ಅಂಚೆ ಕಚೇರಿ ಎಂದರೆ ಮೊದಲಿಗೆ ನೆನಪಾಗುವುದೇ ಪತ್ರಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡುವ ಕಚೇರಿ ಎಂದು. ಆದರೆ, ಅಂಚೆ ಕಚೇರಿಯಲ್ಲಿ 10 ರಿಂದ 12 ಹಣ ಉಳಿತಾಯ ಮಾಡುವ ಸ್ಕೀಮ್’ಗಳು ಸಹ ಇದೆ ಏನಿದು? ಅದರಲ್ಲಿ ಒಂದು ಸ್ಕೀಂ ಬಗ್ಗೆ, ತಿಳಿಯೋಣ ಬನ್ನಿ.

ಅದರಲ್ಲಿ, ಫಿಕ್ಸೆಡ್ ಡೆಪಾಸಿಟ್ ತುಂಬಾ ಫೇಮಸ್ ಸ್ಕೀಮ್. ಒಂದು ಲಕ್ಷ ಡೆಪಾಸಿಟ್ ಮಾಡಿದರೆ ಎಷ್ಟು ಬರುತ್ತದೆ 50 ಸಾವಿರ ಡೆಪಾಸಿಟ್ ಮಾಡಿದರೆ ಎಷ್ಟು ಹಣ ಸಿಗುತ್ತದೆ ಈ ಅಕೌಂಟನ್ನು ಯಾವ ರೀತಿ ತೆರೆಯಬೇಕು?, ಅದರ ನಿಯಮಗಳು ಏನು? ಎನ್ನುವ ಎಲ್ಲಾ ಮಾಹಿತಿಯನ್ನು ಪಡೆಯೋಣ.

ಅಂಚೆ ಕಚೇರಿಯಲ್ಲಿ ಎಫ್ ಡಿ ( ಫಿಕ್ಸೆಡ್ ಡೆಪಾಸಿಟ್ ) ಖಾತೆ ತೆರೆಯಲು ಕೆಲವು ದಾಖಲೆಗಳ ಅಗತ್ಯವಿರುತ್ತದೆ ಯಾವುದು ಎಂದರೆ :-
ಆಧಾರ್ ಕಾರ್ಡ್ (Aadhar card).
ವೋಟರ್ ಐಡಿ ( Voter ID ).
ಪಾಸ್ಪೋರ್ಟ್ ಸೈಜ್ ಫೋಟೋ (paasport size photo).
ಪಾನ್ ಕಾರ್ಡ್ ( PAN card ).

ಫಿಕ್ಸೆಡ್ ಡಿಪಾಸಿಟ್ ಖಾತೆ ತೆರೆಯಲು ಯಾವುದೇ ರೀತಿಯ ವಯಸ್ಸಿನ ಮಿತಿ ಇರುವುದಿಲ್ಲ. 10 ವರ್ಷ ಅಥವಾ ಅದಕ್ಕಿಂತ ಮೇಲಿನ ವಯಸ್ಸಿನ ಎಲ್ಲಾ ಜನರು ಖಾತೆ ತೆರೆಯಲು ಅವಕಾಶ ಇದೆ.

ಫಿಕ್ಸೆಡ್ ಡಿಪಾಸಿಟ್ 1 ರಿಂದ 5 ವರ್ಷಗಳ ಮೆಚೂರಿಟಿ (maturity) ಪಿರಿಯಡ್ ಹೊಂದಿದೆ. ಇದರಲ್ಲಿ, ಸಿಂಗಲ್ ಅಕೌಂಟ್ ಮತ್ತು ಜಾಯಿಂಟ್ ಅಕೌಂಟ್ ( ತಂದೆ ಮತ್ತು ಮಕ್ಕಳು ಅಕೌಂಟ್, ಗಂಡ ಹೆಂಡತಿ  ಅಕೌಂಟ್ ) ಓಪನ್ ಮಾಡಬಹುದು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಫಿಕ್ಸೆಡ್ ಡಿಪಾಸಿಟ್ ಖಾತೆಯನ್ನು ಹೊಂದಬಹುದು. ಭಾರತದಲ್ಲಿ ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ಫಿಕ್ಸೆಡ್ ಡಿಪಾಸಿಟ್ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಬಹುದು.

ಅಂಚೆ ಕಚೇರಿಯಲ್ಲಿ ಫಿಕ್ಸೆಡ್ ಡಿಪಾಸಿಟ್ ಖಾತೆಯನ್ನು ತೆರೆಯಲು ನಾಮಿನಿ ಡೀಟೇಲ್ಸ್ ಬೇಕಾಗುತ್ತದೆ. ಫಿಕ್ಸೆಡ್ ಡಿಪಾಸಿಟ್’ನಲ್ಲಿ  ಮಿನಿಮಮ್ ಡಿಪಾಸಿಟ್ ₹ 1,000. ಮ್ಯಾಕ್ಸಿಮಮ್ ಡೆಪಾಸಿಟ್ ಹಣಕ್ಕೆ ಯಾವುದೇ ರೀತಿಯ ಲಿಮಿಟ್ ಇರುವುದಿಲ್ಲ.
ಆದಾಯ ತೆರಿಗೆ ಕಾಯ್ದೆ ( TDS ) ಸೆಕ್ಷನ್ 80C ಕೆಳಗೆ ಹೂಡಿಕೆ ಮಾಡಿರುವ ಮೊತ್ತಕ್ಕೆ ರಿಯಾಯಿತಿ ಪರಿಗಣಿಸಲಾಗಿದೆ. ಬಡ್ಡಿ ದರ 5.5% – 6.7% ತನಕ ವಾರ್ಷಿಕ ಬಡ್ಡಿ ಸಿಗುತ್ತದೆ. ಇದರ ಜೊತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಬದಲಾಗುತ್ತದೆ.

