ನಮ್ಮ ದೇಶದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಅನೇಕ ಕಾನೂನು ನಿಯಮಗಳನ್ನು ಜಾರಿಗೆ ತರಲಾಗಿದೆ. ಅವುಗಳನ್ನು ನಾವು ತಿಳಿದುಕೊಂಡರೆ, ಮನೆಯಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಸಾಮಾನ್ಯವಾಗಿ ಮನೆಯಲ್ಲಿ ಒಡಹುಟ್ಟಿದವರ ನಡುವೆ ಆಸ್ತಿ ವಿಚಾರಕ್ಕೆ ಜಗಳ ನಡೆಯುತ್ತದೆ. ತಂದೆ ತಾಯಿಯ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಹಕ್ಕು, ಹೆಣ್ಣು ಮಕ್ಕಳಿಗೆ ಎಷ್ಟು ಹಕ್ಕು ಎನ್ನುವ ಪ್ರಶ್ನೆ ಬರುವುದಂತೂ ಸಹಜ, ಆದರೆ ಅತ್ತೆ ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದ್ಯಾ?
ಮೊದಲು ಒಡಹುಟ್ಟಿದವರ ಬಗ್ಗೆ ಹೇಳುವುದಾದರೆ, ಪಿತ್ರಾರ್ಜಿತ ಆಸ್ತಿ ಆಗಿದ್ದರೆ ಮನೆಯ ಗಂಡು ಮಗನಿಗೆ ಎಷ್ಟು ಹಕ್ಕಿರುತ್ತೋ ಅಷ್ಟೇ ಹಕ್ಕು ಹೆಣ್ಣುಮಕ್ಕಳಿಗೆ ಕೂಡ ಇರುತ್ತದೆ. ಆದರೆ ಅದು ತಂದೆಯ ಸ್ವಯಾರ್ಜಿತ ಆಸ್ತಿ ಆಗಿದ್ದರೆ, ಹೆಣ್ಣುಮಕ್ಕಳಿಗೆ ಆಗಲಿ, ಗಂಡು ಮಕ್ಕಳಿಗೆ ಆಗಲಿ ಹಕ್ಕು ಇರುವುದಿಲ್ಲ. ತಂದೆ ಯಾರ ಹೆಸರಿಗೆ ಬೇಕಾದರೂ ಆಸ್ತಿಯನ್ನು ವರ್ಗಾವಣೆ ಮಾಡಬಹುದು. ಯಾರು ಕೂಡ ಬಲವಂತ ಮಾಡುವ ಹಾಗಿಲ್ಲ.
ಹೆಣ್ಣುಮಗಳು ಮದುವೆಯಾಗಿ ತಂದೆ ಮನೆಯಿಂದ ಗಂಡನ ಮನೆಗೆ ಹೊರಟು ಹೋದಮೇಲು ಸಹ ತಂದೆ ಮನೆಯ ಪಿತ್ರಾರ್ಜಿತ ಆಸ್ತಿ ಮೇಲೆ ಅವಳಿಗೆ ಹಕ್ಕು ಇರುತ್ತದೆ. ಅದನ್ನ ಯಾರು ಕೂಡ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆದರೆ ಮದುವೆಯಾದ ಗಂಡನ ಮನೆಯಲ್ಲಿ ಅತ್ತೆ ಮಾವನ ಆಸ್ತಿ ಮೇಲೆ ಸೊಸೆಯಾದವಳಿಗೆ ಹಕ್ಕು ಇರುತ್ತಾ? ಕಾನೂನಿನ ನಿಯಮಗಳು ಈ ವಿಷಯದ ಬಗ್ಗೆ ಹೇಗಿದೆ? ತಿಳಿಸುತ್ತೇವೆ ನೋಡಿ..
ಒಂದು ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಆಕೆ ಅಲ್ಲಿ ಇರಬಹುದು. ಗಂಡನ ಆಸ್ತಿ ಮೇಲೆ ಆಕೆಗೆ ಹಕ್ಕು ಇರುತ್ತದೆ ಹೊರತು, ಅತ್ತೆ ಮಾವನ ಆಸ್ತಿಯ ಮೇಲೆ ಸೊಸೆಗೆ ಹಕ್ಕು ಇರುವುದಿಲ್ಲ. ಆಕೆ ತನಗೆ ಆಸ್ತಿ ಬರಬೇಕು ಎಂದು ಪ್ರಶ್ನೆ ಮಾಡಿ, ಕೇಳುವ ಹಾಗೆ ಕೂಡ ಇಲ್ಲ. ಅವರಾಗಿಯೇ ಆಸ್ತಿಯನ್ನು ಸೊಸೆಗೆ ಕೊಟ್ಟರೆ, ಆಕೆ ಅದನ್ನು ಸ್ವೀಕರಿಸಬಹುದು ಅಷ್ಟೇ. ಆದರೆ ಆಸ್ತಿ ಮೇಲೆ ಅವಳಿಗೆ ಹಕ್ಕು ಇರುವುದಿಲ್ಲ.
ಆಕೆಯ ಅತ್ತೆ ಮಾವ ವಿಧಿವಶರಾಗಿ, ಆ ಆಸ್ತಿ ಆಕೆಯ ಗಂಡನಿಗೆ ಬಂದರೆ, ಗಂಡನ ಆಸ್ತಿಯಲ್ಲಿ ಆಕೆಗೆ ಪಾಲು ಸಿಗಬಹುದು, ಆಕೆಗೆ ಹಕ್ಕು ಕೂಡ ಇರುತ್ತದೆ. ಗಂಡ ನಿಧನವಾದ ನಂತರ ಆಸ್ತಿಯಲ್ಲಿ ಹಕ್ಕು ಬರುವುದು ಹೆಂಡತಿಗೆ. ಆದರೆ ಅತ್ತೆ ಮಾವನ ಆಸ್ತಿಯಲ್ಲಿ ಆಕೆಗೆ ಹಕ್ಕು ಬರುವುದಿಲ್ಲ. ಕಾನೂನಿನ ಪ್ರಕಾರ ಮದುವೆಯಾದ ಹೆಣ್ಣುಮಗಳಿಗೆ ಸಿಗುವ ಒಂದು ಮುಖ್ಯವಾದ ಅನುಕೂಲ ಆಕೆಗೆ ಯಾರೇ ಎಷ್ಟೇ ದುಬಾರಿ ಗಿಫ್ಟ್ ಕೊಟ್ಟರು ಅದನ್ನು ಇಟ್ಟುಕೊಳ್ಳಬಹುದು.
ಒಂದು ವಿಚ್ಛೇದನ ಹೊಂದಿದರು ಸಹ, ಆಕೆ ತನ್ನ ಗಿಫ್ಟ್ಸ್ ಗಳನ್ನು ತನ್ನ ಬಳಿ ಇಟ್ಟುಕೊಳ್ಳಬಹುದು. ಹಾಗಾಗಿ ಯಾರೇ ಆದರೂ ಸಹ ಮದುವೆಯ ವೇಳೆ ತಮಗೆ ಸಿಗುವ ಗಿಫ್ಟ್ ಗಳ ಬಗ್ಗೆ ಸರಿಯಾಗಿ ಗಮನ ಹರಿಸಿ, ಎಲ್ಲವನ್ನು ತಿಳಿದುಕೊಳ್ಳಿ.