ನಾವು ಬದುಕಿದ್ದಾಗ ಸಹಾಯ ಮಾಡಬೇಕು ನಮ್ಮ ಶರೀರವಿರುವುದು ಇನ್ನೊಬ್ಬರಿಗೆ ಉಪಕಾರ ಮಾಡಲು ಎಂಬುದನ್ನು ಕೇಳುತ್ತೇವೆ. ಚಿಕ್ಕಮಗಳೂರಿನ ಯುವತಿಯೊಬ್ಬಳು ಸತ್ತ ನಂತರವೂ 7 ಜನರ ಜೀವನಕ್ಕೆ ದಾರಿಯಾಗಿದ್ದಾಳೆ. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೆದುಳು ನಿಷ್ಕ್ರೀಯವಾಗಿರುವ ಯುವತಿ ಅಂಗಾಗ ದಾನ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕೆರೆಮನೆಯಲ್ಲಿ ನಡೆದಿದೆ. ಕೆರೆಮನೆಯ ಗಾನವಿ ಎಂಬ ಯುವತಿಗೆ ಬ್ರೈನ್ ಡೆಡ್ಆಗಿತ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ ಹೀಗಾಗಿ ಅಂಗಾಗ ದಾನ ಮಾಡಲು ಯುವತಿಯ ಪೋಷಕರು ನಿರ್ಧಾರ ಮಾಡಿದ್ದರು. ಆ ಮೂಲಕ ಗಾನವಿ ಸಾವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕೆರೆಮನೆಯ ಗಾನವಿ ಕೃಷ್ಣೇಗೌಡ ಹಾಗೂ ಲೀಲಾವತಿ ದಂಪತಿಯ ಎರಡನೆ ಪುತ್ರಿ. ಗಾನವಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಫೆಬ್ರವರಿ 8ರಂದು ಕೆಲಸ ಮಾಡುವಾಗ ಕುಸಿದುಬಿದ್ದು ಜ್ಞಾನ ತಪ್ಪಿದರು. ಫೆಬ್ರವರಿ 12ರವರೆಗೆ ಚಿಕಿತ್ಸೆ ನೀಡಿದರು ಫಲಕಾರಿಯಾಗಲಿಲ್ಲ. ಹೀಗಾಗಿ ಮೆದುಳು ನಿಷ್ಕ್ರೀಯವಾಗಿರುವುದನ್ನು ಕುಟುಂಬಸ್ಥರಿಗೆ ವೈದ್ಯರು ತಿಳಿಸಿದರು.
ಆಸ್ಪತ್ರೆಗೆ ಗಾನವಿಯ ಯಕೃತ್, 2 ಕಿಡ್ನಿ, ಹೃದಯನಾಳಗಳು, 2 ಕಾರ್ನಿಯಾಗಳನ್ನು ದಾನ ಮಾಡಿದ್ದಾರೆ. ಕುಟುಂಬಸ್ಥರ ಈ ನಿರ್ಧಾರಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರ ಧೈರ್ಯಕ್ಕೆ ಮೆಚ್ಚಬೇಕು. ಬದುಕಿರುವಾಗಲೂ ನರ್ಸ್ ಆಗಿ ಜನರ ಸೇವೆ ಮಾಡಿದ್ದಲ್ಲದೆ ಸತ್ತ ನಂತರವೂ ಗಾನವಿ ನೆರವಾಗಿದ್ದಾಳೆ.
22 ವರ್ಷದ ಗಾನವಿಯನ್ನು ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವಳ ಮೆದುಳು ನಿಷ್ಕ್ರೀಯಗೊಂಡ ವಿಷಯವನ್ನು ಅವಳ ಪೋಷಕರಿಗೆ ತಿಳಿಸಿದಾಗ ಅವರು ತಮ್ಮ ಮುಂದೆ ಬಾಳಿ ಬದುಕಬೇಕಾದ ಮಗಳು ಇನ್ನಿಲ್ಲ ಎಂಬ ವಿಷಯ ತಿಳಿದು ಕಣ್ಣೀರಾಕಿದರು. ಆಕೆಯಂತು ಇರುವುದಿಲ್ಲ ಅವಳ ಅಂಗಗಳನ್ನು ದಾನ ಮಾಡಿ ಬೇರೆಯವರಲ್ಲಿ ಮಗಳನ್ನು ನೋಡಬಹುದು ಎಂದು ಪೋಷಕರು ಆಕೆಯ ಕಣ್ಣು, ಯಕೃತ್, ತಲೆಕೂದಲನ್ನು ದಾನ ಮಾಡಿದ್ದಾರೆ.
ಗಾನವಿಯ ಅಕ್ಕ ಗೌತಮಿಗೆ ಇದೆ ಫೆಬ್ರುವರಿ 21 ರಂದು ಮದುವೆ ಫಿಕ್ಸ್ ಆಗಿತ್ತು ಗಾನವಿ ಬಟ್ಟೆ ತಂದುಕೊಟ್ಟಿದ್ದಾರೆ. ಅವಳನ್ನು ಸುತ್ತು ಬೂದಿ ಮಾಡುವ ಬದಲು ಅವಳ ಅಂಗ ದಾನ ಮಾಡಿ 7 ಜನರಿಗೆ ಸಹಾಯವಾಗಿದೆ. ಗಾನವಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.