ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಿ, ಈ ಹುದ್ದೆಯ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಜುಲೈ 15 ರಂದು ಗ್ರಾಮೀಣ ಡಾಕ್ ಸೇವಕ್ ಪ್ರಕಟಣೆಗಳ ಅಧಿಸೂಚನೆಯನ್ನು ಮಾಡಲಾಗುವುದು.

ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಜುಲೈ 15 ಮತ್ತು ಆಗಸ್ಟ್ 5, 2024 ರ ನಡುವೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನೂ GDS, BPM, ಮತ್ತು ABPM/Dak Sevak ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಣಿತ, ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ನಲ್ಲಿ ಉತ್ತೀರ್ಣರಾಗುವುದರೊಂದಿಗೆ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ:
ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ
ಮೀಸಲಾತಿ ಹೊಂದಿರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಲಿಕೆ ಇರುತ್ತದೆ.
ಹುದ್ದೆಗಳ ಸಂಖ್ಯೆ: 30,000 +
ಉದ್ಯೋಗದ ಸ್ಥಳ: ಭಾರತಾದ್ಯಂತ

ಆಯ್ಕೆ ವಿಧಾನ: ಭಾರತೀಯ ಅಂಚೆ ಕಚೇರಿಯಲ್ಲಿ ಜಿಡಿಎಸ್, ಬಿಪಿಎಂ ಮತ್ತು ಎಬಿಪಿಎಂ/ಡಾಕ್ ಸೇವಕ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು 10 ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತಯಾರಿಸಲಾದ ಮೆರಿಟ್ ಪಟ್ಟಿಯ ಆಧಾರದ ಮೇಲೆ ಮಾಡಲಾಗುತ್ತದೆ. ಆಯ್ಕೆಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ.

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ : ₹100
SC/ST/PWD/ಮಹಿಳೆ/ಟ್ರಾನ್ಸ್ಜೆಂಡರ್ : ಶುಲ್ಕವಿಲ್ಲ
ಅಪ್ಲಿಕೇಶನ್ ಪ್ರಾರಂಭ ದಿನಾಂಕ: ಜುಲೈ 15, 2024
ಕೊನೆಯ ಅಪ್ಲಿಕೇಶನ್ ದಿನಾಂಕ: ಆಗಸ್ಟ್ 5, 2024
ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!