property law: ನಮ್ಮ ದೇಶದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸಾಕಷ್ಟು ಕಾನೂನುಗಳಿವೆ. ನಮ್ಮ ದೇಶದಲ್ಲಿರುವ ಹಿಂದೂ ಉತ್ತರಾಧಿಕಾರಿ ಕಾಯ್ದೆಯಲ್ಲಿ ತಂದೆಯ ಆಸ್ತಿ ಮೇಲೆ ಯಾರಿಗೆ ಎಷ್ಟು ಹಕ್ಕು ಇರುತ್ತದೆ ಎನ್ನುವ ಬಗ್ಗೆ ಕಾನೂನು ಇದೆ. ಆದರೆ ಒಬ್ಬ ವ್ಯಕ್ತಿಯ ಆಸ್ತಿಯಲ್ಲಿ ಹೆಂಡತಿಗೆ ಮತ್ತು ಮಕ್ಕಳಿಗೆ ಎಷ್ಟು ಹಕ್ಕು ಇರುತ್ತದೆಯೋ, ಅವರ ತಾಯಿಗೆ ಎಷ್ಟು ಹಕ್ಕು ಇರುತ್ತದೆ ಎನ್ನುವ ಬಗ್ಗೆ ಕೂಡ ಕಾನೂನು ಇದೆ.
ಈ ಮಾತಿಗೆ ಸಂಬಂಧಿಸಿದ ಹಾಗೆ ಹೈಕೋರ್ಟ್ ನಲ್ಲಿ ಒಂದು ಕೇಸ್ ದಾಖಲಾಗಿತ್ತು, ಅದಕ್ಕೆ ಸಂಬಂಧಿಸಿದ ವಾದಗಳನ್ನು ಜಡ್ಜ್ ಆಗಿರುವ ಹೆಚ್.ಪಿ ಸಂದೇಶ್ ಅವರ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದೆ. ಈ ಕೇಸ್ ನಲ್ಲಿ ಆಗಿರುವುದು ಏನು ಎಂದರೆ, ಸುಶೀಲಮ್ಮ ಎನ್ನುವ ಮಹಿಳೆಯ ಮಗ ಮೃತರಾಗಿರುತ್ತಾರೆ. ಇವರ ಗಂಡ ಇದ್ದರು ಕೂಡ ಮಗನ ಆಸ್ತಿಯಲ್ಲಿ ಹಕ್ಕು ಸಿಗುತ್ತಾ ಎನ್ನುವ ಚರ್ಚೆ ಶುರುವಾಗಿದೆ.
ಆದರೆ ಈ ಕೇಸ್ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದಾಗಲೇ ಸುಶೀಲಮ್ಮ ಮೃತರಾಗುತ್ತಾರೆ. ಆದರೆ ಮಗನ ಆಸ್ತಿಯಲ್ಲಿ ಆ ತಾಯಿಗೆ ಸಿಗುವ ಪಾಲು ಎಷ್ಟು ಎನ್ನುವ ಬಗ್ಗೆ ಕೋರ್ಟ್ ಇಂದ ತೀರ್ಪು ಬಂದಿದೆ. ಕೋರ್ಟ್ ನೀಡಿರುವ ತೀರ್ಪು ಏನು ಎಂದರೆ, ಮಗನ ಆಸ್ತಿಯಲ್ಲಿ ತಾಯಿ ಕೂಡ ಮೊದಲ ವರ್ಗದ ವಾರಸುದಾರ ಆಗುತ್ತಾರೆ. ಮಗನ ಆಸ್ತಿಯಲ್ಲಿ ತಾಯಿಗೂ ಸಮವಾದ ಪಾಲು ಸಿಗುತ್ತದೆ ಎಂದು ಕೋರ್ಟ್ ತೀರ್ಪು ನೀಡಿದೆ.
ಈಗ ಪ್ರಪಂಚ ಹೇಗಿದೆ ಎಂದರೆ, ಮನೆಯ ಮಗ ಮದುವೆಯಾದ ನಂತರ ಅವನ ಆಸ್ತಿಯಲ್ಲಿ ತಾಯಿಗೆ ಪಾಲು ಇದೆಯಾ ಎನ್ನುವ ಬಗ್ಗೆ ಅನುಮಾನ ಚರ್ಚೆಗಳು ನಡೆಯುತ್ತದೆ. ಒಂದು ವೇಳೆ ತಂದೆ ಬದುಕಿದ್ದರೆ, ಆಗ ಮಗನ ಆಸ್ತಿಯಲ್ಲಿ ತಾಯಿಗೆ ಪಾಲು ಸಿಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಕೋರ್ಟ್ ನೀಡಿರುವ ತೀರ್ಪು ಉಲ್ಟಾ ಆಗಿದೆ. ತಂದೆ ಬದುಕಿದ್ದರು ಕೂಡ ತಾಯಿ ಮಗನ ಆಸ್ತಿಗೆ ಪ್ರಥಮ ದರ್ಜೆಯ ವಾರಸುದಾರರಾಗುತ್ತಾರೆ.
ಮೊಮ್ಮಕ್ಕಳು ಅಥವಾ ಸೊಸೆ ತಾಯಿಗೆ ಆಸ್ತಿ ಕೊಡಲ್ಲ ಎಂದು ಹೇಳುವ ಹಾಗಿಲ್ಲ. ಮಗ ಪಿತ್ರಾರ್ಜಿತ ಆಸ್ತಿ ಮಾತ್ರವಲ್ಲ, ಸ್ವಯಾರ್ಜಿತ ಆಸ್ತಿಯ ಮೇಲೆ ಕೂಡ ತಾಯಿಗೆ ಅಷ್ಟೇ ಹಕ್ಕು ಇರುತ್ತದೆ. ಸಂತೋಷ್ ಅವರ ಕೇಸ್ ನಲ್ಲಿ ಈಗ ತಾಯಿಗೆ ಆಸ್ತಿ ಮೇಲೆ ಹಕ್ಕಿದೆ ಎಂದು ಕೋರ್ಟ್ ತೀರ್ಪು ನೀಡಿದೆ. ಸಂತೋಷ್ ಈಗ ಬದುಕಿಲ್ಲ, ಅವರು ವಿಲ್ ಕೂಡ ಮಾಡಿಸಿಲ್ಲ, ಆದರೆ ಆಸ್ತಿಯ ಮೇಲೆ ತಾಯಿಗೆ ಹಕ್ಕು ಇದೆ ಎನ್ನುವುದು ಕೋರ್ಟ್ ತೀರ್ಪಿನ ಮೂಲಕ ತಿಳಿದುಬಂದಿದೆ.