ಜಾತಕ, ಹುಟ್ಟಿದ ದಿನಾಂಕ, ರಾಶಿ- ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯ ಹಾಗೂ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ ಎಂಬ ಮಾಹಿತಿ ನೀಡುತ್ತಾರೆ. ಇವು ಕೆಲವು ಸಲ ಸತ್ಯವಾಗಿರುತ್ತದೆ ಕೂಡಾ. ಹಾಗೆಯೆ ಹುಟ್ಟಿದ ತಿಂಗಳಿನ ಆಧಾರದ ಮೇಲೆಯೂ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ಮಾಡಿ ಕೊಡುತ್ತಾರೆ. ಈ ಆಧಾರದ ಮೇಲೆ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳ ಸ್ವಭಾವದ ಗುಟ್ಟುಗಳನ್ನು ನಾವು ಈ ಮಾಹಿತಿಯಿಂದ ತಿಳಿಯೋಣ.

ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳು ಸೌಂದರ್ಯ ಪ್ರಿಯರು ಜೊತೆಗೆ ಬಹಳ ಬುದ್ದಿವಂತರಾಗಿರುತ್ತಾರೆ. ಯಾವಾಗಲೂ ಸುಂದರವಾಗಿ, ಆಕರ್ಷಕವಾಗಿ ಕಾಣುವ ಹಂಬಲದಿಂದ ಹೆಚ್ಚು ಕನ್ನಡಿ ಬಳಸುತ್ತಾರೆ. ಹೊರಗಡೆ ಹೋಗುವಾಗ ತಮ್ಮದೆ ಶೈಲಿಯಲ್ಲಿ ರೆಡಿಯಾಗಿ ಹೋಗುವ ಇವರು ಮನೆಯಲ್ಲಿ ಹೇಗೆ ಬೇಕೊ ಹಾಗೆ ಇರುತ್ತಾರೆ. ಇವರು ಹೊರಗಡೆ ಇರುವ ರೀತಿ ಹಾಗೂ ವಸ್ತ್ರ ವಿನ್ಯಾಸಗಳು ಮೆಚ್ಚುಗೆ ಪಡೆಯುತ್ತದೆ. ಇದರಿಂದ ಬಹಳಷ್ಟು ಜನರ ಪ್ರೀತಿ ಗಳಿಸುತ್ತಾರೆ. ಎಷ್ಟು ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ತಮ್ಮ ಬುದ್ದಿವಂತಿಕೆಯಿಂದ ನಿಭಾಯಿಸುತ್ತಾರೆ. ಚಿಟಿಕೆ ಹೊಡೆಯುವುದರಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರತಿಭೆ ಹಾಗೂ ಚಾಣಾಕ್ಷತನ ಇವರಲ್ಲಿ ಇದೆ. ಎಷ್ಟು ದೊಡ್ಡ ಕಷ್ಟವನ್ನು ದುಡ್ಡಿಗಾಗಿ ಎದುರಿಸುತ್ತಾರೆ. ಇವರು ಯಾವಾಗಲೂ ನಗುತ್ತಾ ಇರುತ್ತಾರೆ ಜೊತೆಗೆ ಸುತ್ತಮುತ್ತಲಿನವರನ್ನು ನಗಿಸುತ್ತಾರೆ. ಅದಕ್ಕಾಗಿ ಎಲ್ಲರಿಗೂ ಇಷ್ಟವಾಗುತ್ತಾರೆ.

ತನ್ನದೆ ಆದ ಛಾಪು ಮೂಡಿಸುವ ಇವರು, ತಮ್ಮ ವ್ಯಕ್ತಿತ್ವದಿಂದ ಎಲ್ಲರಿಗೂ ಇಷ್ಟವಾಗುತ್ತಾರೆ. ಸೂಕ್ಷ್ಮ ಜೀವಿಗಳಾದ ಇವರು ಯಾರಾದರೂ ಏನಾದರೂ ಹೇಳಿದರೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಸ್ವಲ್ಪ ಹೋರಾಟದ ನಂತರ ಗೆಲುವು ಸಿಗುತ್ತದೆ. ಆದರೆ ಅದೃಷ್ಟ ಬೆನ್ನ ಹಿಂದೆಯೆ ಇರುತ್ತದೆ. ಆದಷ್ಟು ಬೇಗ ತಮ್ಮ ಗುರಿ ತಲುಪುತ್ತಾರೆ. ಎಷ್ಟು ದೊಡ್ಡ ಶ್ರೀಮಂತರಾದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುತ್ತಾರೆ. ದುಡ್ಡಿನ ಮಹತ್ವ ಅರಿತ ಇವರು ಎಂದಿಗೂ ಯಾರ ಮೇಲೂ ದರ್ಪ ತೋರುವುದಿಲ್ಲ. ಎಷ್ಟು ಜನರ ಮಧ್ಯೆ ಇದ್ದರು ತಮ್ಮ ನಡವಳಿಕೆಯಿಂದ ಗುರುತಿಸಲ್ಪಡುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರದು ಆಕರ್ಷಕ ವ್ಯಕ್ತಿತ್ವ ಹೊಂದಿದವರು ಹಾಗೆಯೆ ಅದೃಷ್ಟವಂತರು ಕೂಡ. ಉತ್ತಮ ವಿಧ್ಯಾಭ್ಯಾಸ ಮಾಡಿ, ಉತ್ತಮ ಗುಣಮಟ್ಟದ ಉದ್ಯೋಗ ದೊರಕಿಸಿಕೊಳ್ಳುತ್ತಾರೆ.

ಇವುಗಳು ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳ ವ್ಯಕ್ತಿತ್ವ. ಸೂಕ್ಷ್ಮ ಸ್ವಭಾವ ಹೊಂದಿರುವುದರಿಂದ ಸೂಕ್ಷ್ಮವಾಗಿ ವರ್ತಿಸುವುದು ಉತ್ತಮ. ಜೀವನ ಸಂಗಾತಿಯು ಇಲ್ಲವೇ ಜೀವನ ಸಂಗಾತಿಯಾಗುವವರು ಅಕ್ಟೋಬರ್ ನಲ್ಲಿ ಹುಟ್ಟಿದ್ದರೆ ಅವರ ಗುಣ, ನಡತೆ, ಸ್ವಭಾವಗಳು ಈ ತೆರೆನಾಗಿ ಇರುತ್ತದೆ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!