ಒಂದು ಹೊಸ ವರ್ಷ, ಅಥವಾ ಹೊಸ ತಿಂಗಳು ಶುರುವಾಗುತ್ತಿದೆ ಎಂದರೆ ಯಾವುದಾದರೂ ಒಂದು ಹೊಸ ನಿಯಮ ಜಾರಿಗೆ ಬರುತ್ತದೆ. ಇದೀಗ 2024ರ ಹೊಸ ವರ್ಷ ಶುರುವಾಗಿದೆ, ಈ ದಿನ ಸಿಮ್ ಕಾರ್ಡ್, ಬ್ಯಾಂಕ್ ಕೆಲಸ, ಐಟಿಆರ್, ಡಿಮ್ಯಾಟ್ ಅಕೌಂಟ್ ಈ ವಿಚಾರಗಳಲ್ಲಿ ಕೆಲವು ಪ್ರಮುಖ ನಿಯಮಗಳ ಬದಲಾವಣೆ ಆಗುತ್ತಿದ್ದು, ಎಲ್ಲರೂ ಕೂಡ ಈ ನಿಯಮಗಳನ್ನು ಪಾಲಿಸಬೇಕು. ಅವುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ಐಟಿಆರ್ ಸಲ್ಲಿಕೆ :- 2022-23ರ ವರ್ಷದ ಐಟಿಆರ್ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿತ್ತು. ಈ ದಿವಸದ ಒಳಗೆ ಐಟಿಆರ್ ಸಲ್ಲಿಸದೇ ಇರುವವರ ಮೇಲೆ ಸೆಕ್ಷನ್ 234F ನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ, ಲೇಟ್ ಆಗಿ ಐಟಿಆರ್ ಸಲ್ಲಿಸುವವರು ₹5,000 ದಂಡ ಪಾವತಿ ಮಾಡಬೇಕಾಗುತ್ತದೆ.

ಬ್ಯಾಂಕ್ ಲಾಕರ್ ಅಗ್ರಿಮೆಂಟ್ :- ಬ್ಯಾಂಕ್ ಗಳಲ್ಲಿ ಲಾಕರ್ ಹೊಂದಿರುವವರು ಹೊಸ ಅಗ್ರಿಮೆಂಟ್ ಗೆ ಸೈನ್ ಹಾಕಬೇಕು. ಬ್ಯಾಂಕ್ ಲಾಕರ್ ನಿಯಮವನ್ನು ಪರಿಷ್ಕರಿಸಲಾಗಿದೆ. ಈ ಬಗ್ಗೆ ಲಾಕರ್ ಹೊಂದಿರುವ ಗ್ರಾಹಕರಿಗೆ SMS ಮೂಲಕ ವಿಷಯ ಬಂದಿರುತ್ತದೆ. ಗ್ರಾಹಕರು ಲಾಕರ್ ಅಗ್ರಿಮೆಂಟ್ ಗೆ ಸೈನ್ ಮಾಡಬೇಕು.

ಹೊಸ ಸಿಮ್ ಖರೀದಿಗೆ KYC ಕಡ್ಡಾಯ :- ಒಬ್ಬರೇ ವ್ಯಕ್ತಿ ಹೆಚ್ಚು ಸಿಮ್ ಗಳನ್ನು ಖರೀದಿ ಮಾಡಿ, ಮೋಸ ಮಾಡುತ್ತಿರುವ ಕಾರಣ ಇನ್ನುಮುಂದೆ ಗಿಸ ಸಿಮ್ ಖರೀದಿ ಮಾಡುವುದಕ್ಕೆ KYC ಮಾಡಿಸುವುದು ಕಡ್ಡಾಯ ಆಗಿರುತ್ತದೆ. Ekyc ಮಾಡಿಸುವುದು ಟೆಲಿಕಾಂ ಕಂಪನಿಗಳು ಮಾತ್ರ. ಇಂದಿನಿಂದ ಹೊಸ ಸಿಮ್ ಖರೀದಿ ಮಾಡುವವರು ಈ ನಿಯಮ ಪಾಲಿಸಬೇಕು.

ನಾಮಿನಿ ಸೇರ್ಪಡೆ ಕಡ್ಡಾಯ :- ಇನ್ನುಮುಂದೆ ಡಿಮ್ಯಾಟ್ ಅಕೌಂಟ್ ಹೊಂದಿರುವವರು ತಮ್ಮ ಖಾತೆಗೆ ನಾಮಿನಿಯನ್ನು ಕಡ್ಡಾಯಗೊಳಿಸಿ ಇಡಬೇಕು. ಈ ಒಂದು ಪ್ರಕ್ರಿಯೆಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಗಿದೆ.

ಆಕ್ಟಿವ್ ಇಲ್ಲದ UPI ID ಗಳನ್ನು ಕ್ಲೋಸ್ ಮಾಡಲಾಗುತ್ತದೆ :- ಕಾರ್ಪೊರೇಶನ್ ಆಫ್ ಇಂಡಿಯಾ ಇದೀಗ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಒಂದು ವೇಳೆ ಹೆಚ್ಚು ಕಾಲದಿಂದ ಬಳಸದೇ ಇರುವ ಯುಪಿಐ ಐಡಿಗಳನ್ನು ಕ್ಲೋಸ್ ಮಾಡಲಾಗುತ್ತದೆ.

ಪಿಎಮ್ ಉಜ್ವಲಾ ಯೋಜನೆಗೆ ಕೊನೆಯ ದಿನಾಂಕ :- ಪಿಎಮ್ ಉಜ್ವಲಾ ಯೋಜನೆಯ ಮೂಲಕ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಕೊಡಲಾಗುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರದಲ್ಲಿದ್ದು, ಆಸಕ್ತರು ಬೇಗ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!