ನಮ್ಮ ದೇಶದಲ್ಲಿ ಲಕ್ಷಾಂತರ ಬೀದಿಬದಿ ವ್ಯಾಪಾರಿಗಳಿದ್ದಾರೆ. ರಸ್ತೆಬದಿಯಲ್ಲಿ ಹಣ್ಣು, ಹೂವು, ತರಕಾರಿ ವ್ಯಾಪಾರ ಮಾಡುವವರು ಕಷ್ಟ ಅನುಭವಿಸುತ್ತಾರೆ. ಅವರಿಗೆ ಸರಿಯಾದ ಸವಲತ್ತುಗಳು ಸಿಗುವುದಿಲ್ಲ. 2020ರಲ್ಲಿ ಕೋವಿಡ್ ಶುರು ಆದಾಗಿನಿಂದ ಇಂಥವರಿಗೆ ಭಾರಿ ತೊಂದರೆ ಆಯಿತು, ಹಾಗಾಗಿ ಕೇಂದ್ರ ಸರ್ಕಾರವು ಬೀದಿಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆಯನ್ನು ಪಿಎಮ್ ಮೋದಿ ಅವರು ಜಾರಿಗೆ ತಂದರು. ಈ ಯೋಜನೆಯ ಮೂಲಕ 3 ಹಂತಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ₹50,000 ಸಾಲ ಕೊಡಲಾಗುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ ಎಂದು ತಿಳಿಯೋಣ..
2023ರ ಜುಲೈ ನಲ್ಲಿ ಸ್ವನಿಧಿ ಆಪ್ ಅನ್ನು ಕೂಡ ಲಾಂಚ್ ಮಾಡಲಾಗಿದೆ. ಇದರಲ್ಲಿ ವ್ಯಾಪಾರಿಗಳಿಗೆ ಕ್ಯೂಆರ್ ಕೋಡ್ ಇರಲಿದ್ದು, ಪೇಮೆಂಟ್ ಕೂಡ ಸುಲಭವಾಗಿ ಮಾಡಬಹುದು. ಡಿಜಿಟಲ್ ವ್ಯವಹಾರಕ್ಕೆ ಉತ್ಸಾಹ ಕೊಡುವುದಕ್ಕಾಗಿ ಈ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ..
ಸ್ವನಿಧಿ ಯೋಜನೆಯಲ್ಲಿ ಏನೆಲ್ಲಾ ಉಪಯೋಗ ಸಿಗುತ್ತದೆ ಎಂದು ನೋಡುವುದಾದರೆ, ಬೀದಿಬದಿ ವ್ಯಾಪಾರಿಗಳಿಗೆ ₹50,000 ವರೆಗು ಸಾಲ ಸಿಗುತ್ತದೆ. ಟೈಮ್ ಗೆ ಸರಿಯಾಗಿ ಸಾಲ ಪಾವತಿ ಮಾಡಿದರೆ, ಬಡ್ಡಿದರದಲ್ಲಿ 7% ಸಬ್ಸಿಡಿ ಸಿಗುತ್ತದೆ. ಆಪ್ ಬಳಕೆ ಮಾಡಿದರೆ, ₹1200 ರೂಪಾಯಿ ಕ್ಯಾಶ್ ಬ್ಯಾಕ್ ಸಿಗುತ್ತದೆ. ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂದರೆ, ಜೀವನ ಹಕ್ಕು ಸಂರಕ್ಷಣೆ ಮತ್ತು ಬೀದಿ ವ್ಯಾಪಾರಿಗಳ ನಿರ್ವಹಣೆ 2014 ಕಾಯ್ದೆಯ ಅನುಸಾರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಡಿಗೆ ಬರುವ ಎಲ್ಲಾ ವ್ಯಾಪಾರಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ಈ https://www.pmsvanidhi.mohua.gov.in/ ಲಿಂಕ್ ಕ್ಲಿಕ್ ಮಾಡಿ ಹೋಮ್ ಪೇಜ್ ನಲ್ಲಿ 10,000 ಸಾಲಕ್ಕೆ ಅನ್ವಯ, 20,000 ಸಾಲಕ್ಕೆ ಅನ್ವಯ, 50,000 ಸಾಲಕ್ಕೆ ಅನ್ವಯ ಎಂದು 3 ಆಯ್ಕೆ ಇರುತ್ತದೆ. ಇದರಲ್ಲಿ ನೀವು ಸಾಲ ಪಡೆಯುತ್ತಿರುವ ಹಂತ ಯಾವುದು ಎಂದು ಸೆಲೆಕ್ಟ್ ಮಾಡಿ. ಬಳಿಕ ನಿಮ್ಮ ಫೋನ್ ನಂಬರ್ ಹಾಕಿ, ಕ್ಯಾಪ್ಚ ಕೋಡ್ ಸರಿಯಾಗಿ ಹಾಕಿ. ಬಳಿಕ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಡೀಟೇಲ್ಸ್ ಹಾಕಿ, ನಿಮ್ಮ ಅಡ್ರೆಸ್ ಡೀಟೇಲ್ಸ್ ಹಾಕಿ. ಇದೆಲ್ಲಾ ಮಾಹಿತಿ ಫಿಲ್ ಮಾಡಿದ ಮೇಲೆ Submit ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.