ಫಿಕ್ಸೆಡ್ ಡಿಪಾಸಿಟ್’ನಲ್ಲಿ ಎಷ್ಟು ವರ್ಷ ಡಿಪಾಸಿಟ್ ಇಡುತ್ತೀವಿ ಅನ್ನುವುದರ ಮೇಲೆ ಬಡ್ಡಿ ದರ ಬದಲಾಗುತ್ತದೆ.
1 ವರ್ಷಕ್ಕೆ – 5.5%
2 ವರ್ಷಕ್ಕೆ – 5.5%
5 ವರ್ಷಕ್ಕೆ – 6.7%

ಫಿಕ್ಸೆಡ್ ಡಿಪಾಸಿಟ್’ನಲ್ಲಿ 5 ವರ್ಷ ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಡಿಪಾಸಿಟ್ ಮಾಡಿರುವ ಹಣಕ್ಕೇ ಬಡ್ಡಿ ದರ ಯಾವ ರೀತಿ ಕ್ಯಾಲ್ಕುಲೇಟ್ ಮಾಡಬೇಕು ಎಂದು ನೋಡೋಣ ಬನ್ನಿ.
1 ವರ್ಷಕ್ಕೆ ₹ 50,000 ಇನ್ವೆಸ್ಟ್ ಮಾಡಿ ಅದಕ್ಕೆ 5.5% ವಾರ್ಷಿಕ ಬಡ್ಡಿ ದರ ಇದ್ದರೇ, ಅರ್ನ್ಡ್ ಇಂಟರೆಸ್ಟ್ (earned interest) ₹ 2,820 ಸಿಗುತ್ತದೆ ಹಾಗು ಮೇಚೂರಿಟಿ ಅಮೌಂಟ್ ₹ 52,820.
5 ವರ್ಷಕ್ಕೆ ₹ 50,000 ಇನ್ವೆಸ್ಟ್ ಮಾಡಿ ಅದಕ್ಕೆ 6.7% ವಾರ್ಷಿಕ ಬಡ್ಡಿ ದರ ಇದ್ದರೇ, ಅರ್ನ್ಡ್ ಇಂಟರೆಸ್ಟ್ (earned interest) ₹ 19,831 ಸಿಗುತ್ತದೆ ಹಾಗು ಮೇಚೂರಿಟಿ ಅಮೌಂಟ್ ₹ 69,831.

1 ವರ್ಷಕ್ಕೆ ₹ 1,00,000 ಇನ್ವೆಸ್ಟ್ ಮಾಡಿ ಅದಕ್ಕೆ 5.5% ವಾರ್ಷಿಕ ಬಡ್ಡಿ ದರ ಇದ್ದರೇ, ಅರ್ನ್ಡ್ ಇಂಟರೆಸ್ಟ್ (earned  interest)  ₹ 5,640 ಸಿಗುತ್ತದೆ ಹಾಗು ಮೇಚೂರಿಟಿ ಅಮೌಂಟ್ ₹ 1,5,0640.
2 ವರ್ಷಕ್ಕೆ ₹ 1,00,000 ಇನ್ವೆಸ್ಟ್ ಮಾಡಿ ಅದಕ್ಕೆ 5.5% ಬಡ್ಡಿ ದರ ಇದ್ದರೇ, ಅರ್ನ್ಡ್ ಇಂಟರೆಸ್ಟ್ ( earned interest ) ₹ 11,599 ಸಿಗುತ್ತದೆ ಹಾಗು ಮೇಚೂರಿಟಿ ಅಮೌಂಟ್ ₹ 1,11,599.
5 ವರ್ಷಕ್ಕೆ ₹ 1,00,000 ಇನ್ವೆಸ್ಟ್ ಮಾಡಿ ಅದಕ್ಕೆ 6.7% ವಾರ್ಷಿಕ ಬಡ್ಡಿ ದರ ಇದ್ದರೇ, ಅರ್ನ್ಡ್ ಇಂಟರೆಸ್ಟ್ (earned interest) ₹ 39.663 ಸಿಗುತ್ತದೆ ಹಾಗು ಮೇಚೂರಿಟಿ ಅಮೌಂಟ್ ₹ 1,39,663.

1 ವರ್ಷಕ್ಕೆ ₹ 10,00,000 ಇನ್ವೆಸ್ಟ್ ಮಾಡಿ ಅದಕ್ಕೆ 5.5% ವಾರ್ಷಿಕ ಬಡ್ಡಿ ದರ ಇದ್ದರೇ, ಅರ್ನ್ಡ್ ಇಂಟರೆಸ್ಟ್ (earned interest) ₹ 56,407 ಸಿಗುತ್ತದೆ ಹಾಗು ಮೇಚೂರಿಟಿ ಅಮೌಂಟ್ ₹ 10,56,407.
5 ವರ್ಷಕ್ಕೆ ₹ 50,000 ಇನ್ವೆಸ್ಟ್ ಮಾಡಿ ಅದಕ್ಕೆ 6.7% ವಾರ್ಷಿಕ ಬಡ್ಡಿ ದರ ಇದ್ದರೇ, ಅರ್ನ್ಡ್ ಇಂಟರೆಸ್ಟ್ ( earned interest ) ₹ 3,96,638 ಸಿಗುತ್ತದೆ ಹಾಗು ಮೇಚೂರಿಟಿ ಅಮೌಂಟ್ ₹ 13,96,638.ನಿಯಮಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವುದರಿಂದ ಅಂಚೆ ಕಚೇರಿಗೆ ಭೇಟಿ ಮಾಡಿ ನಂತರ ಹೂಡಿಕೆ ಮಾಡುವುದು ಉತ್ತಮ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!