New BPL ration Card Updates: ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು 2 ವರ್ಷಗಳ ಹಿಂದೆಯೇ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳು ಶುರುವಾದ ನಂತರ ಇನ್ನಷ್ಟು ಜನರು ಅಪ್ಡೇಟ್ ಗಾಗಿ ಮತ್ತು ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಈಗ ಸಿಕ್ಕಿರುವ ಮಾಹಿತಿಯ ಅನುಸಾರ, ಇನ್ಮುಂದೆ ಯಾರಿಗೂ ಕೂಡ ಹೊಸ ರೇಷನ್ ಕಾರ್ಡ್ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಏನು ಎಂದು ತಿಳಿಸುತ್ತೇವೆ ನೋಡಿ..
ಹೊಸ ವರ್ಷದಿಂದ ಯಾರಿಗೂ ಕೂಡ ಹೊಸದಾಗಿ ರೇಷನ್ ಕಾರ್ಡ್ ಸಿಗುವುದಿಲ್ಲ. ನಮ್ಮ ರಾಜ್ಯದಲ್ಲಿ ಪ್ರಸ್ತುತ 1,13,84,605 ಜನರ ಹತ್ತಿರ ರೇಷನ್ ಕಾರ್ಡ್ ಇದೆ. ಆದರೆ ಬೇರೆ ರಾಜ್ಯಗಳಲ್ಲಿ ಇಷ್ಟೊಂದು ಜನರ ಬಳಿ ರೇಷನ್ ಕಾರ್ಡ್ ಇಲ್ಲ. ಗುಜರಾತ್ ನಲ್ಲಿ 76,೦7,818 ರೇಷನ್ ಕಾರ್ಡ್ ದಾರರು ಇದ್ದಾರೆ, ಮಹಾರಾಷ್ಟ್ರದಲ್ಲಿ 1,57,16,582 ರೇಷನ್ ಕಾರ್ಡ್ ದಾರರಿದ್ದಾರೆ, ತೆಲಂಗಾಣದಲ್ಲಿ 54,೦7,637, ತಮಿಳುನಾಡಿನಲ್ಲಿ 1,11,41,೦76, ಕೇರಳದಲ್ಲಿ 41,28,595, ಗೋವಾದಲ್ಲಿ 1,43,918 ರೇಷನ್ ಕಾರ್ಡ್ ದಾರರಿದ್ದಾರೆ.
ಇಷ್ಟು ಹೆಚ್ಚಿನ ರೇಷನ್ ಕಾರ್ಡ್ ವಿತರಣೆ ಇರುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ವಿತ್ತೀಯ ಕೊರತೆ ಆಗಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತನಾಡಿ, ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಅನುಸಾರ ಮೂರು ನಿಯಮಗಳ ಪಾಲನೆ ಆಗಬೇಕು. ಇವುಗಳಲ್ಲಿ 2023-24ನೇ ಸಾಲಿಜ ಬಜೆಟ್ ನಲ್ಲಿ 2 ಮಾನದಂಡಗಳನ್ನು ಉಳಿಸಿ ಆರ್ಥಿಕ ಶಿಸ್ತನ್ನು ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ವಿತ್ತೀಯ ಕಾಯ್ದೆಯ ಉಲ್ಲಂಘನೆ ಆಗಿದೆ..
ಈ ಕಾರಣಕ್ಕೆ ಮತ್ತೆ ಹೊಸ ರೇಷನ್ ಕಾರ್ಡ್ ಗಳ ವಿತರಣೆ ಮಾಡಲು ಸರ್ಕಾರದಿಂದ ಸಾಧ್ಯ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಹೊಸ ರೇಶನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವ ಜನರಿಗೆ ಇದು ಆಘಾತಕಾರಿ ವಿಚಾರ ಆಗಿದೆ. ಮತ್ತೆ ಯಾವಾಗ ಸರ್ಕಾರವು ಹೊಸ ರೇಷನ್ ಕಾರ್ಡ್ ವಿತರಣೆ ಮಾಡುತ್ತದೆ ಎಂದು ಕಾದು ನೋಡಬೇಕಿದೆ.