ಅಕ್ಟೋಬರ್ 1 ರಿಂದ 2020 ರಿಂದ ಹೊಸ ನಿಯಮಗಳು ಜಾರಿಯಾಗಿದೆ. ಯಾವ ಹೊಸ ನಿಯಮಗಳು ಜಾರಿಯಾಗಿದೆ ಹಾಗೂ ಅದರ ಬದಲಾವಣೆಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಅಕ್ಟೋಬರ್ 1 2020 ರಿಂದ ಗ್ಯಾಸ್ ಸಿಲಿಂಡರ್, ಆರೋಗ್ಯ ವಿಮೆ, ಸಿಹಿತಿಂಡಿ, ಕ್ರೆಡಿಟ್ ಕಾರ್ಡ್, ವಾಹನಗಳ ನಂಬರ್ ಪ್ಲೇಟ್, ಡಿಎಲ್, ಆರ್.ಸಿ ಹಾಗೂ ವಿಮಾನ ಸಂಚಾರ ಸೇರಿದಂತೆ ಮಹತ್ತರ ಬದಲಾವಣೆಯಾಗಲಿದೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯಿದೆ 1989 ಕ್ಕೆ ತಿದ್ದುಪಡಿ ಮಾಡಿದೆ. ಚಾಲನಾ ಪರವಾನಗಿ ಸೇರಿದಂತೆ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಹಿತಿ ತಂತ್ರಜ್ಞಾನ ಪೋರ್ಟಲ್ ಮೂಲಕ ನಿರ್ವಹಿಸಲಾಗುತ್ತದೆ. ಹಾಗೂ ದೇಶದಾದ್ಯಂತ ಡಿ.ಎಲ್ ಮತ್ತು ಆರ್. ಸಿಯನ್ನು ಏಕರೂಪವಾಗಿ ವಿತರಣೆ ಮಾಡಲಾಗುತ್ತದೆ. ಹೀಗಾಗಿ ವಾಹನ ಸವಾರರು ತಮ್ಮ ಡಿ.ಎಲ್ ಹಾಗೂ ಆರ್.ಸಿಯನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಮುಂಬರುವ ಡಿ.ಎಲ್ ಹಾಗೂ ಆರ್ .ಸಿಯು ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದೆ. ಈ ಕಾರ್ಡ್ ಗಳಿಗೆ ಮೈಕ್ರೋ ಚಿಪ್ ಅಳವಡಿಸಲಾಗಿರುತ್ತದೆ. ಈ ಕಾರ್ಡ್ ಗಳು ಎಟಿಎಂ ಕಾರ್ಡ್ ಗಳಂತೆ ಕೆಲಸ ಮಾಡುತ್ತವೆ. ಕ್ರೆಡಿಟ್ ಕಾರ್ಡ್ ಗಳಿಗೆ ಇನ್ನುಮುಂದೆ ರಿಯಾಯಿತಿ ಸಿಗುವುದಿಲ್ಲ. ವಾಹನ ಸವಾರರು ಕ್ರೆಡಿಟ್ ಕಾರ್ಡ್ ಗಳ ಮೂಲಕ ಪೆಟ್ರೋಲ್ ಬಂಕ್ ಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ತುಂಬಿಸಿ ಕ್ರೆಡಿಟ್ ಕಾರ್ಡ್ ನಿಂದ ಪಾವತಿಸಿದರೆ ಅಕ್ಟೋಬರ್ 1 ರಿಂದ ಅದಕ್ಕೆ ರಿಯಾಯತಿ ದೊರೆಯುವುದಿಲ್ಲ. ಡ್ರೈವಿಂಗ್ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿದರೆ ಮೊದಲ ಬಾರಿಗೆ 1,000 ರೂ ದಂಡ, ಎರಡನೇ ಬಾರಿಗೆ 5,000 ರೂ ದಂಡ, ಮೂರನೇ ಬಾರಿ 5,000 ರೂ ದಂಡದೊಂದಿಗೆ ಒಂದು ವರ್ಷ ಜೈಲುವಾಸ ಅನುಭವಿಸಬೇಕಾಗುತ್ತದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈ ನಿಯಮವನ್ನು ಜಾರಿಗೊಳಿಸಿದೆ. ಬೇಕರಿ ಹಾಗೂ ಸ್ವೀಟ್ ಸ್ಟಾಲ್ ಗಳಲ್ಲಿ ಹಳೆಯ ಸಿಹಿತಿಂಡಿಗಳನ್ನು ಮಾರಾಟ ಮಾಡುವಂತಿಲ್ಲ. ಅಕ್ಟೋಬರ್ 1 ರಿಂದ ಬೇಕರಿಗಳಲ್ಲಿ ತಾವು ಮಾರುವ ತಿನಿಸುಗಳ ಮೇಲೆ ಎಕ್ಸಪೈರಿ ಡೇಟ್ ಹಾಕಬೇಕು ಹಾಗೂ ಯಾವುದೇ ಸಿಹಿತಿಂಡಿಗಳು ಎಲ್ಲಿಯವರೆಗೆ ಬಳಸಬಹುದು ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು.
