ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಪೋಷಕರಿಗೆ ದೊಡ್ಡ ಸಿಹಿ ಸುದ್ಧಿ ನೀಡಿದ್ದು , ಶಾಲಾ ಶುಲ್ಕವನ್ನು ಕಟ್ಟಲಾಗದೆ ಇದ್ದರೆ ಮಕ್ಕಳನ್ನು ಅನುತ್ತೀರ್ಣ ಗೊಳಿಸುವಂತಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಮೂಲಕ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ಇನ್ನುಮುಂದೆ ಭಯಪಡುವ ಅಗತ್ಯ ಇಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕರೋನವೈರಸ್ ಹಿನ್ನಲೆಯಲ್ಲಿ ಶಾಲೆಗಳು ನಡೆಯುತ್ತಿಲ್ಲ. ಇದರ ನಡುವೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿರುವ ಪಾಲಕರು ಮಕ್ಕಳ ಶಾಲೆಯ ವಾರ್ಷಿಕ ಶುಲ್ಕವನ್ನು ಸಹ ಕಟ್ಟಲಾಗಲಿಲ್ಲ. ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡಾಗಿನಿಂದ ದೇಶದ ಜನರ ಆರ್ಥಿಕ ಪರಿಸ್ಥಿತಿ ಹೇಗೆ ಹದಗೆಟ್ಟಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ.
ಇನ್ನು ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡಾಗಿನಿಂದ ದೇಶದಲ್ಲಿ ಶಾಲಾ ಕಾಲೇಜುಗಳನ್ನ ಇಂದಿಗೂ ಕೂಡ ತೆಗೆಯಲಾಗಿಲ್ಲ ಮತ್ತು ಮಕ್ಕಳ ಆನ್ಲೈನ್ ತರಗತಿಗಳೂ ಕೂಡ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಹೇಳಬಹುದು. ಇನ್ನು ದೇಶದಲ್ಲಿ ಶಾಲೆಗಳ ತೆರೆಯುವಿಕೆಗೆ ಕುರಿತಂತೆ ಇನ್ನು ಸರ್ಕಾರ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ ಮತ್ತು ಡಿಸೆಂಬರ್ ಅಂತ್ಯದ ತನಕ ಶಾಲೆ ಮತ್ತು ಕಾಲೇಜುಗಳನ್ನ ಯಾವುದೇ ಕಾರಣಕ್ಕೂ ತೆಗೆಯಬಾರದು ಎಂದು ಆದೇಶವನ್ನ ಕೂಡ ಹೊರಡಿಸಿದೆ.
ಇನ್ನು ಇದರ ನಡುವೆ ರಾಜ್ಯದಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ತಂದೆ ತಾಯಿ ಮತ್ತು ಮಕ್ಕಳ ಪೋಷಕರಿಗೆ ಈಗ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದ್ದು ಇನ್ನುಮುಂದೆ ತಂದೆ ತಾಯಿ ಮತ್ತು ಪೋಷಕರು ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಬಹುದು.
ರಾಜ್ಯದಲ್ಲಿ ಖಾಸಗಿ ಶಾಲೆಗಳು ಪೋಷಕರಿಂದ ಹಣವನ್ನ ವಸೂಲಿ ಮಾಡುತ್ತಿದೆ ಅನ್ನುವ ಕೆಲವು ದೂರುಗಳು ಕೆಲವು ದಿನಗಳಿಂದ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಶಾಲೆಗಳ ಶುಲ್ಕವನ್ನ ಕಡಿಮೆ ಮಾಡುವ ವಿಚಾರ ಇನ್ನೂ ಕೂಡ ಕೋರ್ಟಿನಲ್ಲಿ ಬಾಕಿ ಉಳಿದುಕೊಂಡಿದೆ. ಇನ್ನು ಈ ವರ್ಷ ಶಾಲಾ ಶುಲ್ಕವನ್ನ ಕಟ್ಟಡ ಮಕ್ಕಳ ಮುಂದಿನ ವರ್ಷಕ್ಕೆ ಪಾಸ್ ಮಾಡಲ್ಲ ಎಂದು ಯಾವುದೇ ಖಾಸಗಿ ಶಾಲೆಗಳು ತಂದೆ ತಾಯಿ ಮತ್ತು ಪೋಷಕರಿಗೆ ಹೇಳುವ ಹಾಗಿಲ್ಲ ಎಂದು ರಾಜ್ಯದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಿಗೆ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ.
