ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ (NIACL) ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ. ನಲ್ಲಿ 500 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗೆ ಯಾವುದೇ ಡಿಗ್ರಿ ಆದವರು ಅರ್ಜಿಸಲ್ಲಿಸಬಹುದಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ. ಇದೆ ರೀತಿಯ ಉದ್ಯೋಗ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ಪಡೆಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.

ಹುದ್ದೆಯ ವಿವರ ಹೀಗಿದೆ: NIACL, ಭಾರತದ ಅತಿ ದೊಡ್ಡ ಜೀವೇತರ ವಿಮಾ ಕಂಪನಿ, ವಿವಿಧ ಹುದ್ದೆಗಳಿಗೆ ನಿರಂತರವಾಗಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ.

ಹುದ್ದೆಗಳ ಸಂಖ್ಯೆ ಹೀಗಿದೆ
ಎಡಬ್ಲುಎಸ್- 50
ಜನರಲ್- 260
ಪರಿಶಿಷ್ಟ ಜಾತಿ- 91
ಪರಿಶಿಷ್ಟ ಪಂಗಡ-51
ಒಬಿಸಿ- 48
ಒಟ್ಟು- 500 ಹುದ್ದೆಗಳು

ಉದ್ಯೋಗದ ಹೆಸರು: ಸಹಾಯಕ ಹುದ್ದೆಗಳು
ವಿದ್ಯಾರ್ಹತೆ:ಪದವಿ
ಸಂಬಳ: 22,405 ರಿಂದ 40,000 ರೂ
ವಯಸ್ಸಿನ ಮಿತಿ: 21 ರಿಂದ 30 ವರ್ಷ

ಅರ್ಜಿಶುಲ್ಕ ಎಷ್ಟು?
ಸಾಮಾನ್ಯ, ಇತರೆ ಅಭ್ಯರ್ಥಿಗಳು – ರೂ.850.
SC, ST, ಮಾಜಿ ಸೈನಿಕರು – 100 ರೂ

ಆಯ್ಕೆ ಪ್ರಕ್ರಿಯೆಯು ಹೇಗೆ?
ಪೂರ್ವಭಾವಿ ಪರೀಕ್ಷೆ (100 ಅಂಕಗಳು)
ಮುಖ್ಯ ಪರೀಕ್ಷೆ (250 ಅಂಕಗಳು)
ಪ್ರಾದೇಶಿಕ ಭಾಷಾ ಪರೀಕ್ಷೆ

ಪ್ರಮುಖ ದಿನಾಂಕಗಳು ಇಲ್ಲಿವೆ
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ ಡಿಸೆಂಬರ್ 17, 2024 ಆಗಿದೆ.
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜನವರಿ 1, 2025.
ಅರ್ಜಿಸಲ್ಲಿಸುವ ವೆಬ್‌ಸೈಟ್ – https://www.newindia.co.in/.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!