ಪ್ರಶಕ್ತಿ ಕೂಡ ಸಿಕ್ಕಿತು.