ಇನ್ನು ಖಾಸಗಿ ಶಾಲೆಗಳ ಶಾಲಾ ಶುಲ್ಕದ ಕುರಿತಾಗಿ ಸೆಕೆಂಡ್ ಟರ್ಮ್ ಫೀಸ್ ಕಲೆಕ್ಷನ್ ಮಾಡಲು ಖಾಸಗಿ ಶಾಲೆಗಳು ಅನುಮತಿಯನ್ನ ಕೇಳಿದ್ದು ಸರ್ಕಾರ ಇದರ ಕುರಿತು ಇನ್ನೂಕೂಡಾ ಅನುಮತಿ ಕೊಟ್ಟಿಲ್ಲ. ಶಾಲೆಯ ಫೀಸ್ ಕೊಟ್ಟಿಲ್ಲ ಮತ್ತು ಮಕ್ಕಳನ್ನ ಮುಂದಿನ ವರ್ಷಕ್ಕೆ ಪಾಸ್ ಮಾಡುವುದಿಲ್ಲ ಎಂದು ಖಾಸಗಿ ಶಾಲೆಗಳಿಗೆ ಮಕ್ಕಳ ಪೋಷಕರಿಗೆ ಹೇಳುವಂತಿಲ್ಲ. ಕರೋನ ಮಹಾಮಾರಿಯ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳು ನಡೆಯುತ್ತಿಲ್ಲ ಮತ್ತು ಈ ಹಿನ್ನಲೆಯಲ್ಲಿ ಮಕ್ಕಳನ್ನ ಶಾಲೆಗೆ ಸೇರಿಸಿರುವ ಪೋಷಕರಿಗೆ ಮಕ್ಕಳ ಶಾಲೆಯ ಶುಲ್ಕಗಳನ್ನ ಕಟ್ಟಲು ಸಾಧ್ಯವಾಗುತ್ತಿಲ್ಲ, ಇನ್ನು ಕೆಲವು ಶಾಲೆಗಳು ಶಾಲೆಯ ಶುಲ್ಕವನ್ನ ಕಟ್ಟದೆ ಇದ್ದರೆ ನಿಮ್ಮ ಮಕ್ಕಳನ್ನ ಅನುತ್ತೀರ್ಣ ಮಾಡುತ್ತೇವೆ ಎಂದು ಬೇಧರಿಕೆಯನ್ನ ಹಾಕುತ್ತಿದೆ ಅನ್ನುವ ಕಾರಣಕ್ಕೆ ಖಾಸಗಿ ಶಾಲೆಗಳಿಗೆ ಆದೇಶವನ್ನ ಹೊರಡಿಸಲಿದೆ. ಇನ್ನು ಶುಲ್ಕ ಕಟ್ಟದ ಕಾರಣಕ್ಕೆ ಮಕ್ಕಳನ್ನ ಅನುತ್ತೀರ್ಣ ಮಾಡುವ ಹಾಗಿಲ್ಲ, ಮಕ್ಕಳ ತಂದೆ ತಾಯಿಗಳು ಮಕ್ಕಳ ಸ್ಕೂಲ್ ಫೀಸ್ ಕಟ್ಟಲಿ ಅಥವಾ ಕಟ್ಟದೆ ಇರಲಿ ಮಕ್ಕಳನ್ನ ಯಾವುದೇ ಕಾರಣಕ್ಕೂ ಅನುತ್ತೀರ್ಣ ಮಾಡುವ ಹಾಗಿಲ್ಲ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.