ಆರೋಗ್ಯ ವಿಮೆಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಅಸ್ತಿತ್ವದಲ್ಲಿರುವ ಹಾಗೂ ಹೊಸ ಆರೋಗ್ಯ ವಿಮೆ ಪಾಲಸಿ ವ್ಯಾಪ್ತಿಗೆ ಅಧಿಕ ರೋಗಗಳನ್ನು ಸೇರಿಸಲಾಗಿದೆ. ಆರೋಗ್ಯ ವಿಮಾ ಪಾಲಿಸಿಯನ್ನು ಪ್ರಮಾಣೀಕೃತ ಹಾಗೂ ಗ್ರಾಹಕ ಕೇಂದ್ರೀಕೃತವಾಗಿಸಲು ಈ ಬದಲಾವಣೆಯನ್ನು ತರಲಾಗಿದೆ. ವಿದೇಶದಲ್ಲಿರುವವರಿಗೆ ಹಣ ಕಳುಹಿಸಬೇಕಾದರೆ ಟಿ.ಸಿ.ಎಸ್ ಸಂಗ್ರಹಕ್ಕೆ 5% ತೆರಿಗೆಯನ್ನು ಹೆಚ್ಚುವರಿಯಾಗಿ ಸಲ್ಲಿಸಬೇಕು. ಅಡುಗೆ ಮಾಡಲು ಬಳಸುವ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರುಪೇರು ಕಂಡುಬರುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳಿನ ಮೊದಲ ದಿನದಂದು ಎಲ್ಲ.ಪಿ.ಜಿ ಸಿಲೆಂಡರ್ ಹಾಗೂ ವಾಯು ಇಂಧನದ ಬೆಲೆಯನ್ನು ಪ್ರಕಟಗೊಳಿಸುತ್ತದೆ. ವಾಹನಗಳಿಗೆ ಭದ್ರತಾ ನಂಬರ್ ಪ್ಲೇಟ್ ಗಳು ಕಡ್ಡಾಯವಿದೆ. ಈ ನಿಯಮ ದೆಹಲಿ ನಿವಾಸಿಗಳಿಗೆ ಅನ್ವಯಿಸುತ್ತದೆ. ನಂಬರ್ ಪ್ಲೇಟ್ ಅನುಪಸ್ಥಿತಿಯಲ್ಲಿದ್ದರೆ 1-5,000 ರೂ ವರೆಗೆ ದಂಡ ವಿಧಿಸಲಾಗುತ್ತದೆ. ವಿಮಾನಯಾನದಲ್ಲಿ ಅನಾನುಕೂಲ ತಪ್ಪಿಸಲು ದೂರವಾಣಿ ಸಂಖ್ಯೆ ಹಾಗೂ ಸಲಹೆಗಳನ್ನು ನೀಡಿದ್ದಾರೆ. ಗೋ ಏರ್ ಲೈನ್ ಪ್ರಯಾಣ ಮಾಡುವವರು ಮನೆಯಿಂದ ಹೊರಡುವ ಮುನ್ನ ತಮ್ಮ ವಿಮಾನ ಹಾಗೂ ಟರ್ಮಿನಲ್ ಪರೀಕ್ಷಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂಬರ್ 18002100999 ಕರೆ ಮಾಡಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.