ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಅಂಚೆ ಇಲಾಖೆಯಲ್ಲಿ ಕಾಳಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ, ಅಸಕತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ, ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಉದ್ಯೋಗ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ಪಡೆಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೇಲಿಗ್ರಾಮ್ ಚಾನೆಲ್ ಸೇರಿ
ಹುದ್ದೆಗಳ ವಿವರ ಹೀಗಿದೆ
ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪೂರ್ಣಾವಧಿ ಸ್ಟಾಫ್ ಚಾಲಕರ ಒಟ್ಟು 19 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 12, 2025. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ ನಿರೀಕ್ಷೆಯಲ್ಲಿರುವವವರು ಈ ಅವಕಾಶವನ್ನು ಬಳಸಿಕೊಳ್ಳಿ.
ವಿದ್ಯಾರ್ಹತೆ:
ಭಾರತೀಯ ಅಂಚೆ ಇಲಾಖೆ ಹೊರಡಿಸಿದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ:
ಭಾರತೀಯ ಅಂಚೆ ಇಲಾಖೆ ಹೊರಡಿಸಿದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ಮತ್ತು ಗರಿಷ್ಠ 27 ವರ್ಷಗಳು. ಮೀಸಲಾತಿಗೆ ಒಳಪಟ್ಟು ಅಭ್ಯರ್ಥಿಗಳಿಗೆ ವಯಸ್ಸಿನ ರಿಯಾಯಿತಿ ನೀಡಲಾಗುತ್ತದೆ.
ವಯೋಮಿತಿ ಸಡಿಲಿಕೆ:OBC ಅಭ್ಯರ್ಥಿಗಳು – 3 ವರ್ಷಗಳು, SC/ST ಅಭ್ಯರ್ಥಿಗಳು – 5 ವರ್ಷಗಳು.
ಸಂಬಳ:ತಿಂಗಳಿಗೆ 19,900 ರಿಂದ 63,200 ರೂ
ಕೆಲಸದ ಸ್ಥಳ:ಬಿಹಾರದ ಪಾಟ್ನಾ
ಆಯ್ಕೆ ಪ್ರಕ್ರಿಯೆ: ಟ್ರೇಡ್ ಪರೀಕ್ಷೆ,ಚಾಲನಾ ಪರೀಕ್ಷೆ, ಸಂದರ್ಶನ
ಅರ್ಜಿಸಲ್ಲಿಸುವ ವಿಳಾಸ: ಉಪ ನಿರ್ದೇಶಕರು (ನೇಮಕಾತಿ)
ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ
ಬಿಹಾರ ವಲಯ
ಪಾಟ್ನಾ-800001