ಕೊರೊನ ಮಹಾಮಾರಿಯು ಮೂಲತಃ ಚೀನಾದಿಂದ ಹಬ್ಬಿದ್ದು ಈಗ ಜಗತ್ತಿಗೆ ಹಬ್ಬಿದೆ. ಇದರ ಪರಿಣಾಮವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹೊಡೆತ ಬಿದ್ದಿದೆ. ವಿಶೇಷವಾಗಿ ಓದುವ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ.ಸುಮಾರು 8 ತಿಂಗಳುಗಳ ಕಾಲ ಶಾಲೆ ಇಲ್ಲದೇ ಮನೆಯಲ್ಲಿ ಇದ್ದಾರೆ. ವಿದ್ಯೆಯಿಂದ ವಂಚಿತವಾಗಬಾರದು ಎಂದು ಶಿಕ್ಷಕರು ಆನ್ಲೈನ್ ಕ್ಲಾಸ್ ಶುರು ಮಾಡಿದ್ದಾರೆ. ಇದೀಗ ನವೆಂಬರ್ ತಿಂಗಳಲ್ಲಿ ಶಾಲೆಗಳನ್ನು ಶುರು ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಅವರು ಮಾತನಾಡಿದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.
ಸಿ. ಎಮ್. ನೇತೃತ್ವದ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಹಂತ ಹಂತವಾಗಿ ಶುರುಮಾಡಲಾಗುವುದು. ಮೊದಲು ನವೆಂಬರ್ 17ರಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ಶುರು ಮಾಡಲಾಗುವುದು. ಅಂದರೆ ಇಂಜಿನಿಯರಿಂಗ್ ಕಾಲೇಜು, ಡಿಪ್ಲೊಮಾ ಕಾಲೇಜು, ಡಿಗ್ರಿ ಕಾಲೇಜು, ಪಿ.ಜಿ.ಗಳನ್ನು ಆರಂಭಿಸಲಾಗುವುದು. ಇದರಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಇದೆ. ಕಾಲೇಜಿಗೆ ಬೇಕಾದರೂ ಬರಬಹುದು. ಆನ್ಲೈನ್ ಕ್ಲಾಸ್ ಬೇಕಾದರೂ ಅಟೆಂಡ್ ಮಾಡಬಹುದು. ಎರಡನ್ನು ಬೇಕಾದರೂ ಬಳಸಿಕೊಳ್ಳಬಹುದು.
ಎಷ್ಟು ಜನ ಕಾಲೇಜಿಗೆ ಬರುತ್ತಾರೋ ಅದರ ಮೇಲೆ ಬ್ಯಾಚ್ ಗಳನ್ನು ಮಾಡಲಾಗುವುದು. ಮತ್ತೆ ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಸ್ಕ್, ಸಾನಿಟೈಸರ್ ಮತ್ತು ಟೆಸ್ಟಿಂಗ್ ಎಲ್ಲವನ್ನೂ ಮಾಡಲಾಗುವುದು. ಹಾಸ್ಟೇಲ್ ನಲ್ಲಿ ಉಳಿಯುವ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಹಾಗೂ ಅಂತರವನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬಂದು ಶಿಕ್ಷಣ ಪಡೆಯುವ ಅವಕಾಶ ಮಾಡಲಾಗುವುದು. ಪ್ರಾಕ್ಟಿಕಲ್ ಕ್ಲಾಸ್ ಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಯು.ಜಿ.ಸಿಯ ಪ್ರಕಾರ ಆಫ್ ಲೈನ್ ಕ್ಲಾಸ್ ಮಾಡಲಾಗುವುದು.
ಬಹಳ ವಿದ್ಯಾರ್ಥಿಗಳ ಬೇಡಿಕೆ ಇದೆ. ಕಾಲೇಜು ಶುರು ಮಾಡಿ ಎಂದು. ಶಿಕ್ಷಕರ ಸಭೆಯನ್ನು ಮಾಡಿ, ಪೂರ್ವಭಾವಿ ಸಾಕಷ್ಟು ಸಭೆಗಳನ್ನು ಮಾಡಲಾಗಿತ್ತು. ಎಲ್ಲಾ ಕಾಲೇಜುಗಳಲ್ಲಿ ಕಾರ್ಯಪಡೆಯನ್ನು ಇಡಲಾಗುತ್ತದೆ. ಸಾರಿಗೆ ವ್ಯವಸ್ಥೆ ಸಹ ಕಲ್ಪಿಸಲಾಗುತ್ತದೆ. ಲ್ಯಾಬ್ ಮತ್ತು ಗ್ರಂಥಾಲಯಗಳನ್ನು ತೆರೆಯಲಾಗುತ್ತದೆ. ರಾಜ್ಯದ ಎಲ್ಲಾ ಹಾಸ್ಟೆಲ್ ಗಳು ಆರಂಭವಾಗುತ್ತವೆ. ಯಾವುದೂ ಒತ್ತಾಯವಿಲ್ಲ. ವಿದ್ಯಾರ್ಥಿಗಳ ಆಸಕ್ತಿಗೆ ಬಿಟ್ಟಿದ್ದು. ಇವೆಲ್ಲ ಮಾಹಿತಿಗಳನ್ನು ಉಪಮುಖ್ಯಮಂತ್ರಿ ಆದ ಅಶ್ವಥ್ ನಾರಾಯಣ ಅವರು ನೀಡಿದ್ದಾರೆ.