ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ಹೂಡಿಕೆ ಮಾಡಬೇಕು ಎನ್ನುವ ಆಶಯ ಇರುತ್ತದೆ. ಹೂಡಿಕೆಗೆ ಒಳ್ಳೆಯ ರಿಟರ್ನ್ಸ್ ಬರುವಂಥ ಅನೇಕ ಯೋಜನೆಗಳು ಜಾರಿಯಲ್ಲಿದೆ. ಆದರೆ ನೀವು ಹೂಡಿಕೆ ಮಾಡುವ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಬರುವುದು ಮಾತ್ರ ಮುಖ್ಯವಲ್ಲ. ನಿಮ್ಮ ಹಣಕ್ಕೆ ಭದ್ರತೆ ಇರುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಭದ್ರತೆಯು ಸಿಗುವ ಹೂಡಿಕೆಯ ಆಯ್ಕೆ ಯಾವುದು ಎಂದರೆ, ಪೋಸ್ಟ್ ಆಫೀಸ್ ಹಾಗೂ ಸ್ಟೇಟ್ ಬ್ಯಾಂಕ್ ಹೂಡಿಕೆಗಳು.
ಹೌದು, ಪೋಸ್ಟ್ ಆಫೀಸ್ ನಲ್ಲಿ ಜನರಿಗೆ ಅನುಕೂಲ ಆಗುವಂಥ ಅನೇಕ ಯೋಜನೆಗಳಿವೆ, ಅವುಗಳಲ್ಲಿ ನೀವು ಹೂಡಿಕೆ ಮಾಡಿ ಒಳ್ಳೆಯ ರಿಟರ್ನ್ಸ್ ಪಡೆಯಬಹುದು. ಪೋಸ್ಟ್ ಆಫೀಸ್ ಹೂಡಿಕೆಯಲ್ಲಿ ನಿಮಗೆ ಒಳ್ಳೆಯ ರಿಟರ್ನ್ಸ್ ಬರುವಂಥ ಯೋಜನೆಗಳಲ್ಲಿ ಇತ್ತೀಚೆಗೆ ಲಾಂಚ್ ಆಗಿರುವ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಆಗಿದೆ. ಈ ಸ್ಕೀಮ್ ನಲ್ಲಿ ನಿಮಗೆ 5 ವರ್ಷಗಳ ಹೂಡಿಕೆಗೆ 4.5 ಲಕ್ಷ ಬಡ್ಡಿ ಸಿಗುತ್ತದೆ. ಹಾಗಿದ್ದಲ್ಲಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ ನೋಡಿ..
ಪೋಸ್ಟ್ ಆಫೀಸ್ ನ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಯಾರು ಬೇಕಾದರು ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು. 10 ವರ್ಷದ ಮಗುವಿನ ತಂದೆ ತಾಯಿ ಕೂಡ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಮಿನಿಮಮ್ 1000 ಹೂಡಿಕೆ ಮಾಡಬಹುದು. ಮ್ಯಾಕ್ಸಿಮಮ್ ಹೂಡಿಕೆಗೆ ಯಾವುದೇ ಮಿತಿ ಇಟ್ಟಿಲ್ಲ. ಇಲ್ಲಿ ನೀವು ಸಿಂಗಲ್ ಖಾತೆಯನ್ನು ತೆರೆಯಬಹುದು ಅಥವಾ ಜಾಯಿಂಟ್ ಅಕೌಂಟ್ ಅನ್ನು ಕೂಡ ಶುರು ಮಾಡಬಹುದು.
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಬಡ್ಡಿದರ ಹೇಗೆ ಲೆಕ್ಕ ಬರುತ್ತದೆ ಎಂದರೆ, ಮೂರು ತಿಂಗಳಿಗೆ ಒಂದು ಸಾರಿ ನೀವು ಹೂಡಿಕೆ ಮಾಡಿರುವ ಹಣಕ್ಕೆ ಬಡ್ಡಿ ಲೆಕ್ಕ ಹಾಕು, ಸೇರಿಸಲಾಗುತ್ತದೆ. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ವರ್ಷದಿಂದ ವರ್ಷಕ್ಕೆ ಬಡ್ಡಿದರ ಜಾಸ್ತಿಯಾಗುತ್ತದೆ. 1 ವರ್ಷಕ್ಕೆ 6.9%, 2 ವರ್ಷಕ್ಕೆ 7.0%, 3 ವರ್ಷಕ್ಕೆ 7.1%, 4 ರಿಂದ 5 ವರ್ಷಕ್ಕೆ 7.5% ಬಡ್ಡಿ ಬರುತ್ತದೆ. 2024ರ ಮಾರ್ಚ್ 31ರವರೆಗು ಈ ಬಡ್ಡಿದರ ಜಾರಿಯಲ್ಲಿರಲಿದ್ದು, ಅಷ್ಟರ ಒಳಗೆ ಆಸಕ್ತರು ಹೂಡಿಕೆ ಮಾಡಬಹುದು.
10 ವರ್ಷಗಳವರೆಗು ಯೋಜನೆಯನ್ನು ಮುಂದುವರಿಸಬಹುದು. ಹಾಗೆಯೇ ಈ ಯೋಜನೆಯ ಮತ್ತೊಂದು ವಿಶೇಷ ಏನು ಎಂದರೆ, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಸಿಗುವ ಬಡ್ಡಿ ಹಣಕ್ಕೆ ಸೆಕ್ಷನ್ 80ಸಿ ಪ್ರಕಾರ ತೆರಿಗೆ ವಿನಾಯಿತಿ ಸಿಗಲಿದೆ. ಈ ಸ್ಕೀಮ್ ನಲ್ಲಿ ನೀವು ₹10 ಲಕ್ಷ ಹೂಡಿಕೆ ಮಾಡಿದರೆ, 5 ವರ್ಷಗಳ ಮೆಚ್ಯುರಿಟಿ ಅವಧಿ ಮುಗಿದ ನಂತರ ಬಡ್ಡಿಯ ಮೊತ್ತವೆ 4,49,948 ರೂಪಾಯಿ ಬರಲಿದ್ದು, ಒಟ್ಟಾರೆಯಾಗಿ ನಿಮ್ಮ ಕೈಗೆ ₹14,49,948 ರೂಪಾಯಿ ಸಿಗುತ್ತದೆ.